Site icon Vistara News

MS Dhoni: ರಾಂಚಿಯಿಂದ ಬೈಕ್​ ಸವಾರಿ ಹೊರಟ ಮಹೇಂದ್ರ ಸಿಂಗ್​ ಧೋನಿ

MS Dhoni

#image_title

ರಾಂಚಿ: ಟೀಮ್​ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ರಾಂಚಿ ಸ್ಟೇಡಿಯಂನಲ್ಲಿ ಟಿವಿಎಸ್ ಕಂಪನಿಯ ಅಪಾಚೆ ಆರ್‌ಆರ್310(TVS Apache RR310) ಬೈಕ್‌ ಓಡಿಸಿ ಗಮನ ಸೆಳೆದಿದ್ದಾರೆ. ಧೋನಿ ಬೈಕ್ ಓಡಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಧೋನಿ ಅವರು ಬೈಕ್ ಪ್ರೇಮಿಯಾಗಿದ್ದು ಅವರ ಬಳಿ ಹಲವು ಕಂಪೆನಿಗಳ ಸ್ಪೋರ್ಟ್ಸ್ ಬೈಕ್​ಗಳಿವೆ. ಹಲವಾರು ಬಾರಿ ಅವರು ಬೈಕ್ ರೈಡಿಂಗ್ ಮಾಡಿ ಗಮನ ಸೆಳೆದಿದ್ದಾರೆ. ಇದೀಗ ರಾಂಚಿ ಸ್ಟೇಡಿಯಂಗೆ ಅವರು ಬೈಕ್​ ಮೂಲಕ ಏಕಾಂಗಿಯಾಗಿ ಬಂದು ಪಂದ್ಯ ವೀಕ್ಷಿಸಿ ತೆರಲಿದ್ದಾರೆ. ಧೋನಿ ಸ್ಟೇಡಿಯಂನಿಂದ ಬೈಕ್​ನಲ್ಲಿ ಮನೆಗೆ ತೆರಳುತ್ತಿರುವ ವಿಡಿಯೊ ವೈರಲ್​ ಆಗಿದೆ.

ಧೋನಿ ಅವರು ಟೀಮ್​ ಇಂಡಿಯಾ ಪರ ಆಡುತ್ತಿದ್ದ ಸಮಯದಲ್ಲಿ ಸಹ ಆಟಗಾರರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿಯು ಬೈಕ್​ ರೂಪದಲ್ಲಿ ಸಿಕ್ಕಿದ ವೇಳೆ ಮೈದಾನದಲ್ಲಿ ಒಂದೆಡರು ಸುತ್ತು ಓಡಿಸುತ್ತಿದ್ದರು. ಸದ್ಯ ಧೋನಿ ಮುಂಬರುವ 2023ನೇ ಸಾಲಿನ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಭರ್ಜರಿ ಅಭ್ಯಾಸ ನಡೆಸುತ್ತಿದ್ದಾರೆ.

Exit mobile version