Site icon Vistara News

Wrestlers Protest: ಬ್ರಿಜ್​ ಭೂಷಣ್​ ಮನೆಗೆ ಬಂದ ಅಪರಿಚಿತ ವ್ಯಕ್ತಿಯ ಬಂಧನ

brijbhushan singh

ನವದೆಹಲಿ: ಲೈಂಗಿಕ ಕಿರುಕುಳದ ಆರೋಪ ಹೊತ್ತಿರುವ ಭಾರತೀಯ ಕುಸ್ತಿ ಫೆಡರೇಶನ್‌ನ ನಿರ್ಗಮಿತ ಅಧ್ಯಕ್ಷ ಬ್ರಿಜ್‌ಭೂಷಣ್‌ ಶರಣ್​ ಸಿಂಗ್‌(Brij Bhushan Sharan Singh) ವಿರುದ್ಧ ಗುರುವಾರ 500 ಪುಟಗಳ ಚಾರ್ಜ್​ಶೀಟ್​ ಸಲ್ಲಿಕೆಯಾಗಿದೆ. ಈ ಘಟನೆ ನಡೆದು ಒಂದು ದಿನ ಕಳೆಯುವ ಮುನ್ನವೇ ಬ್ರಿಜ್​ ಭೂಷಣ್​ ಮನೆಗೆ ಬಂದ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ಈ ವ್ಯಕ್ತಿ ಬ್ರಿಜ್ ಭೂಷಣ್ ಅವರ ನಿವಾಸದಲ್ಲಿದ್ದ ಸಿಬ್ಬಂದಿಯಿಂದ ಅವರ ದಿನಚರಿ ಮತ್ತು ಅವರ ಬಗ್ಗೆ ಹಲವು ಮಾಹಿತಿಗಳನ್ನು ವಿಚಾರಿಸಿದ್ದಾನೆ. ಅನುಮಾನ ಬಂದ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.

ವಶಕ್ಕೆ ಪಡೆದಿರುವ ಈ ಅಪರಿಚಿತ ವ್ಯಕ್ತಿಯನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಆತ ಬಿಜೆಪಿ ಸಂಸದರೂ ಆಗಿರುವ ಬ್ರಿಜ್​ ಭೂಷಣ್​ ಮನೆಗೆ ಏಕೆ ಬಂದಿದ್ದ? ಸಿಬ್ಬಂದಿಯನ್ನು ಏನು ಕೇಳುತ್ತಿದ್ದ? ಎಂದು ತಿಳಿಯಲು ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ Wrestlers Protest: ಬ್ರಿಜ್ ಭೂಷಣ್​ ವಿರುದ್ಧ ಇಂದು ಚಾರ್ಜ್​ಶೀಟ್ ಸಲ್ಲಿಕೆ

ಈತ ಶುಕ್ರವಾರ ಬೆಳಗ್ಗೆ ಬ್ರಿಜ್ ಭೂಷಣ್ ಮನೆಗೆ ಬಂದಿದ್ದಾನೆ. ಆತ ಬ್ರಿಜ್​ ಭೂಷಣ್​ ವಿರುದ್ಧ ನಡೆಯುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯುತ್ತಿದ್ದಾನೋ ಅಥವಾ ಪ್ರಕರಣದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾನೋ ಎಂದು ತನಿಖೆ ಬಳಿಕ ಸತ್ಯಾಂಶ ಬೆಳಕಿಗೆ ಬರಲಿದೆ.

ಇದನ್ನೂ ಓದಿ Wrestlers Protest: ಕುಸ್ತಿಪಟುಗಳ ಮೇಲಿನ ಎಫ್​ಐಆರ್ ಹಿಂಪಡೆಯುತ್ತೇವೆ; ದೆಹಲಿ ಪೊಲೀಸರ ಸ್ಪಷ್ಟನೆ

ಗುರುವಾರ ಪಟಿಯಾಲ ಕೋಟ್​​ಗೆ ವರದಿ ಸಲ್ಲಿಸಿರುವ ದೆಹಲಿ ಪೊಲೀಸರು ಬ್ರಿಜ್‌ಭೂಷಣ್‌ ವಿರುದ್ಧ ಅಪ್ರಾಪ್ತ ವಯಸ್ಸಿನ ಬಾಲಕಿ ಸಲ್ಲಿಸಿರುವ ಲೈಂಗಿಕ ಕಿರುಕುಳ ಪ್ರಕರಣವನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ. ಮತ್ತು ತನಿಖೆಯಲ್ಲಿ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಜತೆಗೆ ಅವರ ವಿರುದ್ಧ ದಾಖಲಾದ ಪೋಕ್ಸೊ(POCSO) ಕೇಸನ್ನು ರದ್ದುಗೊಳಿಸುವಂತೆ ಕೋಟ್​ಗೆ ತಿಳಿಸಿದ್ದಾರೆ.

Exit mobile version