ರಾಂಚಿ: ನ್ಯೂಜಿಲ್ಯಾಂಡ್ ವಿರುದ್ಧದ ಮೂರು(IND vs NZ 1st T20) ಪಂದ್ಯಗಳ ಟಿ20 ಸರಣಿ ಶುಕ್ರವಾರ ಮೊದಲ್ಗೊಳ್ಳಲಿದೆ. ಈ ಪಂದ್ಯ ರಾಂಚಿಯ ಜೆಎಸ್ಸಿಎ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿದೆ. ಈಗಾಗಲೇ ಉಭಯ ತಂಡಗಳ ಆಟಗಾರರು ರಾಂಚಿಯಲ್ಲಿ ಬೀಡು ಬಿಟ್ಟಿದ್ದಾರೆ. ಇದೇ ವೇಳೆ ಟೀಮ್ ಇಂಡಿಯಾ ಆಟಗಾರರಿದ್ದ ಕ್ಯಾಂಪ್ಗೆ ಮಹೇಂದ್ರ ಸಿಂಗ್(MS Dhoni) ಧೋನಿ ಅಚ್ಚರಿಯ ಭೇಟಿ ನೀಡಿದ್ದಾರೆ.
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ತವರು ರಾಂಚಿ ಆದ ಕಾರಣ ಅವರು ಆಟಗಾರರ ಕ್ಯಾಂಪ್ಗೆ ಭೇಟಿ ನೀಡಿದ್ದಾರೆ. ಇದೇ ವೇಳೆ ಅವರು ಆಟಗಾರರೊಂದಿಗೆ ಸಮಾಲೋಚನೆ ನಡೆಸಿ ಪಂದ್ಯಕ್ಕೆ ಹೇಗೆ ತಯಾರಿ ನಡೆಸಬೇಕು ಮತ್ತು ರಾಂಚಿ ಪಿಚ್ನಲ್ಲಿ ಹೇಗೆ ಆಡಬೇಕು ಎನ್ನುವ ಉಪಯುಕ್ತ ಸಲಹೆಯನ್ನು ನೀಡಿದ್ದಾರೆ. ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದೆ.
ಇದನ್ನೂ ಓದಿ IND vs NZ 1st T20: ರಾಂಚಿಯಲ್ಲಿ ಭಾರತ-ಕಿವೀಸ್ ಮೊದಲ ಟಿ20 ಕೌತುಕ
ಇದಕ್ಕೂ ಮುನ್ನ ಹಾರ್ದಿಕ್ ಪಾಂಡ್ಯ ರಾಂಚಿಯಲ್ಲಿರುವ ಧೋನಿ ಮನೆಗೆ ಭೇಟಿ ನೀಡಿದ್ದರು. ಧೋನಿ 15ನೇ ಐಪಿಎಲ್ ಈ ಬಳಿಕ ವಿದಾಯ ಹೇಳಿ ಟೀಮ್ ಇಂಡಿಯಾದ ಟಿ20 ಕ್ರಿಕೆಟ್ ಮಾದರಿಗೆ ಕೋಚ್ ಆಗಲಿದ್ದಾರೆ ಎನ್ನುವ ಟಾಕ್ಗಳು ಈಗಾಗಲೇ ಕ್ರಿಕೆಟ್ ವಲಯದಲ್ಲಿ ಕೇಳಿಬರಲಾರಂಭಿಸಿದೆ. 2021ರಲ್ಲಿ ದುಬೈನಲ್ಲಿ ನಡೆದ ಭಾರತ ಆತಿಥ್ಯದ ಟಿ20 ವಿಶ್ವ ಕಪ್ ವೇಳೆ ಧೋನಿ ಮೆಂಟರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಒಂದೊಮ್ಮೆ ಮುಂದಿನ ವಿಶ್ವ ಕಪ್ ವೇಳೆ ಧೋನಿ ತಂಡದ ಕೋಚ್ ಆದರೂ ಅಚ್ಚರಿಯಿಲ್ಲ.