ರಾಂಚಿ : ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ (INDvsNZ T20) ಭಾರತ ತಂಡ 21 ರನ್ಗಳ ಸೋಲಿಗೆ ಒಳಗಾಗಿದೆ. ಪ್ರಮುಖ ಬ್ಯಾಟರ್ಗಳ ವೈಫಲ್ಯವೇ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣ. ನ್ಯೂಜಿಲ್ಯಾಂಡ್ನ ಸ್ಪಿನ್ನರ್ಗಳ ದಾಳಿಗೆ ನಲುಗಿದ ಭಾರತದ ಬ್ಯಾಟರ್ಗಳು ನಿರಂತರವಾಗಿ ಪೆವಿಲಿಯನ್ ಹಾದಿ ಹಿಡಿದ ಕಾರಣ ಟೀಮ್ ಇಂಡಿಯಾಗೆ ಹಿನ್ನಡೆ ಉಂಟಾಯಿತು. ಆದಾಗ್ಯೂ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ (washington sundar) ಸ್ಫೋಟಕ ಬ್ಯಾಟಿಂಗ್ ಹಾಗೂ ಮಾರಕ ಬೌಲಿಂಗ್ ಮೂಲಕ ಗಮನ ಸೆಳೆದರು. ಇವೆಲ್ಲದಕ್ಕಿಂತ ಹೆಚ್ಚಾಗಿ ರಾಂಚಿಯ ಕ್ರಿಕೆಟ್ ಅಭಿಮಾನಿಗಳಿಗೆ ಖುಷಿ ಕೊಟ್ಟಿದ್ದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿಯ(M S Dhoni) ಉಪಸ್ಥಿತಿ.
ರಾಂಚಿಯ ಜೆಎಸ್ಸಿಎ ಇಂಟರ್ನ್ಯಾಷನಲ್ ಸ್ಟೇಡಿಯಮ್ ಮಹೇಂದ್ರ ಸಿಂಗ್ ಧೋನಿಯ ತವರು ಮೈದಾನ. ಹೀಗಾಗಿ ಅವರು ಪತ್ನಿ ಸಾಕ್ಷಿ ಸಿಂಗ್ ಜತೆಗೂಡಿ ಶುಕ್ರವಾರ ಪಂದ್ಯವನ್ನು ವೀಕ್ಷಿಸಿದರು. ಟಿವಿ ನೇರ ಪ್ರಸಾರದ ಕ್ಯಾಮೆರಾಗಳು ಕೂಡ ಸಾಕ್ಷಿ ಹಾಗೂ ಧೋನಿ ಜತೆಯಾಗಿ ಕುಳಿತು ಪಂದ್ಯವನ್ನು ವೀಕ್ಷಿಸುವ ದೃಶ್ಯವನ್ನು ದೊಡ್ಡ ಪರದೆಯಲ್ಲಿ ತೋರಿಸಿದವು. ಈ ವೇಳೆ ಸ್ಥಳೀಯ ಅಭಿಮಾನಿಗಳು ಧೋನಿ, ಧೋನಿ ಎಂದು ಕೂಗುವ ಮೂಲಕ ಅಭಿಮಾನ ಪ್ರದರ್ಶಿಸಿದರು.
ಪಂದ್ಯದ ಹಿನ್ನೆಲೆಯಲ್ಲಿ ಹಾರ್ದಿಕ್ ಪಾಂಡ್ಯ ನೇತೃತ್ವದ ಭಾರತದ ತಂಡ ರಾಂಚಿಗೆ ಭೇಟಿ ನೀಡಿದ ದಿನವೇ ಮಹೇಂದ್ರ ಸಿಂಗ್ ಧೋನಿ ಸ್ಟೇಡಿಯಮ್ಗೆ ಭೇಟಿ ನೀಡಿದ್ದರು. ಎಲ್ಲ ಆಟಗಾರರ ಜತೆ ಮಾತುಕತೆ ನಡೆಸಿ ಅವರಿಗೆ ಟಿಪ್ಸ್ ನೀಡಿದ್ದರು. ನಾಯಕ ಹಾರ್ದಿಕ್ ಪಾಂಡ್ಯ ಜತೆಯೂ ಮಾತುಕತೆ ನಡೆಸಿದ್ದರು. ಈ ವಿಡಿಯೊ ಕೂಡ ವೈರಲ್ ಆಗಿತ್ತು.
ಇದನ್ನೂ ಓದಿ : INDvsNZ T20 | ವಾಷಿಂಗ್ಟನ್ ಸುಂದರ್ ಹಿಡಿದ ಅದ್ಭುತ ಕ್ಯಾಚ್ಗೆ ಶಹಬ್ಬಾಸ್ ಎಂದ ಕ್ರಿಕೆಟ್ ಅಭಿಮಾನಿಗಳು
ಮೊದಲ ಪಂದ್ಯದ ಸೋಲಿನೊಂದಿಗೆ ಭಾರತ ತಂಡಕ್ಕೆ ಸರಣಿಯಲ್ಲಿ 0-1 ಹಿನ್ನಡೆ ಉಂಟಾಗಿದೆ. ಭಾನುವಾರ (ಜನವರಿ29ರಂದು) ಎರಡನೇ ಪಂದ್ಯ ನಡೆಯಲಿದ್ದು, ಫೆಬ್ರವರಿ 1ರಂದು ಅಹಮದಾಬಾದ್ನಲ್ಲಿ ಮೂರನೇ ಹಾಗೂ ಕೊನೇ ಹಣಾಹಣಿ ನಡೆಯಲಿದೆ. ಮೊದಲ ಪಂದ್ಯ ಸೋತಿರುವ ಕಾರಣ ಭಾರತ ತಂಡಕ್ಕೆ ಉಳಿದೆರಡು ಪಂದ್ಯಗಳಲ್ಲಿ ಜಯ ಕಂಡರೆ ಮಾತ್ರ ಸರಣಿಯನ್ನು ವಶಪಡಿಸಿಕೊಳ್ಳುವುದಕ್ಕೆ ಸಾಧ್ಯವಿದೆ.