ನವದೆಹಲಿ: ಪ್ಯಾರಿಸ್ ಒಲಿಂಪಿಕ್ಸ್ನ(Paris Olympics) ಶೂಟಿಂಗ್ ವಿಭಾಗದಲ್ಲಿ ಅವಳಿ ಕಂಚಿನ ಪದಕ ಗೆದ್ದ ಮನು ಭಾಕರ್(Manu Bhaker) ಅವರ ಜಾಹೀರಾತು ಮೌಲ್ಯದಲ್ಲಿ ಇದೀಗ ಭಾರೀ ಏರಿಕೆ ಕಂಡಿದೆ. ಮನು ಅವರ ಬ್ರ್ಯಾಂಡ್ ಮೌಲ್ಯ ಈಗ 1.5 ರೂ. ಆಗಿದೆ. ಅವರು ಪ್ರತಿ ಡಿಜಿಟಲ್ ಜಾಹೀರಾತಿಗೂ 30 ಲಕ್ಷ ರೂ. ಸಂಭಾವನೆ ಪಡೆಯಲಿದ್ದಾರೆ ಎನ್ನಲಾಗಿದೆ.
ಪ್ರಮುಖವಾಗಿ ತಂಪು ಪಾನೀಯ, ಸ್ಕಿನ್ ಕೇರ್, ನ್ಯೂಟ್ರೀಷಿಯನ್ ಕಂಪನಿಗಳು ಮನು ಅವರನ್ನು ಸಂಪರ್ಕಿಸಿವೆ ಎಂದು ತಿಳಿದುಬಂದಿದೆ. ಕೆಲ ದಿನಗಳ ಹಿಂದೆ 40 ಕಂಪನಿಗಳು(40 brands chasing Manu Bhaker) ಮನು ಅವರನ್ನು ಸಂಪರ್ಕಿಸಿದ್ದವು ಎಂದು ವರದಿಯಾಗಿತ್ತು. ಭಾರತ ತಂಡದ ಸ್ಟಾರ್ ಕ್ರಿಕೆಟಿಗರು ಜಾಹೀರಾತು ಒಪ್ಪಂದಗಳಿಗೆ ವಾರ್ಷಿಕ 3 ರಿಂದ 6 ಕೋಟಿ ರೂ. ಪಡೆಯುತ್ತಾರೆ. ಬ್ಯಾಡ್ಮಿಂಟನ್ ಆಟಗಾರ್ತಿ ಪಿ,ವಿ ಸಿಂಧು 2022ರಲ್ಲಿ 2.21 ಕೋಟಿ ರೂ. ಮೊತ್ತದ ಒಪ್ಪಂದ ಪಡೆದಿದ್ದೇ ಭಾರತದಲ್ಲಿ ಕ್ರಿಕೆಟಿಗರ ಹೊರತಾಗಿ ಇತರ ಕ್ರೀಡಾಪಟುಗಳು ಪಡೆದ ಇದುವರೆಗಿನ ಗರಿಷ್ಠ ಮೊತ್ತವಾಗಿದೆ. ಒಲಿಂಪಿಕ್ಸ್ ಪದಕ ಗೆಲ್ಲುವ ಮೊದಲು ಮನು ಪ್ರತಿ ಒಪ್ಪಂದವನ್ನು 20-25 ಲಕ್ಷ ರೂ.ಗೆ ಮಾಡಿಕೊಳ್ಳುತ್ತಿದ್ದರು. ಸದ್ಯ ಮನು ಪಾಮ್ಯಾಕ್ಸ್ ಆಕ್ಟಿವ್ವೇರ್ಗೆ ಮಾತ್ರ ಪ್ರಚಾರ ರಾಯಭಾರಿಯಾಗಿದ್ದಾರೆ.
ಕೆಲವು ದಿನಗಳ ಹಿಂದಷ್ಟೇ ಮನು ಭಾಕರ್ ಅವರು 12 ಕಂಪನಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದರು. ಪದಕ ಸಾಧನೆಯ ಬಳಿಕ ತನ್ನ ಚಿತ್ರಗಳನ್ನು ಬಳಸಿ, ತನಗೆ ಅಭಿನಂದನೆ ಸಲ್ಲಿಸುವ ಜಾಹೀರಾತುಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅನಧಿಕೃತವಾಗಿ ಪ್ರಕಟಿಸಿದ್ದು ಇದಕ್ಕೆ ಕಾರಣ. ಬ್ರ್ಯಾಂಡ್ಗಳು ತನಗೆ ಪ್ರಾಯೋಜಕತ್ವ ನೀಡಿರದಿದ್ದರೂ ಮತ್ತು ತನ್ನನ್ನು ಪ್ರಚಾರ ರಾಯಭಾರಿಯಾಗಿ ನೇಮಿಸಿಕೊಳ್ಳದಿದ್ದರೂ, ಇದೀಗ ತನ್ನ ಯಶಸ್ಸಿನಲ್ಲಿ ಪಾಲು ಪಡೆಯಲು ಮುಂದಾಗುವ ಮೂಲಕ ಉಚಿತ ಮಾರ್ಕೆಟಿಂಗ್ ಮಾಡಿವೆ ಎಂದು ಮನು ಅವರ ವ್ಯವಹಾರಗಳನ್ನು ನೋಡಿಕೊಳ್ಳುವ ತಂಡ ಆರೋಪಿಸಿ ಕಾನೂನು ನೋಟಿಸ್ ಕಳುಹಿಸಲು ಸಿದ್ಧತೆ ನಡೆಸಿದೆ ಎನ್ನಲಾಗಿದೆ. ವ್ಯಕ್ತಿಯೊಬ್ಬರಿಗೆ ಪ್ರಾಯೋಜಕತ್ವ ಒಪ್ಪಂದ ನೀಡದೆ ಅವರ ಚಿತ್ರಗಳ ಹಕ್ಕು ಪಡೆದುಕೊಳ್ಳುವಂತಿಲ್ಲ. ಇದು ಭಾರತದಲ್ಲಿ ಕಾನೂನುಬಾಹಿರ ಎನಿಸಿದೆ.
ಇದನ್ನೂ ಓದಿ Manu Bhaker : ಶೂಟಿಂಗ್ನಿಂದ ಬ್ರೇಕ್ ತೆಗೆದುಕೊಂಡ ಮನು ಭಾಕರ್, ಡೆಲ್ಲಿಯಲ್ಲಿ ನಡೆಯುವ ವಿಶ್ವಕಪ್ಗೆ ಅಲಭ್ಯ
ಭಾಕರ್ (Manu Bhaker) ಮೂರು ತಿಂಗಳ ವಿರಾಮ ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ. ಹೀಗಾಗಿ ಅಕ್ಟೋಬರ್ನಲ್ಲಿ ನಡೆಯಲಿರುವ ಶೂಟಿಂಗ್ ವಿಶ್ವಕಪ್ನಿಂದ ಹೊರಕ್ಕೆ ಉಳಿಯಲಿದ್ದಾರೆ ಎಂದು ಅವರ ಕೋಚ್ ಜಸ್ಪಾಲ್ ರಾಣಾ ಮಾಹಿತಿ ನೀಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ತಂಡ ಸ್ಪರ್ಧೆಯಲ್ಲಿ 22 ವರ್ಷದ ಭಾಕರ್ ಅವರು ಎರಡು ಪದಕ ಗೆದ್ದು ಇತಿಹಾಸ ಬರೆದಿದ್ದರು.
ಮಂಗಳವಾರ ಮುಂಜಾನೆ ಪ್ಯಾರಿಸ್ನಿಂದ ಹಿಂದಿರುಗಿದ ಮನು ಭಾಕರ್ ಕ್ರೀಡೆಯಿಂದ ಮೂರು ತಿಂಗಳ ವಿರಾಮ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅವರು ಮೂರು ತಿಂಗಳ ವಿರಾಮ ತೆಗೆದುಕೊಳ್ಳುತ್ತಿರುವುದರಿಂದ ಅಕ್ಟೋಬರ್ನಲ್ಲಿ ಡೆಯಲಿರುವ ಶೂಟಿಂಗ್ ವಿಶ್ವಕಪ್ನಲ್ಲಿ ಭಾಗವಹಿಸುತ್ತಾರೆಯೇ ಎಂದು ನನಗೆ ಖಚಿತವಿಲ್ಲ. ಇದು ಸಾಮಾನ್ಯ ವಿರಾಮ. ಬಹಳ ಸಮಯದಿಂದ ಅವರು ತರಬೇತಿ ಪಡೆಯುತ್ತಿದ್ದಾರೆ.” ರಾಣಾ ತಿಳಿಸಿದ್ದಾರೆ. ಅಕ್ಟೋಬರ್ 13 ರಿಂದ 18 ರವರೆಗೆ ನವದೆಹಲಿಯಲ್ಲಿ ಶೂಟಿಂಗ್ ವಿಶ್ವ ಕಪ್ ಆಯೋಜನೆಗೊಂಡಿದೆ.