ಹೊಸದಿಲ್ಲಿ: ಆರು ಬಾರಿಯ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಭಾರತದ ಮೇರಿ ಕೋಮ್(Mary Kom) ಈ ಬಾರಿ ನಡೆಯುವ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಟೂರ್ನಿಯಿಂದ ಹೊರಗುಳಿಯಲು ನಿರ್ಧಾರಿಸಿದ್ದಾರೆ. ಗಾಯದ ಸಮಸ್ಯೆಯಿಂದ ಅವರು ಈ ಕೂಟದಿಂದ ಹಿಂದೆ ಸರಿಯುತ್ತಿರುವುದಾಗಿ ಎಎನ್‌ಐಗೆ ತಿಳಿಸಿದ್ದಾರೆ.
“ಗಾಯದ ಸಮಸ್ಯೆಯಿಂದ ನಾನು ಈ ಬಾರಿ ವಿಶ್ವ ಬಾಕ್ಸಿಂಗ್ ಟೂರ್ನಿಯಲ್ಲಿ ಆಡಲು ಸಾಧ್ಯವಾಗುತ್ತಿಲ್ಲ. ಆದರೆ ಶೀಘ್ರದಲ್ಲೇ ಚೇತರಿಕೆ ಕಂಡು ಮತ್ತೆ ಬಾಕ್ಸಿಂಗ್ ರಿಂಗ್ಗೆ ಮರಳುವ ವಿಶ್ವಾಸವಿದೆ. ಈ ಟೂರ್ನಿಯಲ್ಲಿ ಪಾಲ್ಗೊಳ್ಳುತ್ತಿರುವ ಎಲ್ಲ ಭಾರತೀಯ ಬಾಕ್ಸರ್ಗಳು ಶ್ರೇಷ್ಠ ಪ್ರದರ್ಶನ ತೋರಲಿ” ಎಂದು 40 ವರ್ಷದ ಮೇರಿ ಕೋಮ್ ಶುಭ ಹಾರೈಸಿದ್ದಾರೆ. ಮೇರಿ ಕೋಮ್ ಈ ಟೂರ್ನಿಯಲ್ಲಿ ಇದುವರೆಗೆ ಒಟ್ಟು 8 ಪದಕಗಳನ್ನು ಗೆದ್ದಿದ್ದಾರೆ. ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಇದೇ ವರ್ಷ ಮೇ 1 ರಿಂದ 14 ರವರೆಗೆ ಉಜ್ಬೇಕಿಸ್ತಾನದಲ್ಲಿ ನಡೆಯಲಿದೆ.
ಮೊಣಕಾಲಿನ ಗಾಯದಿಂದಾಗಿ ಆಯ್ಕೆ ಟ್ರಯಲ್ಸ್ ನಿಂದ ಹಿಂದೆ ಸರಿದ ಕಾರಣದಿಂದ ಮೇರಿ ಕೋಮ್ ಕಳೆದ ವರ್ಷ ಬರ್ಮಿಂಗ್ ಹ್ಯಾಮ್ ಕಾಮನ್ ವೆಲ್ತ್ ಗೇಮ್ಸ್ ನಿಂದ ಹೊರಗುಳಿಯಬೇಕಾಯಿತು. ಇದೀಗ ಮತ್ತೆ ಗಾಯದಿಂದಾಗಿ ಪ್ರತಿಷ್ಠಿತ ಟೂರ್ನಿಯಿಂದ ಹೊರಗುಳಿಯುವಂತಾಗಿದೆ.
ಇದನ್ನೂ ಓದಿ | Neeraj Chopra | ಈ ವರ್ಷ 90 ಮೀ. ದೂರ ಜಾವೆಲಿನ್ ಎಸೆಯುವುದು ನನ್ನ ಮೊದಲ ಗುರಿ; ನೀರಜ್ ಚೋಪ್ರಾ