Site icon Vistara News

Madrid Open 2024: ಫಿಟ್​ನೆಸ್​ ಸಲುವಾಗಿ ಮ್ಯಾಡ್ರಿಡ್ ಓಪನ್‌ನಿಂದ ಹಿಂದೆ ಸರಿದ ಹಾಲೆಪ್‌

Madrid Open 2024

ಬೂಖರೆಸ್ಟ್‌(ರೊಮೇನಿಯಾ): ಡೋಪಿಂಗ್‌ ಪ್ರಕರಣದಿಂದ ಮುಕ್ತರಾಗಿರುವ ರೊಮೇನಿಯಾದ ಟೆನಿಸ್‌ ತಾರೆ, 2 ಗ್ರ್ಯಾನ್‌ ಸ್ಲಾಂ ವಿಜೇತೆ ಸಿಮೋನಾ ಹಾಲೆಪ್‌(Simona Halep) ಮ್ಯಾಡ್ರಿಡ್ ಓಪನ್‌ನಿಂದ(Madrid Open 2024) ಹಿಂದೆ ಸರಿದಿದ್ದಾರೆ. ಫಿಟ್​ನೆಸ್​ ಕಂಡುಕೊಳ್ಳುವ ಸಲುವಾಗಿ ಅವರು ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿಸಿದ್ದಾರೆ.

ಉದ್ದೀಪನ ಮದ್ದು ಸೇವನೆ ನಿಯಮ ಉಲ್ಲಂಘನೆಗಾಗಿ ವಿಶ್ವದ ಮಾಜಿ ಅಗ್ರಮಾನ್ಯ ಟೆನಿಸ್‌ ಆಟಗಾರ್ತಿ ಸಿಮೊನಾ ಹಾಲೆಪ್ ಅವರಿಗೆ 2022ರ ಅಕ್ಟೋಬರ್‌ನಲ್ಲಿ 4 ವರ್ಷಗಳ ನಿಷೇಧ ಹೇರಿಲಾಗಿತ್ತು. ಇಂಟರ್‌ನ್ಯಾಷನಲ್‌ ಟೆನಿಸ್‌ ಇಂಟೆಗ್ರಿಟಿ ಏಜನ್ಸಿಯೂ ಅಂದು ಹಾಲೆಪ್‌ ನಿಷೇಧ ಶಿಕ್ಷೆಯನ್ನು ಪ್ರಕಟಿಸಿತ್ತು. ನಿಷೇಧ ಅವಧಿ ಇಳಿಸಲು ಕ್ರೀಡಾ ಮಧ್ಯಸ್ಥಿಕೆ ನ್ಯಾಯಾಲಯಕ್ಕೆ ಹಾಲೆಪ್ ಮನವಿ ಮಾಡಿದ್ದರು. ಅವರ ಕೋರಿಕೆ ಮನ್ನಣೆ ನೀಡಿದ ನ್ಯಾಯಾಲಯ ನಿಷೇಧ ಅವಧಿಯನ್ನು 9 ತಿಂಗಳಿಗೆ ಇಳಿಕೆ ಮಾಡಿದೆ. 2023ರ ಜುಲೈ ವೇಳೆಗಾಗಲೇ 9 ತಿಂಗಳ ನಿಷೇಧ ಅವಧಿ ಮುಕ್ತಾಯಗೊಂಡಿದ್ದರಿಂದ ಹಾಲೆಪ್‌ ಅವರಿಗೆ 2 ತಿಂಗಳ ಹಿಂದಷ್ಟೇ ಅಂತಾರಾಷ್ಟ್ರೀಯ ಟೆನಿಸ್‌ನಲ್ಲಿ ಸ್ಪರ್ಧಿಸಲು ಅವಕಾಶ ನೀಡಲಾಗಿತ್ತು.

32 ವರ್ಷದ ಸಿಮೋನಾ ಹಾಲೆಪ್​ಗೆ ನಿಷೇಧ ಶಿಕ್ಷೆಯಿಂದಾಗಿ ಹಲವು ಟೂರ್ನಿಗಳು ಕೈ ತಪ್ಪಿ ಹೋಗಿತ್ತು. ಸರಿ ಸುಮಾರು 18 ತಿಂಗಳಿನಿಂದ ಟೆನಿಸ್​ ಆಡದ ಕಾರಣ ಮತ್ತೆ ಉನ್ನತ ಮಟ್ಟದಲ್ಲಿ ಸ್ಪರ್ಧಿಸಲು ದೈಹಿಕವಾಗಿ ಸಿದ್ಧರಾಗುವ ನಿಟ್ಟಿನಲ್ಲಿ ಫಿಟ್​ನೆಸ್​ ಮೊರೆ ಹೋಗಲು ನಿರ್ಧರಿಸಿದ್ದಾರೆ. ಇದೇ ಕಾರಣದಿಂದ ಅವರು ಮ್ಯಾಡ್ರಿಡ್ ಓಪನ್‌ನಿಂದ ಹಿಂದೆ ಸರಿದಿರುವುದಾಗಿ ತಿಳಿಸಿದ್ದಾರೆ.

ಇದನ್ನೂ ಓದಿ Simona Halep: ನಿಷೇಧ ಮುಕ್ತರಾದ ಹಾಲೆಪ್‌ ಮಿಯಾಮಿ ಓಪನ್​ನಲ್ಲಿ ಕಣಕ್ಕೆ

“ದುರದೃಷ್ಟವಶಾತ್ ನನ್ನ ದೇಹವು ಸಿದ್ಧವಾಗಲು ಸ್ವಲ್ಪ ಹೆಚ್ಚು ಸಮಯ ಬೇಕಾಗುತ್ತದೆ ಮತ್ತು ಮ್ಯಾಡ್ರಿಡ್‌ನಲ್ಲಿ ಆಡದಿರಲು ನಾನು ಕಠಿಣ ನಿರ್ಧಾರವನ್ನು ತೆಗೆದುಕೊಂಡಿದ್ದೇನೆ” ಎಂದು ಅವರು ಎಕ್ಸ್‌ನಲ್ಲಿ ಬರೆದಿದ್ದಾರೆ.

ಟೆನಿಸ್​ಗೆ ವಿದಾಯ ಹೇಳಿದ ಮುಗುರುಜಾ


ಸ್ಪೇನಿನ ಖ್ಯಾತ ಟೆನಿಸ್​ ಆಟಗಾರ್ತಿ, ಎರಡು ಬಾರಿಯ ಗ್ರ್ಯಾನ್‌ಸ್ಲ್ಯಾಮ್ ಚಾಂಪಿಯನ್, ಮಾಜಿ ವಿಶ್ವ ನಂ.1 ಆಟಗಾರ್ತಿ ಗಾರ್ಬಿನ್‌ ಮುಗುರುಜಾ(Garbine Muguruza) ಅವರು ಟೆನಿಸ್​ಗೆ ವಿದಾಯ(Garbine Muguruza retirement) ಹೇಳಿದ್ದಾರೆ. ಗ್ರ್ಯಾನ್ ಸ್ಲ್ಯಾಮ್ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಮೆರಿಕದ ವಿಲಿಯಮ್ಸ್ ಸಹೋದರಿಯರನ್ನು ಸೋಲಿಸಿದ ಏಕೈಕ ಆಟಗಾರ್ತಿ ಎಂಬ ಹೆಗ್ಗಳಿಕೆ ಅವರದು.

30 ವರ್ಷದ ಗಾರ್ಬಿನ್‌ ಮುಗುರುಜಾ, ಸುದ್ದಿಗೋಷ್ಠಿ ನಡೆಸಿ ತಮ್ಮ ವಿದಾಯವನ್ನು ಪ್ರಕಟಿಸಿದರು. ‘ಇದು ನಿವೃತ್ತಿ ಹೊಂದುವ ಸಮಯ ಮತ್ತು ನನ್ನ ಜೀವನದಲ್ಲಿ ಹೊಸ ಅಧ್ಯಾಯ ತೆರೆಯುವ ಸಮಯ ಎಂದು ಭಾವಿಸುವೆ’ ಎಂದು ಹೇಳುವ ಮೂಲಕ ತನ್ನ ನಿವೃತ್ತಿಯನ್ನು ಪ್ರಕಟಿಸಿದ್ದರು.

2016ರ ಫ್ರೆಂಚ್ ಓಪನ್ ಫೈನಲ್‌ ನಲ್ಲಿ ಸೆರೆನಾ ವಿಲಿಯಮ್ಸ್(Serena Williams) ಮತ್ತು 2017ರ ವಿಂಬಲ್ಡನ್ ಫೈನಲ್‌ನಲ್ಲಿ ವೀನಸ್ ವಿಲಿಯಮ್ಸ್(Venus Williams) ಅವರನ್ನು ಮುಗುರುಜಾ ಸೋಲಿಸಿ ಗ್ರ್ಯಾನ್‌ಸ್ಲ್ಯಾಮ್ ಪ್ರಶಸ್ತಿ ಗೆದ್ದಿದ್ದರು. ತಮ್ಮ ವೃತ್ತಿಜೀವನದಲ್ಲಿ ಒಟ್ಟು 10 ಪ್ರಮುಖ ಪ್ರಶಸ್ತಿ ಗೆದ್ದಿದ್ದಾರೆ. 2015ರ ವಿಂಬಲ್ಡನ್ ಮತ್ತು 2020ರ ಆಸ್ಟ್ರೇಲಿಯನ್ ಓಪನ್‌ ಟೂರ್ನಿಯಲ್ಲಿ ರನ್ನರ್ ಅಪ್ ಸ್ಥಾನ ಪಡೆದಿದ್ದರು. ಕೊನೆಯ ಬಾರಿಗೆ ಅವರು ಗೆಲುವು ಸಾಧಿಸಿದ್ದು, 2021 ರ ಎಟಿಪಿ ಟೂರ್ನಿಯಾಗಿತ್ತು. ಕಳೆದೊಂದು ವರ್ಷದಿಂದ ಅವರು ಯಾವುದೇ ಟೆನಿಸ್​ ಟೂರ್ನಿ ಆಡಿರಲಿಲ್ಲ.

Exit mobile version