ನವದೆಹಲಿ: ಪ್ಯಾರಿಸ್ ಒಲಿಂಪಿಕ್(Paris Paralympic 2024) ಬೆಳ್ಳಿ ಪದಕ ವಿಜೇತ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ(Manu Bhaker-Neeraj Chopra) ಹಾಗೂ ಶೂಟಿಂಗ್ನಲ್ಲಿ ಅವಳಿ ಕಂಚಿನ ಪದಕ ಗೆದ್ದ ಮನು ಭಾಕರ್ ಮಧ್ಯೆ ಪ್ರೇಮಾಂಕುರವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಸುದ್ದಿಯಾಗಿತ್ತು. ಇವರಿಬ್ಬರು ಆತ್ಮೀಯವಾಗಿ ಮಾತನಾಡುತ್ತಿರುವ ವಿಡಿಯೊ ಭಾರೀ ಚರ್ಚೆಗೆ ಗ್ರಾಸವಾಗಿತ್ತು,. ಅಲ್ಲದೆ ಮನು(Manu Bhaker) ತಾಯಿ ಕೂಡ ನೀರಜ್ ಜತೆ ಕಾಣಿಸಿಕೊಂಡಿದ್ದ ಕಾರಣ ನೀರಜ್-ಮನು ಮಧ್ಯೆ ಪ್ರೀತಿ ಇರುವುದು ಖಚಿತ ಎನ್ನಲಾಗಿತ್ತು. ಇದೇ ವಿಚಾರವಾಗಿ ಇದೀಗ ಮನು ಭಾಕರ್ ತಂದೆ(Manu Bhaker Father) ರಾಮ್ ಕಿಶನ್(Ram Kishan) ಸ್ಪಷ್ಟನೆ ನೀಡಿದ್ದಾರೆ.
ಮಗಳ(ಮನು ಭಾಕರ್) ಮದುವೆ ವಿಚಾರವಾಗಿ ಹರಿದಾಡುತ್ತಿರುವ ವದಂತಿಗಳಿಗೆ ಪ್ರತಿಕ್ರಿಯೆ ನೀಡಿರುವ ತಂದೆ ರಾಮ್ ಕಿಶನ್, “ನನ್ನ ಮಗಳು ಇನ್ನೂ ಚಿಕ್ಕ ವಯಸ್ಸಿನವಳು. ಈಗ ವಿವಾಹವಾಗುವ ವಯಸ್ಸು ಕೂಡ ಅವಳದ್ದಲ್ಲ. ಸದ್ಯ ಮದುವೆ ಬಗ್ಗೆ ಯಾವ ಯೋಚನೆಯೂ ಇಲ್ಲ. ಮನು ತಾಯಿ ನೀರಜ್ರನ್ನು ತನ್ನ ಸ್ವಂತ ಮಗನಂತೆ ಕಾಣುತ್ತಾರೆ. ಹೀಗಾಗಿ ನೀರಜ್ ಜತೆ ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡರು” ಎಂದು ಹೇಳುವ ಮೂಲಕ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ.
ಮನು ಭಾಕರ್ ಅವರ ತಾಯಿ ನೀರಜ್(Neeraj Chopra) ಜತೆ ಮಾತನಾಡುತ್ತಾ ನೀರಜ್ ಅವರ ಕೈಯನ್ನು ತನ್ನ ತಲೆ ಮೇಲೆ ಇರಿಸಿ ಏನೋ ಪ್ರಮಾಣ ಮಾಡುತ್ತಿರುವಂತೆ ವಿಡಿಯೊದಲ್ಲಿ ಕಂಡುಬಂದಿತ್ತು. ನೀರಜ್ ಮತ್ತು ಮನು ಮಾತುಕತೆ ನಡೆಸುತ್ತಿದ್ದ ವೇಳೆ ಅಲ್ಲಿದ್ದ ಅನೇಕ ಅಥ್ಲೀಟ್ಗಳು ಇವರಿಬ್ಬರನ್ನು ಬೆರಗು ಕಣ್ಣಿನಿಂತ ನೋಡುತ್ತಾ ನಿಂತಿದ್ದರು. ಈ ವಿಡಿಯೊಗಳು ಭಾರೀ ವೈರಲ್ ಆದ ಕಾರಣ ಈ ಜೋಡಿ ಮುಂದೊಂದು ದಿನ ವಿವಾಹವಾಗುವುದು ಖಚಿತ ಎಂದು ನೆಟ್ಟಿಗರು ಹೇಳಲಾರಂಭಿಸಿದ್ದರು.
ಇದನ್ನೂ ಓದಿ Neeraj Chopra : ನೀರಜ್ ಚೋಪ್ರಾ ಭೇಟಿಯಾದ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ
ಟೋಕಿಯೊ ಒಲಿಂಪಿಕ್ಸ್ನಲ್ಲಿ ಅಭೂತಪೂರ್ವ ಸಾಧನೆ ಮಾಡಿ ಚಿನ್ನದ ಪದಕ ಗೆದ್ದಿದ್ದ ಚೋಪ್ರಾ ಪ್ಯಾರಿಸ್ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಸತತ ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಭಾರತದ ಮೊದಲ ಟ್ರ್ಯಾಕ್ ಮತ್ತು ಫೀಲ್ಡ್ ಅಥ್ಲೀಟ್ ಎಂಬ ದಾಖಲೆ ಬರೆದಿದ್ದಾರೆ.
ನೀರಜ್ ಚೋಪ್ರಾ(Neeraj Chopra) ಅವರು ತವರಿಗೆ ಮರಳುವುದು ಕೊಂಚ ತಡವಾಗಲಿದೆ ಎಂದು ಅವರ ಕುಟುಂಬ ಮೂಲಗಳು ತಿಳಿಸಿವೆ. ನೀರಜ್ ತಮ್ಮ ಗಾಯಕ್ಕೆ ಶಸ್ತ್ರಚಿಕಿತ್ಸೆಯ(neeraj chopra surgery) ಕುರಿತು ವೈದ್ಯರಿಂದ ಸಲಹೆ ಪಡೆಯಲು ಪ್ಯಾರಿಸ್‌ನಿಂದ ನೇರವಾಗಿ ಜರ್ಮನಿಗೆ ತೆರಳಿದ್ದಾರೆ. ಹೀಗಾಗಿ ಅವರು ಭಾರತಕ್ಕೆ ಮರಳುವುದು ವಿಳಂಬವಾಗಲಿದೆ.
ಕುಟುಂಬದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ನೀರಜ್ ಸುಮಾರು ಒಂದು ತಿಂಗಳ ನಂತರ ಭಾರತಕ್ಕೆ ಮರಳಬಹುದು ಎನ್ನಲಾಗಿದೆ. ‘ನೀರಜ್ ಜರ್ಮನಿಯಲ್ಲಿ ವೈದ್ಯರನ್ನು ಭೇಟಿಯಾಗಲಿದ್ದಾರೆಂಬುದು ತಿಳಿದಿದೆ. ಆದರೆ, ಉಳಿದ ಯಾವುದೇ ಮಾಹಿತಿಗಳು ಗೊತ್ತಿಲ್ಲ’ ಎಂದು ನೀರಜ್ ಸಂಬಂಧಿಯೊಬ್ಬರು ಪಿಟಿಐಗೆ ಮಾಹಿ ನೀಡಿದ್ದಾರೆ.
10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ಸ್ಪರ್ಧೆಯಲ್ಲಿ ಕಂಚು ಗೆಲ್ಲುವ ಮೂಲಕ ಮನು ಭಾಕರ್ ಭಾರತದ ಪದಕ ಖಾತೆ ತೆರೆದಿದ್ದರು. ಬಳಿಕ ಸರಬ್ಜೋತ್ ಸಿಂಗ್ ಜತೆಗೂಡಿ 10 ಮೀ. ಏರ್ ಪಿಸ್ತೂಲ್ ಮಿಶ್ರ ಡಬಲ್ಸ್‌ನಲ್ಲೂ ಕಂಚಿಗೆ ಗುರಿ ಇರಿಸಿದ್ದರು. ಈ ಮೂಲಕ ಒಂದೇ ಆವೃತ್ತಿಯಲ್ಲಿ 2 ಪದಕ ಗೆದ್ದ ಭಾರತದ ಮೊದಲ ಕ್ರೀಡಾಪಟು ಎನಿಸಿಕೊಂಡಿದ್ದರು.