ಕೌಲಾಲಂಪುರ: ಇಲ್ಲಿ ನಡೆಯುತ್ತಿರುವ ಮಲೇಷ್ಯಾ ಓಪನ್(Malaysia Open) ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಭಾರತ ಸ್ಟಾರ್ ಬ್ಯಾಡ್ಮಿಂಟನ್ ಜೋಡಿ ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಪುರುಷರ ಡಬಲ್ಸ್ ಕ್ವಾರ್ಟರ್ ಪೈನಲ್ ಪಂದ್ಯದಲ್ಲಿ ಚಿರಾಗ್-ಸಾತ್ವಿಕ್ ಬಿ.ಡಬ್ಲ್ಯು.ಎಫ್. ವರ್ಲ್ಡ್ ಟೂರ್ ಫೈನಲ್ಸ್ ಚಾಂಪಿಯನ್‌ಗಳಾದ ಚೀನಾದ ಲಿಯು ಯು ಚೆನ್-ಒಯು ಕ್ಸುವಾನ್ ಯಿ ಅವರನ್ನು 17-21, 22-20, 21-9 ಅಂತರದಿಂದ ಬಗ್ಗುಬಡಿದರು.
ಮೊದಲ ಗೇಮ್ ಸೋಲಿನ ಬಳಿಕ ಎಚ್ಚೆತ್ತುಕೊಂಡ ಚಿರಾಗ್-ಸಾತ್ವಿಕ್ ಮುಂದಿನ ಎರಡು ಗೇಲ್ಗಳಲ್ಲಿ ಉತ್ಕೃಷ್ಟ ಮಟ್ಟದ ಪ್ರದರ್ಶನ ತೋರುವ ಮೂಲಕ ಮೇಲುಗೈ ಸಾಧಿಸಿದರು. ಯಾವುದೇ ತಪ್ಪುಗಳನ್ನು ಮಾಡದೆ ಉತ್ತಮ ಆಡವಾಡಿ ಗೆಲುವು ದಾಖಲಿಸಿದರು. ಸೆಮಿಫೈನಲ್ನಲ್ಲಿ ಈ ಜೋಡಿ ಚೀನಾದ ಬಲಿಷ್ಠ ಆಟಗಾರರಾದ ಡಬ್ಲ್ಯು.ಕೆ. ಲಿಯಾಂಗ್-ಸಿ ವಾಂಗ್ ವಿರುದ್ಧ ಸೆಣಸಾಟ ನಡೆಸಲಿದೆ.
ಇದನ್ನೂ ಓದಿ | Malaysia Open | ಕ್ವಾರ್ಟರ್ ಫೈನಲ್ನಲ್ಲಿ ಸೋತು ಹೊರಬಿದ್ದ ಎಚ್.ಎಸ್ ಪ್ರಣಯ್