ಚೆನ್ನೈ: ಐಪಿಎಲ್ನ ಒಟ್ಟು 16 ಆವೃತ್ತಿಗಳಲ್ಲಿ (IPL 2023) 14 ಋತುಗಳಲ್ಲಿ, ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಾಲ್ಗೊಂಡಿದೆ. ಫಿಕ್ಸಿಂಗ್ ಆರೋಪದ ಮೇಲೆ ಎರಡು ವರ್ಷ ಬ್ಯಾನ್ ಅಗಿದ್ದ ಕಾರಣ ಆ ಎರಡು ವರ್ಷ ಆಡಿರಲಿಲ್ಲ. ಆಡಿರುವ ಅಷ್ಟೂ ವರ್ಷಗಳಲ್ಲಿ 2020 ಮತ್ತು 2022ರಲ್ಲಿ ಎರಡು ಬಾರಿ ಮಾತ್ರ ಈ ತಂಡ ಪ್ಲೇಆಫ್ಗೆ ಅರ್ಹತೆ ಪಡೆದಿಲ್ಲ. 2020ರಲ್ಲಿ ಅಗ್ರ ನಾಲ್ಕರಲ್ಲಿ ಸ್ಥಾನ ಪಡೆಯಲು ವಿಫಲವಾದ ನಂತರ 2021ರಲ್ಲಿ ಪ್ರಶಸ್ತಿ ಗೆದ್ದಿತು. ಆದರೆ, 2022ರಲ್ಲಿ ಒಂಬತ್ತನೇ ಸ್ಥಾನ ಪಡೆದು ಅದುವರೆಗಿನ ಅತ್ಯಂತ ಕಳಪೆ ಪ್ರದರ್ಶನ ನೀಡಿತು. ಆದರೀಗ 2023ರ ಲೀಗ್ ಹಂತದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಆದರೆ, ಕಳೆದ ಆವೃತ್ತಿಯ ಕೊನೆಯಲ್ಲಿ ತಮ್ಮ ಪ್ರದರ್ಶನದ ಬಗ್ಗೆ ಮಾತನಾಡಿದ್ದ ನಾಯಕ ಮಹೇಂದ್ರ ಸಿಂಗ್ ಧೋನಿ ಮುಂದಿನ ವರ್ಷ ಪುಟಿದೇಳುವುದಾಗಿ ಹೇಳಿದ್ದರು. ಆ ಮಾತನ್ನು ಉಳಿಸಿಕೊಂಡಿದ್ದಾರೆ ಅವರು.
ಕಳೆದ ವರ್ಷ ಅವರು ಅಭಿಮಾನಿಗಳಿಗೆ ನೀಡಿದ್ದ ಭರವಸೆಯಂತೆ ಈ ಬಾರಿ ಚೆನ್ನೈ ತಂಡ ಅದ್ಭುತ ಪ್ರದರ್ಶನ ನೀಡಿದೆ. ಆಡಿರುವ 14 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿ ಒಂದು ಪಂದ್ಯ ಮಳೆಯಿಂದ ರದ್ದಾಗಿರುವ ಕಾರಣ ಒಂದು ಅಂಕ ಹಂಚಿಕೊಂಡು ಒಟ್ಟು 15 ಅಂಕಗಳನ್ನು ಕಲೆ ಹಾಕಿದೆ. ಈ ಮೂಲಕ ಸಿಎಸ್ಕೆ ಅಭಿಮಾನಿಗಳಿಗೆ ಪ್ರಶಸ್ತಿ ಭರವಸೆ ಮೂಡಿಸಿದ್ದಾರೆ ಧೋನಿ. ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿರುವ ಸಿಎಸ್ಕೆ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ತಂಡವನ್ನು ಎದುರಿಸಲಿದೆ.
ಸಿಎಸ್ಕೆ ಅಗ್ರ ಎರಡರಲ್ಲಿ ಸ್ಥಾನ ಪಡೆದ ಬಳಿಕ ಧೋನಿ ಅವರ ಹೇಳಿಕೆಯು ವೈರಲ್ ಆಗಿದೆ. ಐಪಿಎಲ್ 2022ರಲ್ಲಿ ಗ್ರೂಪ್ ಹಂತದ ಕೊನೆಯ ಪಂದ್ಯದಲ್ಲಿ ಸಿಎಸ್ಕೆ ತಂಡ ರಾಜಸ್ಥಾನ್ ತಂಡವನ್ನು ಎದುರಿಸಿತ್ತು. ಆ ಪಂದ್ಯದ ಟಾಸ್ ವೇಳೆ ಇಯಾನ್ ಬಿಷಪ್ ಅವರು ಧೋನಿ ಬಳಿ ನಿಮ್ಮ ಭವಿಷ್ಯದ ಯೋಜನೆಗಳೇನು ಎಂದು ಕೇಳಿದ್ದರು. ಅದಕ್ಕೆ ಉತ್ತರಿಸಿದ ಧೋನಿ, 2023 ನನ್ನ ಕೊನೆಯ ವರ್ಷವಾಗಲಿದೆಯೇ ಅಥವಾ ಇಲ್ಲವೇ ಎಂಬುದು ದೊಡ್ಡ ಪ್ರಶ್ನೆ. ಏಕೆಂದರೆ ಎರಡು ವರ್ಷಗಳ ನಂತರ ನೀವು ಏನಾಗಬಹುದು ಎಂದು ಊಹಿಸಲು ಸಾಧ್ಯವಿಲ್ಲ. ಆದರೆ ಖಂಡಿತವಾಗಿಯೂ, ಮುಂದಿನ ವರ್ಷ ಮತ್ತೆ ಪ್ರಶಸ್ತಿ ಗೆಲ್ಲಲು ನಾನು ಶ್ರಮಿಸುತ್ತೇನೆ ಎಂದಿದ್ದರು.
ಇದನ್ನೂ ಓದಿ : IPL 2023 : ಡ್ಯಾನಿ ಮಾರಿಸನ್ಗೆ ಸಿಎಸ್ಕೆ ನಾಯಕ ಮಹೇಂದ್ರ ಸಿಂಗ್ ಧೋನಿ ನೀಡಿದ ವಿಭಿನ್ನ ಪ್ರತಿಕ್ರಿಯೆ ಹೀಗಿದೆ
ಧೋನಿ ಇದೀಗ ಮಾತು ಉಳಿಸಿಕೊಂಡಿದ್ದಾರೆ. ಈ ಆವೃತ್ತಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಧೋನಿ ದೊಡ್ಡ ಮೊತ್ತ ಪೇರಿಸದ ಹೊರತಾಗಿಯೂ ತಂಡದ ಉಳಿದ ಆಟಗಾರರು ಅಬ್ಬರದ ಪ್ರದರ್ಶನ ನೀಡಿದ್ದಾರೆ. ಈ ಮೂಲಕ 12 ಬಾರಿ ಐಪಿಎಲ್ನ ಪ್ಲೇಆಫ್ಗೆ ಪ್ರವೇಶ ಪಡೆದ ಸಾಧನೆ ಮಾಡಿದೆ. ಪ್ಲೇಆಫ್ಗೆ ಪ್ರವೇಶ ಪಡೆದಿರುವ ಅಂಕಿ ಅಂಶದಲ್ಲಿ ಸಿಎಸ್ಕೆ ಅಗ್ರಸ್ಥಾನ ಪಡೆದುಕೊಂಡಿದೆ. ಒಟ್ಟು 12 ಬಾರಿ ಪ್ಲೇಆಫ್ ಹಂತಕ್ಕೆ ಯಾವುದೇ ತಂಡ ಪ್ರವೇಶಿಸಿಲ್ಲ. ಐದು ಬಾರಿಯ ಚಾಂಪಿಯನ್ ಚೆನ್ನೈ 9 ಬಾರಿ ಪ್ಲೇಆಫ್ಗೆ ಪ್ರವೇಶ ಮಾಡಿದೆ. ಈ ಬಾರಿ ಮುಂಬಯಿ ತಂಡದ ಪರಿಸ್ಥಿತಿ ಏನಾಗುತ್ತದೆ ಎಂಬುದು ಗೊತ್ತಿಲ್ಲ.
ಶನಿವಾರ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು 77 ರನ್ ಗಳಿಂದ ಸೋಲಿಸಿದ ನಂತರ ಚೆನ್ನೈ ರ್ಯಾಂಕ್ ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿತು. ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತಾ ನೈಟ್ ರೈಡರ್ಸ್ ತಂಡವನ್ನು ಸೋಲಿಸಿದರೂ ಲಕ್ನೋ ಸೂಪರ್ ಜೈಂಟ್ಸ್ ತಂಡ ಮೂರನೇ ಸ್ಥಾನದಲ್ಲಿ ಉಳಿಯಿತು.