ಕೌಲಲಾಂಪುರ: ಅವಳಿ ಒಲಿಂಪಿಕ್ ಪದಕ ವಿಜೇತೆ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು ಅವರು ಮಲೇಷ್ಯಾ ಓಪನ್‌ನಲ್ಲಿ ನೀರಸ ಪ್ರದರ್ಶನ ತೋರುವ ಮೂಲಕ ಮೊದಲ ಸುತ್ತಿನಲ್ಲೇ ಸೋತು ಕೂಟದಿಂದ ಹೊರಬಿದ್ದಿದ್ದಾರೆ.
ಬುಧವಾರದ ನಡೆದ ಮಹಿಳಾ ಸಿಂಗಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಸಿಂಧು ಸ್ಪೇನಿನ ಬದ್ಧ ಎದುರಾಳಿ ಕ್ಯಾರೊಲಿನಾ ಮರಿನ್ ವಿರುದ್ಧ 12-21, 21-10, 15-21 ಅಂತರದಲ್ಲಿ ಸೋಲು ಕಂಡರು. ಉಭಯ ಆಟಗಾರ್ತಿಯರ ಈ ಹೋರಾಟ ಕೇಲವ 59 ನಿಮಿಷಕ್ಕೆ ಅಂತ್ಯ ಕಂಡಿತು. ಮಂಗಳವಾರ ಮಹಿಳಾ ವಿಭಾಗದಲ್ಲಿ ಸೈನಾ ನೆಹ್ವಾಲ್ ಸೋಲು ಕಂಡಿದ್ದರು. ಇದೀಗ ಸಿಂಧು ಕೂಡ ಸೋಲು ಕಾಣುವ ಮೂಲಕ ಈ ಟೂರ್ನಿಯಲ್ಲಿ ಭಾರತದ ಮಹಿಳಾ ಸಿಂಗಲ್ಸ್ ಸ್ಪರ್ಧೆ ಅಂತ್ಯಕಂಡಿದೆ.
ಸ್ಪೇನಿನ ಆಟಗಾರ್ತಿ ಸಿಂಧು ವಿರುದ್ಧ ಆರಂಭದಿಂದಲೇ ಆಕ್ರಮಣಕಾರಿ ಆಟದ ಮೂಲಕ ಮೇಲುಗೈ ಸಾಧಿಸಿದರು. ಈ ಮೂಲಕ ಮೊದಲ ಸುತ್ತಿನಲ್ಲೇ ಸಿಂಧು ಅವರನ್ನು ಒತ್ತಡಕ್ಕೆ ಸಿಲುಕಿಸುವಲ್ಲಿ ಯಶಸ್ವಿಯಾದರು. ಮೊದಲ ಸುತ್ತಿನಲ್ಲಿ ಸಂಪೂರ್ಣ ಮೇಲುಗೈ ಸಾಧಿಸಿದ ಮರಿನ್ 21-12 ಅಂತರದಿಂದ ಗೆದ್ದುಕೊಂಡರು. ಆದರೆ ಎರಡನೇ ಸುತ್ತಿನಲ್ಲಿ ತಿರುಗಿಬಿದ್ದ ಸಿಂಧು ಅದ್ಭುತ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾದರು. ಆದರೆ ಅಂತಿಮ ಗೇಮ್ನಲ್ಲಿ ಇದೇ ಪ್ರದರ್ಶನವನ್ನು ಮುಂದುವರಿಸುವಲ್ಲಿ ವಿಫಲವಾದ ಕಾರಣ ಸೋಲು ಕಾಣಬೇಕಾಯಿತು.
ಇದನ್ನೂ ಓದಿ | Malaysia Open Badminton| ಬ್ಯಾಡ್ಮಿಂಟನ್; ಮೊದಲ ಸುತ್ತಿನಲ್ಲೇ ಸೋಲು ಕಂಡ ಸೈನಾ ನೆಹ್ವಾಲ್, ಕೆ. ಶ್ರೀಕಾಂತ್