ಮುಂಬಯಿ: ಟೀಮ್ ಇಂಡಿಯಾದ ಆಟಗಾರ ಮನೀಶ್ ಪಾಂಡೆಗೆ (Manish Pandey) ಬಿಸಿಸಿಐ(BCCI) ಬೌಲಿಂಗ್ ನಿಷೇಧ ಹೇರಿದೆ. ಬಿಸಿಸಿಐ ಪ್ರಕಟಿಸಿರುವ ಅನುಮಾನಸ್ಪದ ಬೌಲಿಂಗ್ ಶೈಲಿಯ ಪಟ್ಟಿಯಲ್ಲಿ ಒಟ್ಟು 8 ಆಟಗಾರರು ಸೇರಿದ್ದಾರೆ. ಆದರೆ ನಿಷೇಧ ಹೇರಿದ್ದು ಮನೀಶ್ ಪಾಂಡೆ ಮತ್ತು ಕೆಎಲ್ ಶ್ರೀಜಿತ್ಗೆ.
ಈಗಾಗಲೇ ಘಾತಕ ಬೌಲಿಂಗ್ ಮೂಲಕ ಗಮನ ಸೆಳೆದು ಟೀಮ್ ಇಂಡಿಯಾ ಪರ ಆಡಿರುವ ಯುವ ಬೌಲರ್ ಚೇತನ್ ಸಕಾರಿಯಾ(Chetan Sakariya) ಹೆಸರು ಕೂಡ ಕಾಣಿಸಿಕೊಂಡಿರುವುದು ಅಚ್ಚರಿಗೆ ಕಾರಣವಾಗಿದೆ. ಸಕರಿಯಾ ಐಪಿಎಲ್‌ನಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಪರ ಆಡಿದ್ದಾರೆ. ಭಾರತ ಪರ 2 ಟಿ20 ಮತ್ತು ಏಕೈಕ ಏಕದಿನ ಪಂದ್ಯ ಆಡಿ ಒಟ್ಟು 5 ವಿಕೆಟ್ ಕಿತ್ತರು.
ಮನೀಶ್ ಪಾಂಡೆ ದೇಶೀಯ ಟೂರ್ನಿಗಳಲ್ಲಿ ಇದುವರೆಗೆ 193.5 ಓವರ್ಗಳನ್ನು ಮಾಡಿದ್ದಾರೆ. ಈ ವೇಳೆ 23 ವಿಕೆಟ್ಗಳನ್ನು ಕಬಳಿಸಿದ್ದಾರೆ. ಆದರೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಇದುವರೆಗೆ ಬೌಲಿಂಗ್ ನಡೆಸಿಲ್ಲ. ಅಲ್ಲದೆ ಬ್ಯಾಟರ್ ಆಗಿರುವ ಕಾರಣ ಅವರಿಗೆ ಬೌಲಿಂಗ್ ನಡೆಸುವ ಅಗತ್ಯವೂ ಇಲ್ಲ. ಹೀಗಾಗಿ ಅವರಿಗೆ ಈ ನಿಷೇಧ ದೊಡ್ಡ ಪರಿಣಾಮ ಬೀರದು. ಆದರೆ ಪೂರ್ಣ ಪ್ರಮಾಣದ ಬೌಲರ್ ಆಗಿರುವ ಚೇತನ್ ಸಕಾರಿಯಾ ಸದ್ಯ ಶಂಕಿತ ಶೈಲಿಯ ಬೌಲರ್ಗಳ ಪಟ್ಟಿಯಲ್ಲಿರುವುದು ಅವರಿಗೆ ಹಿನ್ನಡೆ ತಂದಿದೆ. ಶೀಘ್ರದಲ್ಲೇ ಅವರು ತಮ್ಮ ಬೌಲಿಂಗ್ ಶೈಲಿಯನ್ನು ಬದಲಿಸುವ ಅಗತ್ಯವಿದೆ.
ಇದನ್ನೂ ಓದಿ ಐಪಿಎಲ್ ಮಿನಿ ಹರಾಜು ಸಮಯದಲ್ಲಿ ಬದಲಾವಣೆ; ಪರಿಷ್ಕೃತ ಸಮಯ ಪ್ರಕಟ
ಈ ಬಾರಿಯ ಹಾರಾಜಿನಲ್ಲಿ ಒಟ್ಟು 14 ಕರ್ನಾಟಕದ ಆಟಗಾರರು ಕಾಣಿಸಿಕೊಂಡಿದ್ದಾರೆ. ಇದರಲ್ಲಿ ಮನೀಶ್ ಪಾಂಡೆ ಕೂಡ ಒಬ್ಬರಾಗಿದ್ದಾರೆ. ಉಳಿದವರೆಂದರೆ ಜಗದೀಶ್ ಸುಚಿತ್, ಶುಭಾಂಗ್ ಹೆಗ್ಡೆ, ನಿಹಾಲ್ ಉಲ್ಲಾಳ್, ಬಿ.ಆರ್ ಶರತ್, ಮನ್ವಂತ್ ಕುಮಾರ್, ಎಲ್.ಆರ್ ಚೇತನ್, ಕೆ.ಎಲ್ ಶ್ರೀಜಿತ್, ಎಂ. ವೆಂಕಟೇಶ್, ಮೋನಿಶ್ ರೆಡ್ಡಿ, ಅಭಿಲಾಷ್ ಶೆಟ್ಟಿ.
50 ಲಕ್ಷ ಮೂಲಬೆಲೆಗೆ ಕಾಣಿಸಿಕೊಂಡಿರುವ ಮನೀಶ್ ಪಾಂಡೆ ಅವರನ್ನು ರಾಯಲ್ ಚಾಲೆಂಜರ್ಸ್ ತಂಡ ಖರೀದಿ ಮಾಡುವ ಆಸಕ್ತಿ ಹೊಂದಿದೆ ಎಂದು ವರದಿಯಾಗಿದೆ. ಆಟಗಾರರ ಹರಾಜು ಇದೇ ಮಂಗಳವಾರ(ಡಿ.19) ರಂದು ದುಬೈನಲ್ಲಿ ನಡೆಯಲಿದೆ. 170 ಐಪಿಎಲ್ ಆಡಿರುವ ಪಾಂಡೆ 3808 ರನ್ ಬಾರಿಸಿದ್ದಾರೆ. 1 ಶತಕ ಮತ್ತು 22 ಅರ್ಧಶತಕ ಬಾರಿಸಿದ್ದಾರೆ. 114 ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. ಈ ಹಿಂದೆ ಆರ್ಸಿಬಿ ಪರವಾಗಿಯೂ ಪಾಂಡೆ ಆಡಿದ್ದರು.
ಮಿನಿ ಹರಾಜಿನಲ್ಲಿ 50 ಲಕ್ಷ ಮೂಲಬೆಲೆ ಹೊಂದಿರುವ ಆಟಗಾರರ ಪಟ್ಟಿ
ಮನೀಶ್ ಪಾಂಡೆ-ಭಾರತ, ಕರುಣ್ ನಾಯರ್-ಭಾರತ, ಜಯದೇವ್ ಉನದ್ಕತ್-ಭಾರತ, ಚೇತನ್ ಸಕರಿಯಾ-ಭಾರತ, ಶಿವಂ ಮಾವಿ-ಭಾರತ, ಕೆಎಸ್ ಭರತ್-ಭಾರತ, ಸಂದೀಪ್ ವಾರಿಯರ್- ಭಾರತ, ಬರೀಂದರ್ ಸ್ರಾನ್-ಭಾರತ, ಸಿದ್ಧಾರ್ಥ್ ಕೌಲ್-ಭಾರತ, ವರುಣ್ ಆರನ್-ಭಾರತ, ಹನುಮ ವಿಹಾರಿ-ಭಾರತ, ರಚಿನ್ ರವೀಂದ್ರ – ನ್ಯೂಜಿಲ್ಯಾಂಡ್, ಅಜ್ಮತುಲ್ಲಾ ಓಮರ್ ಝೈ – ಅಫಘಾನಿಸ್ತಾನ, ಲ್ಯೂಕ್ ವುಡ್ – ಇಂಗ್ಲೆಂಡ್, ಲಿಜಾಡ್ ವಿಲಿಯಮ್ಸ್ – ದಕ್ಷಿಣ ಆಫ್ರಿಕಾ, ನುವಾನ್ ತುಷಾರ – ಶ್ರೀಲಂಕಾ, ಒಶಾನೆ ಥಾಮಸ್ – ವೆಸ್ಟ್ ಇಂಡೀಸ್, ಜಾರ್ಜ್ ಸ್ಕ್ರಿಮ್ಶಾ – ಇಂಗ್ಲೆಂಡ್, ರಿಚರ್ಡ್ ನಾಗ್ವಾರ – ಜಿಂಬಾಬ್ವೆ, ಬ್ಲೆಸ್ಸಿಂಗ್ ಮುಜರ್ಬಾನಿ – ಜಿಂಬಾಬ್ವೆ, ಒಬೆಡ್ ಮೆಕಾಯ್ – ವೆಸ್ಟ್ ಇಂಡೀಸ್, ಲಹಿರು ಕುಮಾರ- ಶ್ರೀಲಂಕಾ, ಸ್ಪೆನ್ಸರ್ ಜಾನ್ಸನ್ – ಆಸ್ಟ್ರೇಲಿಯಾ, ಶೋರಿಫುಲ್ ಇಸ್ಲಾಂ – ಬಾಂಗ್ಲಾದೇಶ, ರಿಚರ್ಡ್ ಗ್ಲೀಸನ್ – ಇಂಗ್ಲೆಂಡ್, ಬೆನ್ ದ್ವಾರಶಿಯಸ್ – ಆಸ್ಟ್ರೇಲಿಯಾ, ಫರೀದ್ ಅಹ್ಮದ್ – ಅಫ್ಘಾನಿಸ್ತಾನ, ಜಾನ್ಸನ್ ಚಾರ್ಲ್ಸ್ – ವೆಸ್ಟ್ ಇಂಡೀಸ್, ಒಡಿಯನ್ ಸ್ಮಿತ್ – ವೆಸ್ಟ್ ಇಂಡೀಸ್, ಮ್ಯಾಥ್ಯೂ ಶಾರ್ಟ್ –ಆಸ್ಟ್ರೇಲಿಯಾ, ದಾಸುನ್ ಶನಕ – ಶ್ರೀಲಂಕಾ, ವಿಯಾಮ್ ಮುಲ್ಡರ್ – ದಕ್ಷಿಣ ಆಫ್ರಿಕಾ, ಕೇಶವ ಮಹಾರಾಜ್ – ದಕ್ಷಿಣ ಆಫ್ರಿಕಾ, ಜಾರ್ಜ್ ಲಿಂಡೆ -ದಕ್ಷಿಣ ಆಫ್ರಿಕಾ, ಜಾರ್ಜ್ ಕಾರ್ಟನ್ – ಇಂಗ್ಲೆಂಡ್, ಮ್ಯಾಥ್ಯೂ ಫೋರ್ಡ್ – ವೆಸ್ಟ್ ಇಂಡೀಸ್, ಬೆನ್ ಕಟಿಂಗ್ – ಆಸ್ಟ್ರೇಲಿಯಾ, ಬ್ರೈಡನ್ ಕಾರ್ಸೆ – ಇಂಗ್ಲೆಂಡ್, ಚರಿತ್ ಅಸಲಂಕಾ – ಶ್ರೀಲಂಕಾ, ರೆಹಾನ್ ಅಹ್ಮದ್- ಇಂಗ್ಲೆಂಡ್, ಖೈಜ್ ಅಹ್ಮದ್ – ಅಫಘಾನಿಸ್ತಾನ, ವೆಸ್ಲಿ ಅಗರ್ – ಆಸ್ಟ್ರೇಲಿಯಾ, ನಜಿಬುಲ್ಲಾ ಜದ್ರಾನ್ – ಅಫಘಾನಿಸ್ತಾನ, ಇಬ್ರಾಹಿಂ ಜದ್ರಾನ್ – ಅಫಘಾನಿಸ್ತಾನ, ಬ್ರಾಂಡನ್ ಕಿಂಗ್ – ವೆಸ್ಟ್ ಇಂಡೀಸ್, ರೀಜಾ ಹೆಂಡ್ರಿಕ್ಸ್ – ದಕ್ಷಿಣ ಆಫ್ರಿಕಾ, ಸ್ಯಾಮ್ಯುಯೆಲ್ ಹೈನ್ – ಇಂಗ್ಲೆಂಡ್, ಮಾರ್ಕ್ ಚಾಪ್ಮನ್ – ನ್ಯೂಜಿಲ್ಯಾಂಡ್, ಅಲಿಕ್ ಅಥನಾಜೆ – ವೆಸ್ಟ್ ಇಂಡೀಸ್, ಮೊಹಮ್ಮದ್ ವಕಾರ್ – ಅಫಘಾನಿಸ್ತಾನ, ಅಕೇಲ್ ಹೊಸೈನ್ – ವೆಸ್ಟ್ ಇಂಡೀಸ್, ದಿಲ್ಶನ್ ಮಧುಶಂಕ – ಶ್ರೀಲಂಕಾ, ಟ್ರಿಸ್ಟಾನ್ ಸ್ಟಬ್ಸ್ – ದಕ್ಷಿಣ ಆಫ್ರಿಕಾ, ಕುಸಾಲ್ ಮೆಂಡಿಸ್ – ಶ್ರೀಲಂಕಾ.