ಲಂಡನ್ : ಅಕ್ರಮ ಶೈಲಿಯಲ್ಲಿ ಬೌಲಿಂಗ್ ಮಾಡಿ ತಮ್ಮನ್ನು ಔಟ್ ಮಾಡಿದ ಪಾಕಿಸ್ತಾನದ ಬೌಲರ್ ಮೊಹಮ್ಮದ್ ಹಸ್ನೈನ್ ಅವರನ್ನು ಆಸ್ಟ್ರೇಲಿಯಾದ ಬ್ಯಾಟರ್ ಮಾರ್ಕಸ್ ಸ್ಟೋಯ್ನಿಸ್ ಅಲ್ಲೇ ಕಿಚಾಯಿಸಿದ ಪ್ರಸಂಗ The Hundred ಟೂರ್ನಿಯಲ್ಲಿ ನಡೆದಿದೆ. ಈ ಬಗ್ಗೆ ಪಾಕಿಸ್ತಾನದ ಕ್ರಿಕೆಟ್ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದರೆ. ಆದರೆ, ಪಾಕಿಸ್ತಾನದ ಬೌಲರ್ ಚೆಂಡನ್ನು ಅಕ್ರಮ ರೀತಿಯಲ್ಲಿ ಎಸೆಯುವುದು ಇದೇ ಮೊದಲಲ್ಲ. ಅವರ ಬೌಲಿಂಗ್ ದೋಷ ಪತ್ತೆ ಹಚ್ಚಿ ನಿಷೇಧ ಹೇರಿತ್ತು. ಬಳಿಕ ಅವಕಾಶ ಕಲ್ಪಿಸಿದ್ದರು.
ಕೆನಿಂಗ್ಟನ್ ಓವಲ್‌ನಲ್ಲಿ ನಡೆದ ಸದರ್ನ್ ಬ್ರೇವ್ ಹಾಗೂ ಒವಲ್ ಇನ್‌ವಿಸಿಬಲ್ ತಂಡಗಳ ನಡುವಿನ ಪಂದ್ಯದ ವೇಳೆ ಈ ಪ್ರಸಂಗ ನಡೆದಿದೆ. ಮಾರ್ಕಸ್ ಸ್ಪೋಯ್ನಿಸ್ ಸದರ್ನ್ ಬ್ರೇವ್ ತಂಡದ ಪರ ೨೭ ಎಸೆತಗಳಲ್ಲಿ ೩೭ ರನ್ ಬಾರಿಸಿ ಗರಿಷ್ಠ ಸ್ಕೋರರ್ ಎನಿಸಿಕೊಂಡಿದ್ದರು. ಅವರು ಹಸ್ನೈನ್ ಎಸೆತಕ್ಕೆ ಟಾಪ್ ಎಜ್ ಆಗ ಕ್ಯಾಚ್ ನೀಡಿ ಪೆವಿಲಿಯನ್‌ಗೆ ಮರಳಿದ್ದರು. ಪೆವಿಲಿಯನ್‌ಗೆ ಹೋಗುವ ಮಧ್ಯ ಅವರು ಹಸ್ನೈನ್ ಅವರ ಎಸತ ಥ್ರೋ ಎಂಬುದಾಗಿ ತೋರಿಸಿದ್ದರು. ಇದು ಪಾಕಿಸ್ತಾನ ಅಭಿಮಾನಿಗಳನ್ನು ಕೆರಳಿಸಿದೆ.
ಪ್ರಸಕ್ತ ವರ್ಷದ ಬಿಗ್ ಬ್ಯಾಷ್ ಲೀಗ್‌ನಲ್ಲೂ ಹಸ್ನೈನ್ ಅವರ ಬೌಲಿಂಗ್ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಅಂಪೈರ್ ಗೆರಾರ್ಡ್ ಅಬೂದ್ ಅವರ ವರದಿಯಂತೆ ಹಸ್ನೈನ್‌ಗೆ ನಿಷೇದ ಹೇರಲಾಗಿತ್ತು. ಅವರ ಬೌಲಿಂಗ್ ಶೈಲಿಯನ್ನು ಪರೀಕ್ಷೆ ಮಾಡಿದ ಬಳಿಕ ಮತ್ತೆ ಬೌಲಿಂಗ್ ಮಾಡಲು ಅವಕಾಶ ನೀಡಲಾಗಿತ್ತು. ಇದೀಗ ಮತ್ತೆ ಚೆಂಡನ್ನು ಎಸೆಯುತ್ತಿರುವುದು ಸಾಬೀತಾಗಿದೆ.
ಇದನ್ನೂ ಓದಿ | Asia Cup | ವೇಗದ ಬೌಲರ್‌ಗೆ ಗಾಯ, ಪಾಕ್ ನಾಯಕನಿಗೆ ಶುರುವಾಯ್ತು ಟೆನ್ಷನ್