Site icon Vistara News

Malaysia Open | ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌; ಸೆಮಿಫೈನಲ್​ನಲ್ಲಿ ಸೋಲು ಕಂಡ ಸಾತ್ವಿಕ್‌-ಚಿರಾಗ್‌ ಜೋಡಿ!

Satwik-Chirag

ಕೌಲಾಲಂಪುರ: ಕಾಮನ್‌ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ಸೋಲು ಕಂಡಿದ್ದಾರೆ. ಈ ಮೂಲಕ ಭಾರತದ ಏಕೈಕ ಪದಕದ ಆಸೆಯೂ ನಿರಾಸೆಗೊಂಡಿದೆ.

ಚೀನದ ಲಿಯಾಂಗ್‌ ವೈ ಕೆಂಗ್‌ ಮತ್ತು ವಾಂಗ್‌ ಚಾಂಗ್‌ ವಿರುದ್ಧ ನಡೆದ ಮೂರು ಗೇಮ್‌ಗಳ ಜಿದ್ದಾಜಿದ್ದಿನ ಹೋರಾಟದಲ್ಲಿ ಭಾರತದ ಜೋಡಿಗೆ ಮೇಲುಗೈ ಸಾಧಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 21-16, 11-21, 21-15 ಗೇಮ್‌ಗಳಿಂದ ಸೋತು ಟೂರ್ನಿಯಿಂದ ಹೊರಬಿದ್ದರು.

ವಿಶ್ವದ ಐದನೇ ಶ್ರೇಯಾಂಕದ ಭಾರತೀಯ ಆಟಗಾರರು ಮೊದಲ ಗೇಮ್​ ಸೋತರು, ದ್ವಿತೀಯ ಗೇಮ್​ನಲ್ಲಿ ಗೆದ್ದು ಹಿಡಿತ ಸಾಧಿಸಿದರು. ಆದರೆ ಇದೇ ಲಯವನ್ನು ನಿರ್ಣಾಯಕ ಗೇಮ್​ನಲ್ಲಿ ಮುಂದುವರಿಸಲು ವಿಫಲವಾದ ಕಾರಣ ಸೋಲು ಕಂಡರು. ಆದರೆ ಈ ಗೆಲುವಿನಿಂದ ಕೆಂಗ್‌ ಮತ್ತು ಚಾಂಗ್‌ ಮೊದಲ ಬಾರಿ ಫೈನಲಿಗೇರಿದ ಸಾಧನೆ ಮಾಡಿದರು.

ಸೋಲಿನ ಬಳಿಕ ಮಾತನಾಡಿದ ಈ ಜೋಡಿ ಸೋಲಿನಿಂದ ನಿರಾಸೆಯಾಗಿರುವುದು ನಿಜ. ಆದರೆ ಇದು ಕ್ರೀಡೆಯ ಒಂದು ಭಾಗ. ಇದನ್ನು ಇಲ್ಲೇ ಮರೆತು ಮುಂದಿನ ಟೂರ್ನಿ ಕಡೆಗೆ ಗಮನ ಹರಿಸಲಿದ್ದೇವೆ ಎಂದು ಹೇಳಿದರು. ಸಾತ್ವಿಕ್‌-ಚಿರಾಗ್‌ ಜೋಡಿ ಮುಂದಿನ ವಾರ ಭಾರತದಲ್ಲೇ ನಡೆಯಲಿರುವ ಇಂಡಿಯಾ ಓಪನ್‌ ಸೂಪರ್‌ 750 ಕೂಟದಲ್ಲಿ ಆಡಲಿದ್ದಾರೆ.

ಇದನ್ನೂ ಓದಿ | Malaysia Open| ಮಲೇಷ್ಯಾ ಓಪನ್‌ ಬ್ಯಾಡ್ಮಿಂಟನ್‌; ಸೆಮಿಫೈನಲ್​ ಪ್ರವೇಶಿಸಿದ ಚಿರಾಗ್‌-ಸಾತ್ವಿಕ್‌ ಜೋಡಿ!

Exit mobile version