ಚಾಂಗ್ವನ್: ಭಾರತದ ಹಿರಿಯ ಶೂಟರ್ ಮೈರಾಜ್ ಅಹಮದ್ ಖಾನ್ ಇಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ವಿಶ್ವ ಕಪ್ ಶೂಟಿಂಗ್ನ SKEET SHOOTING ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಇದು ಈ ವಿಭಾಗದಲ್ಲಿ ಭಾರತಕ್ಕೆ ಲಭಿಸುತ್ತಿರುವ ಮೊಟ್ಟಮೊದಲ ವಿಶ್ವ ಕಪ್ ಚಿನ್ನದ ಪದಕ.
ಉತ್ತರ ಪ್ರದೇಶದ 46 ವರ್ಷದ ಶೂಟರ್ ಮೈರಾಜ್ಒಟ್ಟು 40 ಶೂಟ್ಗಳಲ್ಲಿ 37 ಗುರಿಗಳನ್ನು ಸಾಧಿಸಿದ ಚಿನ್ನ ಗೆದ್ದರು. ಕೊರಿಯಾದ ಮಿನ್ಸು ಕಿಮ್ 36 ಶಾಟ್ಗಳೊಂದಿಗೆ ಬೆಳ್ಳಿ ಗೆದ್ದರೆ, ಬ್ರಿಟನ್ನ ಬೆನ್ ಲೆವ್ಲಿನ್ (26) ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದರು.
ಎರಡು ಬಾರಿಯ ಒಲಿಂಪಿಯನ್ ಮೈರಾಜ್ ಅವರು ಭಾರತದ ನಿಯೋಗದಲ್ಲಿದ್ದ ಹಿರಿಯ ಶೂಟರ್ ಆಗಿದ್ದಾರೆ. ಅವರು 2016 ವಿಶ್ವ ಕಪ್ನಲ್ಲಿ ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡಿದ್ದರು.
ಭಾನವಾರ ಅಂಜುಮ್ ಮೌದ್ಗಿಲ್, ಆಶಿ ಚೋಸ್ಕಿ, ಸಿಫ್ಟ್ ಕೌರ್ ಸಿಮ್ರಾನ್ ಅವರಿದ್ದ ಭಾರತದ ಮಹಿಳೆಯರ 50 ಮೀಟರ್ ರೈಫಲ್ ತಂಡ ಕಂಚಿನ ಪದಕ ಗೆದ್ದಿತ್ತು.
ಇದನ್ನೂ ಓದಿ | Badminton: ಚೀನಾದ ವಾಂಗ್ ಜಿ ಯಿ ಮಣಿಸಿದ ಪಿ. ವಿ ಸಿಂಧೂಗೆ ಸಿಂಗಾಪುರ ಓಪನ್ ಚಾಂಪಿಯನ್ ಪಟ್ಟ