ಬೆಂಗಳೂರು: ವಿರಾಟ್ ಕೊಹ್ಲಿ ಕ್ರಿಕೆಟ್ (Virat Kohli) ಕ್ಷೇತ್ರದ ಜಾಗತಿಕ ಅಂಬಾಸಿಡರ್. 25 ಕೋಟಿಗೂ ಅಧಿಕ ಸೋಶಿಯಲ್ ಮೀಡಿಯಾ ಫಾಲೋಯರ್ಸ್ಗಳನ್ನು ಹೊಂದಿರುವ ಕ್ರಿಕೆಟ್ ಇಲ್ಲದ ದೇಶಗಳಲ್ಲಿಯೂ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಅವರಿಂದಾಗಿಯೇ ಹಲವು ದೇಶಗಳಿಗೆ ಕ್ರಿಕೆಟ್ ಜ್ವರ ಹರಡಿದೆ. ತಮ್ಮ ಬ್ಯಾಟಿಂಗ್ ವೈಭವದ ಮೂಲಕ ಆಧನಿಕ ಕ್ರಿಕೆಟ್ನ ಐಕಾನ್ ಎಂದೇ ಎನಿಸಿಕೊಂಡಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ವಿರಾಟ್ ಕೊಹ್ಲಿಯ ಮೇಣದ ಪ್ರತಿಮೆಯೊಂದು ಸಿಂಗಾಪುರದಲ್ಲಿ ಅನಾವರಣಗೊಂಡಿದೆ.
ಸಿಂಗಾಪುರದ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂ ವಿರಾಟ್ ಕೊಹ್ಲಿ ಅವರ ಮೇಣದ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಕೊಹ್ಲಿ, ಭಾರತ ಕಂಡ ಅತ್ಯುತ್ತಮ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಭಾರತದ ಮಾಜಿ ನಾಯಕ ಸಾಟಿಯಿಲ್ಲದ ಬ್ಯಾಟಿಂಗ್ ಮತ್ತು ಪ್ರವೀಣ ನಾಯಕತ್ವ ಕೌಶಲ್ಯಗಳಿಗೆ ಹೆಸರುವಾಸಿಯಾಗಿದ್ದಾರೆ. ಹೀಗಾಗಿ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಗಿದೆ.
ಕೊಹ್ಲಿಯ ಮೇಣದ ಪ್ರತಿಮೆಗೆ ಅವರೇ ದಾನ ನೀಡಿರುವ ಟೀಮ್ ಇಂಡಿಯಾದ ಅಧಿಕೃತ ಕ್ರಿಕೆಟ್ ಕಿಟ್ ಅನ್ನು ಬಳಸಲಾಗಿದೆ. ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ, ಯಾವೊ ಮಿಂಗ್ ಮತ್ತು ಸಚಿನ್ ತೆಂಡೂಲ್ಕರ್ ಅವರ ಪ್ರತಿಮೆಗಳನ್ನು ಹೊಂದಿರುವ ಕ್ರೀಡಾ ವಲಯದಲ್ಲಿ ಕೊಹ್ಲಿಯ ಪ್ರತಿಮೆಯನ್ನೂ ಇರಿಸಲಾಗಿದೆ.
ಸಿಂಗಾಪುರದ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂನ ಜನರಲ್ ಮ್ಯಾನೇಜರ್ ಸ್ಟೀವನ್ ಚುಂಗ್ ಮಾತನಾಡಿ, ಕೊಹ್ಲಿಯ ಮೇಣದ ಪ್ರತಿಮೆಯನ್ನು ಸೇರಿಸಲು ಹೆಮ್ಮೆಪಡುತ್ತೇವೆ ಎಂದು ಹೇಳಿದ್ದಾರೆ.
“ನಮ್ಮ ಕ್ರೀಡಾ ಐಕಾನ್ಗಳ ಸಾಲಿಗೆ ವಿರಾಟ್ ಕೊಹ್ಲಿಯ ಅಂಕಿಅಂಶಗಳನ್ನೂ ಸೇರಿಸಲು ನಾವು ಹೆಮ್ಮೆಪಡುತ್ತೇವೆ. ಉತ್ಕೃಷ್ಟತೆಗೆ ಅವರ ಅಚಲ ಬದ್ಧತೆ, ಅವರ ವರ್ಚಸ್ವಿ ವ್ಯಕ್ತಿತ್ವವು ಲಕ್ಷಾಂತರ ಜನರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದೆ. ವಿಶ್ವದಾದ್ಯಂತದ ಕೊಹ್ಲಿ ಅಭಿಮಾನಿಗಳು ಈಗ ಸಿಂಗಾಪುರದ ಮೇಡಮ್ ಟುಸ್ಸಾಡ್ಸ್ ಮ್ಯೂಸಿಯಂಗೆ ಬಂದು ತಮ್ಮ ಹೀರೋ ಜತೆ ಹೊಸ ಸಂಪರ್ಕ ಸಾಧಿಸಬಹುದು.” ಎಂದು ಟ್ವೀಟ್ ಮಾಡಿದ್ದಾರೆ.
ಕೊಹ್ಲಿಯಿಂದ ಧನ್ಯವಾದ
ಜೀವಮಾನದ ಸಾಧನೆಗಾಗಿ ತಮ್ಮನ್ನು ಆಯ್ಕೆ ಮಾಡಿದ್ದಕ್ಕಾಗಿ ವಸ್ತುಸಂಗ್ರಹಾಲಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.. ಪ್ರತಿಭಾವಂತ ಕಲಾವಿದರ ತಂಡವು ರೂಪಿಸಿದ ಈ ವಿಶಿಷ್ಟ ಪ್ರತಿಮೆಯು ಪ್ರತಿಯೊಬ್ಬರಿಗೂ ಭಾರತದ ಕ್ರೀಡಾ ಐಕಾನ್ ನೊಂದಿಗೆ ಹತ್ತಿರವಾಗಲು ಸ್ಮರಣೀಯ ಅವಕಾಶವನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.
ನನ್ನ ಆಕಾರವನ್ನು ರೂಪಿಸುವಲ್ಲಿ ಮಾಡಿದ ಪ್ರಯತ್ನಗಳು ಮತ್ತು ನಂಬಲು ಅಸಾಧ್ಯವಾದ ಕೆಲಸವನ್ನು ನಾನು ಪ್ರಾಮಾಣಿಕವಾಗಿ ಪ್ರಶಂಸಿಸುತ್ತೇನೆ. ಈ ಜೀವಮಾನದ ಅನುಭವಕ್ಕಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಮೇಡಮ್ ಟುಸ್ಸಾಡ್ಸ್ ಗೆ ಧನ್ಯವಾದಗಳು. ನನ್ನ ಅಭಿಮಾನಿಗಳ ಪ್ರೀತಿ ಮತ್ತು ಬೆಂಬಲಕ್ಕೆ ನಾನು ಆಭಾರಿಯಾಗಿದ್ದೇನೆ ಎಂದು ಕೊಹ್ಲಿ ಹೇಳಿದ್ದಾರೆ.
ಈ ಸುದ್ದಿಗಳನ್ನೂ ಓದಿ
Jasprit Bumrah : ಬುಮ್ರಾ ನೋಡಿ ಕಲಿ; ಶಾಹೀನ್ ಶಾ ಅಫ್ರಿದಿಗೆ ಬುದ್ಧಿ ಹೇಳಿದ ಪಾಕ್ ಮಾಜಿ ಕ್ರಿಕೆಟಿಗ
Los Angeles Olympics 2028 : ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಯಾಗಿದ್ದಕ್ಕೆ ನೀತಾ ಅಂಬಾನಿ ಸಂತಸ
ICC World Cup 2023: ವಿಶ್ವಕಪ್ ಇತಿಹಾಸದಲ್ಲೇ ಆಸ್ಟ್ರೇಲಿಯಾಕ್ಕೆ ಭಾರಿ ಮುಖಭಂಗ
ಏತನ್ಮಧ್ಯೆ, ಸಿಂಗಾಪುರ್ ಕ್ರಿಕೆಟ್ ಅಸೋಸಿಯೇಷನ್ನ ಅಧ್ಯಕ್ಷ ಮಹಮೂದ್ ಗಜ್ನವಿ ಅವರು ಸಿಂಗಾಪುರದಲ್ಲಿ ಲೆಜೆಂಡರಿ ಕ್ರಿಕೆಟಿಗನ ವ್ಯಕ್ತಿತ್ವವನ್ನು ಹೊಂದಲು ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.
“ಸಿಂಗಾಪುರದಲ್ಲಿ ಆಧುನಿಕ ಕ್ರಿಕೆಟ್ನ ಶ್ರೇಷ್ಠ ಆಟಗಾರನ ಪ್ರತಿಮೆ ಸ್ಥಾಪಿಸಲು ನಾವು ರೋಮಾಂಚನಗೊಂಡಿದ್ದೇವೆ. ವಿರಾಟ್ ಕೊಹ್ಲಿ ಶಕ್ತಿ, ಬದ್ಧತೆ ಮತ್ತು ಕೌಶಲ್ಯದ ಸಂಕೇತ” ಎಂದು ಗಜ್ನವಿ ಹೇಳಿದ್ದಾರೆ.
ಕೊಹ್ಲಿಯಿಂದಲೇ ಏಷ್ಯಾ ಕಪ್ಗೆ ಕ್ರಿಕೆಟ್ ಸೇರ್ಪಡೆ
ಏಷ್ಯನ್ ಗೇಮ್ಸ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಅದ್ಭುತ ಯಶಸ್ಸನ್ನು ಸಾಧಿಸಿದ ನಂತರ, 2028 ರ ಲಾಸ್ ಏಂಜಲೀಸ್ ಒಲಿಂಪಿಕ್ಸ್‌ಗೆ ಕ್ರಿಕೆಟ್ ಸೇರ್ಪಡೆಗೊಂಡಿದೆ. ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸೋಮವಾರ ಅಧಿಕೃತವಾಗಿ ಕ್ರಿಕೆಟ್ ಅನ್ನು ಅನುಮೋದಿಸಿದೆ. ಪುರುಷರ ಮತ್ತು ಮಹಿಳಾ ಟಿ 20 ಪಂದ್ಯಗಳನ್ನು ಒಳಗೊಂಡಿರುವ ಕ್ರಿಕೆಟ್ ಸೇರ್ಪಡೆಯು ಇತಿಹಾಸ ಎನಿಸಿಕೊಳ್ಳಲಿದೆ. 1900 ರ ನಂತರ ಕ್ರಿಕೆಟ್ ಮೊದಲ ಬಾರಿ ಒಲಿಂಪಿಕ್ಸ್ನಲ್ಲಿ ಪ್ರದರ್ಶನಗೊಳ್ಳಲಿದೆ.
ಲಾಸ್ ಏಂಜಲೀಸ್ ಒಲಿಂಪಿಕ್ಸ್ ಆಯೋಜಕ ಸಮಿತಿ ಅಧ್ಯಕ್ಷ ನಿಕೊಲೊ ಕ್ಯಾಂಪ್ರಿಯಾನಿ ಯುನೈಟೆಡ್ ಸ್ಟೇಟ್ಸ್ನಲ್ಲಿ ಕ್ರಿಕೆಟ್ನ ಜನಪ್ರಿಯತೆಯ ಬಗ್ಗೆ ಸುದೀರ್ಘವಾಗಿ ಮಾತನಾಡಿದರು. ಮುಂದಿನ ವರ್ಷ ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಮತ್ತು ಮೇಜರ್ ಲೀಗ್ ಕ್ರಿಕೆಟ್ನ ಉದ್ಘಾಟನಾ ಋತುವು ಈ ಮಹತ್ವದ ನಿರ್ಧಾರಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದೆ ಎಂದು ಹೇಳಲಾಗಿದೆ. ಜತೆಗೆ ಮುಂಬಯಿ ಇಂಡಿಯನ್ಸ್ ತಂಡದ ಮಾಲಕಿ ಹಾಗೂ ಐಒಸಿ ಸದಸ್ಯರಾಗಿರುವ ನೀತಾ ಅಂಬಾನಿಯೂ ಅದಕ್ಕಾಗಿ ಶ್ರಮಿಸಿದ್ದಾರೆ. ಆದರೆ, ಇವೆಲ್ಲದಕ್ಕಿಂತ ಹೆಚ್ಚಾಗಿ ಟೀಮ್ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿಯೂ (Virat Kohli) ಜನಪ್ರಿಯತೆಯೂ ಎಂದು ಹೇಳಲಾಗುತ್ತಿದೆ.
ಕೊಹ್ಲಿ ಕ್ರಿಕೆಟ್ನ ಜಾಗತಿಕ ರಾಯಭಾರಿಯಾಗಿದ್ದಾರೆ. ಮೇ ತಿಂಗಳಲ್ಲಿ ಇನ್ಸ್ಟಾಗ್ರಾಮ್ನಲ್ಲಿ 25 ಕೋಟಿ ಫಾಲೋವರ್ಸ್ ಪಡೆದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇನ್ಸ್ಟಾಗ್ರಾಮ್ನಲ್ಲಿ ಫಾಲೋವರ್ಸ್ ಹೊಂದಿರುವ ಕ್ರಿಸ್ಟಿಯಾನೊ ರೊನಾಲ್ಡೊ (58 ಕೋಟಿ ) ಮತ್ತು ಲಿಯೋನೆಲ್ ಮೆಸ್ಸಿ (46 ಕೋಟಿ) ನಂತರದ ಸ್ಥಾನದಲ್ಲಿದ್ದಾರೆ. ಕೊಹ್ಲಿಯ ವ್ಯಾಪ್ತಿ ಮತ್ತು ಸ್ಟಾರ್ಡಮ್ ಪ್ರಪಂಚದಾದ್ಯಂತ ಹರಡಿದೆ. ನಿಕೊಲೊ ಕ್ಯಾಂಪ್ರಿಯಾನಿ ಕೂಡ ಕೊಹ್ಲಿಯ ಬಗ್ಗೆ ತಿಳಿದುಕೊಂಡಿದ್ದಾರೆ.