Site icon Vistara News

Manu Bhaker : 25 ಮೀಟರ್ ಪಿಸ್ತೂಲ್ ವಿಭಾಗದಲ್ಲಿ ಮನು ಭಾಕರ್​ ಫೈನಲ್​ಗೆ​​; ಒಂದೇ ಒಲಿಂಪಿಕ್ಸ್​ನಲ್ಲಿ ಮೂರನೇ ಬಾರಿ ಫೈನಲ್​ಗೆ

Manu Bhaker

ಬೆಂಗಳೂರು: ಪ್ಯಾರಿಸ್​ನಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್ 2024ರ (Paris Olympics 2024) ಮಹಿಳೆಯರ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಭಾಕರ್ (Manu Bhaker) ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿದ್ದಾರೆ. ನಿಖರತೆ ಮತ್ತು ಕ್ಷಿಪ್ರ ಸುತ್ತುಗಳಲ್ಲಿ ಒಟ್ಟು 590 ಅಂಕಗಳನ್ನು ಗಳಿಸಿದ ಮನು. 2ನೇ ಸ್ಥಾನ ಪಡೆದು ಫೈನಲ್​ಗೇರಿದರು. ಹಂಗರಿಯ ವೆರೋನಿಕಾ ಮೇಜರ್ ಅವರಿಗಿಂತ 2 ಅಂಕಗಳ ಹಿಂದೆ ಉಳಿದರು. ವೆರೋನಿಕಾ ಒಲಿಂಪಿಕ್ ಅರ್ಹತಾ ಸುತ್ತಿನ ದಾಖಲೆಯನ್ನು 592 ಅಂಕಗಳೊಂದಿಗೆ ಸರಿಗಟ್ಟಿದರು.

ಅರ್ಹತಾ ಸುತ್ತಿನ ಭಾಗವಾಗಿದ್ದ ಇಶಾ ಸಿಂಗ್ 18 ನೇ ಸ್ಥಾನ ಪಡೆದು ನಿರಾಸೆಗೆ ಒಳಗಾದರು. ಇದೇ ವೇಳೆ ಪ್ಯಾರಿಸ್​​ನಲ್ಲಿ ನಡೆದ ಕ್ರೀಡಾಕೂಟದಲ್ಲಿ ಮನು ತನ್ನ ಮೂರನೇ ಬಾರಿಗೆ ಫೈನಲ್​ ಪ್ರವೇಶಿಸಿದರು. ಮನು ಈಗಾಗಲೇ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಮತ್ತು ಮಿಶ್ರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಗಳಲ್ಲಿ 2 ಕಂಚಿನ ಪದಕಗಳನ್ನು ಗೆದ್ದುಕೊಂಡು ದಾಖಲೆ ಬರೆದಿದ್ದಾರೆ. ಈ ಸ್ಪರ್ಧೆಯಲ್ಲೂ ಗೆದ್ದರೆ ಅವರ ಸಾಧನೆಯ ಕಿರೀಟಕ್ಕೆ ಇನ್ನೊಂದು ಗರಿ ಸೇರಿಕೊಳ್ಳಲಿವೆ.

ಇದನ್ನೂ ಓದಿ: IND vs SL ODI : ಲಂಕಾ ವಿರುದ್ಧ ಪಂದ್ಯದ ವೇಳೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೈದಾನಕ್ಕೆ ಇಳಿದ ರೋಹಿತ್​ ಪಡೆ

ಮನು ತನ್ನ ನಿಖರ ಸುತ್ತಿನ ಮೊದಲ ಸುತ್ತಿನಲ್ಲಿ ಅಸ್ಥಿರ ಆರಂಭ ಪಡೆದುಕೊಂಡಿದ್ದರು. ಏಕೆಂದರೆ ಅವರು ಮೊದಲ 5 ಶಾಟ್​ಗಳಲ್ಲಿ ಎರಡು ಬಾರಿ ಮಾತ್ರ 10 ಅಂಕಗಳನ್ನು ಗಳಿಸಲು ಸಾಧ್ಯವಾಯಿತು. ಆದಾಗ್ಯೂ, ಅವರು ಪುಟಿದೆದ್ದು ಒಟ್ಟು 5 ಬಾರಿ 10 ಅಂಕ ಗಳಿಸಿದರು.

ಎರಡನೇ ಸೀರಿಸ್​ನಲ್ಲಿ ಅವರು 3 ಬಾರಿ 10 ಅಂಕ ಗಳಿಸಿದರು. ಇನ್ನೂ 5 ಅಂಕಗಳನ್ನು ಸೇರಿಸಿ 98 ಅಂಕಗಳೊಂದಿಗೆ ಕೊನೆಗೊಳಿಸಿದರು. ಮೂರನೇ ಸರಣಿಯಲ್ಲಿ ಇನ್ನಷ್ಟು ಸುಧಾರಿಸಿಕೊಂಡರು. ಏಕೆಂದರೆ ಅವರು 9 ಬಾರಿ 10 ಅಂಕಗಳನ್ನು ಗಳಿಸಿದರು. ಆಗಸ್ಟ್ 3ರಂದು ಮಧ್ಯಾಹ್ನ 1.30ಕ್ಕೆ ನಡೆಯಲಿರುವ ಫೈನಲ್ನಲ್ಲಿ ಅವರು ಸೆಣಸಲಿದ್ದಾರೆ

ಇಶಾ ಸಿಂಗ್ 18ನೇ ಸ್ಥಾನ
ಇಶಾ ಮೊದಲ ಎರಡು ಸೀರಿಸ್​ನಲ್ಲಿ ನೀರಸ ಪ್ರದರ್ಶನ ನೀಡಿದರು. ಕ್ರಮವಾಗಿ 95 ಮತ್ತು 96 ರನ್ ಅಂಕಗಳನ್ನು ಗಳಿಸಿದರು. ಆದಾಗ್ಯೂ, 10 ನೇ ಸುತ್ತಿನಲ್ಲಿ ಪರಿಪೂರ್ಣ 100 ಅಂಕಗಳನ್ನು ಪಡೆದರು. ರ್ಯಾಪಿಡ್ ಸುತ್ತಿನಲ್ಲಿ ಅವರ ಆರಂಭವು ಉತ್ತಮವಾಗಿತ್ತು,. ಆದರೆ ನಿಧಾನವಾಗಿ 9 ಅಂಕಗಳು ಅವರ ಒಟ್ಟು ಸ್ಕೋರ್​ಗೆ ಹಾನಿ ಮಾಡಿದವು.

Exit mobile version