Site icon Vistara News

IND vs NZ: ಸೆಮಿ ಪಂದ್ಯದ ನಕಲಿ ಟಿಕೆಟ್ ಮಾರಾಟ​; ಮೋಸ ಹೋದೀರಿ ಹುಷಾರ್‌!

India vs New Zealand, 1st Semi-Final tickets

ಮುಂಬಯಿ: ಕ್ರಿಕೆಟ್​ ಅಭಿಮಾನಗಳ ಚಿತ್ತವೆಲ್ಲ ಬುಧವಾರ ನಡೆಯುವ ಭಾರತ ಮತ್ತು ನ್ಯೂಜಿಲ್ಯಾಂಡ್(India vs New Zealand)​ ನಡುವಣ ಸೆಮಿಫೈನಲ್(IND vs NZ 1st Semi-Final) ಪಂದ್ಯದ​ ಮೇಲೆ ನೆಟ್ಟಿದೆ. ಈ ಪಂದ್ಯವನ್ನು ಕಣ್ತುಂಬಿಕೊಳ್ಳಲು ಅದೆಷ್ಟೋ ಅಭಿಮಾನಿಗಳು ದುಬಾರಿ ಹಣ ವ್ಯಯಿಸಿ ಪಂದ್ಯದ ಟಿಕೆಟ್ ಕೊಂಡುಕೊಂಡಿದ್ದಾರೆ. ಆದರೆ ಕಾಳ ಸಂತೆಯಲ್ಲಿ ನಕಲಿ ಟಿಕೆಟ್​ ಮಾರಾಟವಾಗಿದೆ ಎಂದು ಮುಂಬೈನ ಡಿಸಿಪಿ ಹೇಳಿದ್ದಾರೆ. ಇದು ಕೆಲ ಅಭಿಮಾನಿಗಳಿಗೆ ಆತಂಕ ಉಂಟುಮಾಡಿದೆ.

ಈ ಹಿಂದೆ ಕೋಲ್ಕೊತಾದಲ್ಲಿ ನಡೆದಿದ್ದ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಪಂದ್ಯದಲ್ಲಿ ಅಕ್ರಮ ಟಿಕೆಟ್​ ಮಾರಾಟ ಪ್ರಕರಣದ ಹಕವರನ್ನು ಬಂಧಿಸಲಾಗಿತ್ತು. ಇದೀಗ ಸೆಮಿ ಪಂದ್ಯದ ಟಿಕೆಟ್​ಗಳು ನಕಲಿಯಾಗಿ ಮಾರಾಟ ಮಾಡಿರುವುದು ಮುಂಬೈ ಪೊಲೀಸರ ತನಿಖೆಯಿಂದ ಬೆಳಕಿಗೆ ಬಂದಿದೆ.

ಇದನ್ನೂ ಓದಿ ಸೆಮಿ ಪಂದ್ಯಕ್ಕೂ ಮುನ್ನ ಆಟಗಾರರಿಗೆ ನಾಯಕ ರೋಹಿತ್​ ನೀಡಿದ ಸಲಹೆ ಏನು?

ಮುಂಬೈ ಪೊಲೀಸ್ ಡಿಸಿಪಿ ಪ್ರವೀಣ್ ಮುಂಡೆ ಅವರು ವಿಶ್ವಕಪ್ ಟಿಕೆಟ್‌ಗಳ ಬ್ಲಾಕ್ ಮಾರ್ಕೆಟಿಂಗ್ ಬಗ್ಗೆ ಎಚ್ಚರ ವಹಿಸುವಂತೆ ಎಲ್ಲ ಕ್ರಿಕೆಟ್​ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ. ”ನವೆಂಬರ್ 2 ರಂದು ಇದೇ ಮೈದಾನದಲ್ಲಿ ನಡೆದಿದ್ದ ಭಾರತ ಮತ್ತು ಶ್ರೀಲಂಕಾ ಪಂದ್ಯದ ವೇಳೆ ನಕಲಿ ಟಿಕೆಟ್‌ಗಳನ್ನು ಮಾರಾಟ ಮಾಡಿದ್ದಕ್ಕಾಗಿ ಹಲವರ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಗಿದೆ. ಸೆಮಿ ಫೈನಲ್​ ಪಂದ್ಯದ ಟಿಕೆಟ್​ ಕೂಡ ಇದೇ ರೀತಿ ಮಾರಾಟವಾಗಿದೆ, ಹೀಗಾಗಿ ಅಭಿಮಾನಿಗಳು ಹೆಚ್ಚು ಜಾಗರೂಕರಾಗಿರಲು ನಾನು ಕೇಳುತ್ತೇನೆ. ಟಿಕೆಟ್‌ಗಳನ್ನು ಖರೀದಿಸಲು ಅಧಿಕೃತ ವೆಬ್‌ಸೈಟ್‌ಗಳನ್ನು ಬಳಸಿ ಮತ್ತು ಟಿಕೆಟ್‌ನಲ್ಲಿ ಬರೆದಿರುವ ಮೊತ್ತವನ್ನು ಮಾತ್ರ ಪಾವತಿಸಿ” ಪ್ರವೀಣ್ ವಿನಂತಿಸಿದ್ದಾರೆ.

ಟಿಕೆಟ್​ ಮೌಲ್ಯ 1 ಲಕ್ಷ

ಪಂದ್ಯ ಬೇಡಿಕೆಯನ್ನು ನೋಡಿಕೊಂಡು ಬ್ಲಾಕ್​ ಟಿಕೆಟ್​ ದಂಧೆಗಳನ್ನು ಮಾಡಲಾಗುತ್ತದೆ. ಸಾವಿರ ಮೌಲ್ಯದ ಟಿಕೆಟ್​ಗಳನ್ನು ಲಕ್ಷ ಗಟ್ಟಲೆ ಹಣಕ್ಕೆ ಮಾರಾಟ ಮಾಡಿ ಹಣ ಮಾಡುತ್ತಿದ್ದಾರೆ. ಭಾರತ ಮತ್ತು ಕಿವೀಸ್​ ನಡುವಣ ಸೆಮಿಫೈನಲ್​ ಪಂದ್ಯದ ನಕಲಿ​ ಟಿಕೆಟ್​ ಲಭ್ಯವಾಗಿದೆ. ಇದರ ಮೌಲ್ಯ ಒಂದು ಲಕ್ಷದ ಇಪ್ಪತ್ತು ಸಾವಿರ ರೂ. ಇದನ್ನು ಮಾರಾಟ ಮಾಡಲು ಪ್ರಯತ್ನಿಸಿದಾಗ ಸಿಕ್ಕಿ ಬಿದ್ದಿದ್ದಾರೆ. ಆದರೆ ಈಗಾಗಲೇ ಹಲವು ಟಿಕೆಟ್​ಗಳು ಇದೇ ರೀತಿಯಲ್ಲಿ ಸೇಲ್ ಆಗಿದೆ ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ IND vs NZ: ತಂಡದ ಬಗ್ಗೆ ಕೋಚ್ ರಾಹುಲ್​​ ದ್ರಾವಿಡ್​ ಹೇಳಿದ್ದೇನು?

ಭದ್ರತಾ ಪ್ರೋಟೋಕಾಲ್‌ ಪಾಲಿಸಿ

ಪಂದ್ಯ ಮಧ್ಯಾಹ್ನ 2 ಗಂಟೆಗೆ ಆರಂಭವಾದರೂ ಭದ್ರತಾ ಪ್ರೋಟೋಕಾಲ್‌ಗಳ ಕಾರಣ ಅಭಿಮಾನಿಗಳು ಮುಂಚಿತವಾಗಿ ಕ್ರೀಡಾಂಗಣಕ್ಕೆ ಭೇಟಿ ನೀಡಬೇಕು. ಬೆಳಗ್ಗೆ 11:30ಕ್ಕೆ ಕ್ರೀಡಾಂಗಣವನ್ನು ತೆರೆಯುತ್ತೇವೆ. ಬ್ಯಾಗ್‌ಗಳು, ತಂಬಾಕು ಉತ್ಪನ್ನಗಳು, ನಾಣ್ಯಗಳು, ಕಾಗದ, ಪೆನ್ಸಿಲ್‌ಗಳು, ಪವರ್ ಬ್ಯಾಂಕ್‌ಗಳು, ನೀರಿನ ಬಾಟಲಿಗಳು ಮತ್ತು ಆಕ್ಷೇಪಾರ್ಹ ಬ್ಯಾನರ್‌ಗಳು ಕ್ರೀಡಾಂಗಣದ ಒಳಗೆ ನಿಷೇಧಿಸಲಾಗಿದೆ. ಮೊಬೈಲ್ ಫೋನ್, ಕೈಗಡಿಯಾರ ಮತ್ತು ವ್ಯಾಲೆಟ್‌ಗಳನ್ನು ಮಾತ್ರ ಕ್ರೀಡಾಂಗಣದೊಳಗೆ ತೆಗೆದುಕೊಂಡು ಹೋಗಲು ಅನುಮತಿಸಲಾಗಿದೆ. ಎಂದು ಮುಂಬೈ ಪೊಲೀಸರು ಆದೇಶ ಹೊರಡಿಸಿದ್ದಾರೆ.

Exit mobile version