ದುಬೈ: ಭ್ರಷ್ಟಾಚಾರ ನಿಗ್ರಹ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದ ಮೇಲೆ ವೆಸ್ಟ್ ಇಂಡೀಸ್ ತಂಡದ ಮಾಜಿ ಆಟಗಾರ ಮರ್ಲಾನ್ ಸ್ಯಾಮುಯೆಲ್ಸ್(Marlon Samuels) ಅವರನ್ನು ಆರು ವರ್ಷಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಿದೆ.
ಟಿ20 ವಿಶ್ವಕಪ್ ಹೀರೊ
2016ರಲ್ಲಿ ನಡೆದ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಸ್ಯಾಮುಯೆಲ್ಸ್ ಪ್ರಧಾನ ಪಾತ್ರವಹಿಸಿದ್ದರು. ಬೌಲಿಂಗ್ ಮತ್ತು ಬ್ಯಾಟಿಂಗ್ ಸಾಹಸದಿಂದ ವಿಂಡೀಸ್ ಕಪ್ ಗೆದ್ದಿತ್ತು. ಇದೀಗ ಎಮಿರೇಟ್ಸ್ ಕ್ರಿಕೆಟ್ ಮಂಡಳಿಯ ಭ್ರಷ್ಟಾಚಾರ ವಿರೋಧಿ ಸಂಹಿತೆಯನ್ನು ಉಲ್ಲಂಘಿಸಿದ ಆರೋಪದಡಿಯಲ್ಲಿ ಅವರನ್ನು ಎಲ್ಲ ಮಾದರಿಯ ಕ್ರಿಕೆಟ್‌ನಿಂದ ನಿಷೇಧಿಸಲಾಗಿದೆ. ಸ್ಯಾಮುಯೆಲ್ಸ್ ವಿರುದ್ಧ ಸೆಪ್ಟೆಂಬರ್ 2021 ರಲ್ಲಿ ಒಟ್ಟು ನಾಲ್ಕು ಆರೋಪಗಳನ್ನು ಹೊರಿಸಲಾಗಿತ್ತು. ಈ ವರ್ಷದ ಆಗಸ್ಟ್ನಲ್ಲಿ ಅಪರಾಧಗಳಲ್ಲಿ ಅವರು ತಪ್ಪಿತಸ್ಥರೆಂದು ಕಂಡುಬಂದಿದೆ. ಹೀಗಾಗಿ ಅವರಿಗೆ 6 ವರ್ಷಗಳ ಕಾಲ ಕ್ರಿಕೆಟ್ ನಿಷೇಧ ಹೇರಲಾಗಿದೆ.
ಸ್ಯಾಮುಯೆಲ್ಸ್ಗೆ ನಿಷೇಧ ವಿಧಿಸಿದ ವಿಚಾರವನ್ನು ಗುರುವಾರ ಐಸಿಸಿ ದೃಢಪಡಿಸಿದೆ. ನವೆಂಬರ್ 11, 2023 ರಿಂದಲೇ ಈ ನಿಷೇಧ ಶಿಕ್ಷೆ ಆರಂಭವಾಗಲಿದೆ ಎಂದು ಐಸಿಸಿ ಎಚ್ಆರ್ ಮತ್ತು ಸಮಗ್ರತೆಯ ಘಟಕದ ಮುಖ್ಯಸ್ಥರಾಗಿರುವ ಅಲೆಕ್ಸ್ ಮಾರ್ಷಲ್ ಅಧಿಕೃತ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
2020ರಲ್ಲಿ ಸ್ಯಾಮುಯೆಲ್ಸ್ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ನಿವೃತ್ತಿ ಘೋಷಿಸಿದ ಬಳಿಕ ಅವರು ಬೇರೆ ದೇಶಗಳಲ್ಲಿ ನಡೆಯುವ ಲೀಗ್ ಕ್ರಿಕೆಟ್ಗಳಲ್ಲಿ ಆಟ ಮುಂದುವರಿಸಿದ್ದರು. ಇದೀಗ ಐಸಿಸಿ ನಿಷೇಧದಿಂದಾಗಿ ಅವರಿಗೆ ಮುಂದಿನ 6 ವರ್ಷಗಳ ಕಾಲ ಯಾವುದೇ ಕ್ರಿಕೆಟ್ ಆಡಲು ಸಾಧ್ಯವಾಗುದಿಲ್ಲ.
ಇದನ್ನೂ ಓದಿ ICC Meeting : ತೃತಿಯ ಲಿಂಗಿಗಳಿಗೆ ಮಹಿಳಾ ಕ್ರಿಕೆಟ್ ತಂಡದಲ್ಲಿ ಇಲ್ಲ ಚಾನ್ಸ್
The former West Indies player with more than 300 international appearances has had his ban confirmed by the ICC.
— ICC (@ICC) November 23, 2023
Details 👇https://t.co/FCybKZNWxz
“ಸ್ಯಾಮ್ಯುಯೆಲ್ಸ್ ಸುಮಾರು 2 ದಶಕಗಳ ಕಾಲ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದ್ದಾರೆ. ಆ ಸಮಯದಲ್ಲಿ ಅವರು ಹಲವಾರು ಭ್ರಷ್ಟಾಚಾರ-ವಿರೋಧಿ ಸೆಷನ್ಗಳಲ್ಲಿ ಭಾಗವಹಿಸಿದ್ದರು. ಮತ್ತು ಭ್ರಷ್ಟಾಚಾರ-ವಿರೋಧಿ ಕೋಡ್ಗಳ ಅಡಿಯಲ್ಲಿ ಅವರ ಜವಾಬ್ದಾರಿಗಳು ಏನೆಂದು ನಿಖರವಾಗಿ ತಿಳಿದಿದ್ದರು” ಎಂದು ಮಾರ್ಷಲ್ ಹೇಳಿದರು.
ಸ್ಯಾಮುಯೆಲ್ಸ್ ಕ್ರಿಕೆಟ್ ಸಾಧನೆ
42 ವರ್ಷದ ಸ್ಯಾಮುಯೆಲ್ಸ್ ಅವರು 11,000 ಅಂತಾರಾಷ್ಟ್ರೀಯ ರನ್ಗಳನ್ನು ಗಳಿಸಿದ್ದಾರೆ. ವಿಂಡೀಸ್ ಪರ 207 ಏಕದಿನ ಪಂದ್ಯಗಳನ್ನು ಆಡಿದ ಅವರು 75.12 ಸ್ಟ್ರೈಕ್ರೇಟ್ನಲ್ಲಿ 5606 ರನ್ ಬಾರಿಸಿದ್ದಾರೆ. ಇದರಲ್ಲಿ 10 ಶತಕ ಮತ್ತು 30 ಅಧರ್ಶತಕ ಒಳಗೊಂಡಿದೆ. 133 ರನ್ ಗರಿಷ್ಠ ವೈಯಕ್ತಿಕ ಮೊತ್ತವಾಗಿದೆ. 89 ವಿಕೆಟ್ ಕೂಡ ಪಡೆದಿದ್ದಾರೆ. ಇನ್ನು 71 ಟೆಸ್ಟ್ ಪಂದ್ಯಗಳಿಂದ 3917, ರನ್ 7 ಶತಕ, 1 ದ್ವಿಶತಕ ಮತ್ತು 24 ಅರ್ಧಶತಕ ಬಾರಿಸಿದ್ದಾರೆ. 41 ವಿಕೆಟ್ ಕಲೆಹಾಕಿದ್ದಾರೆ. ಟಿ20 ಕ್ರಿಕೆಟ್ನಲ್ಲಿ 67 ಪಂದ್ಯ ಆಡಿ 1611 ರನ್ ಮತ್ತು 22 ವಿಕೆಟ್ ಉರುಳಿಸಿದ್ದಾರೆ.