Site icon Vistara News

Manoj Tiwary: ರಣಜಿ ಟ್ರೋಫಿಯನ್ನು ರದ್ದು ಮಾಡುವಂತೆ ಬಂಗಾಳ ಕ್ರೀಡಾ ಸಚಿವ ಒತ್ತಾಯ

manoj tiwari

ಕೋಲ್ಕತ್ತಾ: ಭಾರತದ ಪ್ರತಿಷ್ಠಿತ ದೇಶೀ ಕ್ರಿಕೆಟ್​ ಟೂರ್ನಿಯಾದ ರಣಜಿ ಟ್ರೋಫಿಯನ್ನು(Ranji Trophy) ರದ್ದು ಮಾಡಬೇಕು ಎಂದು ಬಂಗಾಳ(first-class cricket for Bengal) ತಂಡದ ನಾಯಕ ಮನೋಜ್ ತಿವಾರಿ(Manoj Tiwary) ಆಗ್ರಹಿಸಿದ್ದಾರೆ. ಈ ಟೂರ್ನಿಯ ಹಲವು ಸಮಸ್ಯೆಗಳನ್ನು ಮುಂದಿಟ್ಟು ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಟೂರ್ನಿಯನ್ನೇ ರದ್ದು ಮಾಡಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.

‘ಮುಂದಿನ ಋತುವಿನಿಂದ ರಣಜಿ ಟ್ರೋಫಿಯನ್ನು ಕ್ಯಾಲೆಂಡರ್‌ನಿಂದ ರದ್ದುಗೊಳಿಸಬೇಕು. ಟೂರ್ನಿಯಲ್ಲಿ ಹಲವು ತಪ್ಪುಗಳಾಗಿವೆ. ಶ್ರೀಮಂತ ಇತಿಹಾಸ ಹೊಂದಿರುವ ಈ ಪ್ರತಿಷ್ಠಿತ ಪಂದ್ಯಾವಳಿಯನ್ನು ಉಳಿಸಲು ಹಲವು ಮಾರ್ಪಟು ಮಾಡಬೇಕಿದೆ. ಈಗಿರುವ ನಿಯಮದಿಂದ ಟೂರ್ನಿಯು ತನ್ನ ಆಕರ್ಷಣೆ ಮತ್ತು ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದೆ. ಇದರಿಂದ ಸಂಪೂರ್ಣವಾಗಿ ನಿರಾಶೆಗೊಂಡಿದ್ದೇನೆ’ ಎಂದು ಮನೋಜ್ ತಿವಾರಿ ಟ್ವೀಟ್​ ಮಾಡಿದ್ದಾರೆ.

ಇದನ್ನೂ ಓದಿ Ranji Trophy : ಪ್ರಥಮ ದರ್ಜೆ ಕ್ರಿಕೆಟ್ ಇತಿಹಾಸದಲ್ಲಿ ವಿಶ್ವ ದಾಖಲೆ ಬರೆದ ಹೈದರಾಬಾದ್​ ಆಟಗಾರ

ಡ್ರೆಸ್ಸಿಂಗ್ ರೂಮ್​ ವ್ಯವಸ್ಥೆ ಸರಿಯಿಲ್ಲ


ಡ್ರೆಸ್ಸಿಂಗ್ ರೂಮ್​ ವಿಚಾರದಲ್ಲಿಯೂ ಮನೋಜ್ ತಿವಾರಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ತಿರುವನಂತಪುರಂನ ಸೇಂಟ್ ಕ್ಸೇವಿಯರ್ ಕಾಲೇಜ್ ಮೈದಾನದಲ್ಲಿ ಕಳಪೆ ಡ್ರೆಸ್ಸಿಂಗ್ ರೂಮ್ ಸೌಲಭ್ಯವಿದೆ. ನಮ್ಮ ಡ್ರೆಸ್ಸಿಂಗ್ ರೂಮ್ ಮತ್ತು ಎದುರಿನ ಡ್ರೆಸ್ಸಿಂಗ್ ರೂಮ್ ಪರಸ್ಪರ ಹತ್ತಿರವಾಗಿರುವುದರಿಂದ ಇತ್ತಂಡಗಳಿಗೂ ಗೌಪ್ಯತೆ ಇಲ್ಲ ಎಂದು ಆರೋಪಿಸಿದ್ದಾರೆ. ಸದ್ಯ ಬಂಗಾಳ ತಂಡವು ಎಲೈಟ್ ಗ್ರೂಪ್ ಬಿ ಗೇಮ್‌ ನಲ್ಲಿ ಕೇರಳ ವಿರುದ್ಧ ಆಡುತ್ತಿದೆ.

ನಿವೃತ್ತಿ ಹಿಂಪಡೆದು ಮತ್ತೆ ಕಣಕ್ಕಿಳಿದಿದ್ದ ತಿವಾರಿ


ಕಳೆದ ವರ್ಷ ಆಗಸ್ಟ್​ 3ರಂದು ಮನೋಜ್​ ತಿವಾರಿ ಟ್ವಿಟರ್​ನಲ್ಲಿ ‘ಧನ್ಯವಾದಗಳು’ ಎಂದು ಪೋಸ್ಟ್​ ಮಾಡುವ ಮೂಲಕ ತಮ್ಮ ಕ್ರಿಕೆಟ್​ ವಿದಾಯವನ್ನು ಘೋಷಿಸಿದ್ದರು. “ತಮ್ಮ ವೃತ್ತಿಜೀವನದಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆಗಳು. ಈ ಆಟ ನನಗೆ ಎಲ್ಲವನ್ನೂ ನೀಡಿದೆ, ನಾನು ಕನಸು ಕಾಣದ ಪ್ರತಿಯೊಂದು ವಿಷಯವನ್ನೂ ಈ ಆಟದ ಮೂಲಕ ಅರ್ಥೈಸಿಕೊಂಡಿದ್ದೇನೆ. ನನ್ನ ಕ್ರಿಕೆಟ್​ ಜೀವನದ ಹಾಗೆ ಯಾವ ಕ್ರಿಕೆಟಿಗನು ಏರಿಳಿತಗಳನ್ನು ಕಂಡರಲು ಸಾಧ್ಯವಿಲ್ಲ” ಎಂದು ಹೇಳಿ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದರು. ಇದಾದ ಮೂರು ದಿನಗಳಲ್ಲಿ ತಮ್ಮ ನಿವೃತ್ತಿ ನಿರ್ಧಾರವನ್ನು ಬದಲಿಸಿ ಮತ್ತೆ ಕ್ರಿಕೆಟ್​ ಆಡುವುದಾಗಿ ಹೇಳಿದ್ದರು. ಇದೀಗ ಮತ್ತೆ ತಮ್ಮ ನಿವೃತ್ತಿ ಬಗ್ಗೆ ಮಾತನಾಡಿದ್ದು ಈ ಬಾರಿಯ ಟೂರ್ನಿ ಕೊನೆಯದ್ದು ಎಂದು ಹೇಳಿದ್ದಾರೆ.

ಬಂಗಾಳದ ಕ್ರೀಡಾ ಸಚಿವ


ಕ್ರಿಕೆಟ್​ ಜತೆಗೆ ರಾಜಕೀಯದಲ್ಲೂ ಸಿಕ್ರಿಯವಾಗಿದ್ದ ಮನೋಜ್​ ತಿವಾರಿ(Minister of State for Youth Services and Sports of West Bengal) ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ(mamata banerjee) ಅವರ ಸರ್ಕಾರದಲ್ಲಿ ಕ್ರೀಡಾ ಸಚಿವರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ತೋರುವ ಯುವ ಜನತೆಗೆ ಅನೇಕ ಯೋಜನೆಗಳನ್ನು ಕೂಡ ಅವರು ಜಾರಿಗೆ ತಂದಿದ್ದಾರೆ.

Exit mobile version