Site icon Vistara News

UEFA | ವಿಮೆನ್ಸ್‌ ಚಾಂಪಿಯನ್ಸ್ ಲೀಗ್‌ನಲ್ಲಿ ಆಡಿದ ಭಾರತದ ಮೊದಲ ಮಹಿಳಾ ಫುಟ್ಬಾಲ್ ಆಟಗಾರ್ತಿ ಮನಿಶಾ

uefa

ನವ ದೆಹಲಿ : ಭಾರತದ ಯುವ ಸ್ಟ್ರೈಕರ್‌ ಮನಿಶಾ ಕಲ್ಯಾಣ್‌ UEFA ವಿಮೆನ್ಸ್‌ ಚಾಂಪಿಯನ್ಸ್ ಲೀಗ್‌ನಲ್ಲಿ ಆಡಿದ ಭಾರತದ ಮೊದಲ ಮಹಿಳಾ ಫುಟ್ಬಾಲ್‌ ಆಟಗಾರ್ತಿ ಎಂಬ ಖ್ಯಾತಿಯನ್ನು ತಮ್ಮದಾಗಿಕೊಂಡಿದ್ದಾರೆ. ಅವರು ಯುರೋಪಿಯನ್‌ ಕ್ಲಬ್‌ ಕಾಂಪಿಟೀಷನ್‌ನಲ್ಲಿ ಅಪೊಲಾನ್‌ ಲೇಡಿಸ್‌ ಎಫ್‌ಸಿ ಕ್ಲಬ್‌ ಪರ ಕಣಕ್ಕೆ ಇಳಿಯುವ ಮೂಲಕ ಈ ಸಾಧನೆ ಮಾಡಿದ್ದಾರೆ.

೨೦ ವರ್ಷದ ಭಾರತದ ಆಟಗಾರ್ತಿ ಪಂದ್ಯದ ೬೦ನೇ ನಿಮಿಷದಲ್ಲಿ ತಮ್ಮ ತಂಡದ ಮರಿಲಿನಾ ಜಾರ್ಜಿಯೊ ಅವರ ಬದಲಿಗೆ ಮೈದಾನಕ್ಕೆ ಇಳಿಯುವ ಮೂಲಕ ವಿಮೆನ್ಸ್‌ ಚಾಂಪಿಯನ್ಸ್ ಲೀಗ್‌ನಲ್ಲಿ ಆಡಿದ ಶ್ರೇಯಸ್ಸು ತಮ್ಮದಾಗಿಸಿಕೊಂಡರು. ಆ ಪಂದ್ಯದಲ್ಲಿ ಮನಿಶಾ ಅವರ ತಂಡ ಲ್ಯಾಟ್ವಿನಾ ಟಾಪ್‌ ಫೈಟ್ ಕ್ಲಬ್‌ ವಿರುದ್ಧ ೩-೦ ಗೋಲ್‌ಗಳಿಂದ ಜಯ ಸಾಧಿಸಿತು.

ಮನಿಶಾ ಕಲ್ಯಾಣ್‌ ರಾಷ್ಟ್ರೀಯ ತಂಡದಲ್ಲೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಅಲ್ಲದೆ, ಇಂಡಿಯನ್‌ ವಿಮೆನ್ಸ್‌ ಲೀಗ್‌ನಲ್ಲಿ ಗೋಕುಲಮ್‌ ಕೇರಳ ತಂಡದ ಪರವೂ ಅತ್ಯುತ್ತಮ ಪ್ರದರ್ಶನ ತೋರಿದ್ದಾರೆ. ಅದಕ್ಕಾಗಿ ೨೦೨೧-೨೨ರಲ್ಲಿ ಎಐಎಫ್‌ಎಫ್‌ನ ವರ್ಷದ ಫುಟ್ಬಾಲ್‌ ಆಟಗಾರ್ತಿ ಪ್ರಶಸ್ತಿ ಪಡೆದುಕೊಂಡಿದ್ದರು. ಅತ್ಯುತ್ತಮ ಪ್ರದರ್ಶನ ತೋರುತ್ತಿರುವ ಅವರ ಜತೆ ಅಪೊಲಾನ್‌ ಲೇಡಿಸ್‌ ಎಫ್‌ಸಿ ಕ್ಲಬ್‌ ಒಪ್ಪಂದ ಮಾಡಿಕೊಂಡಿದೆ.

Exit mobile version