ವೆಲ್ಲಿಂಗ್ಟನ್: ಬಹುನಿರೀಕ್ಷಿತ ಭಾರತ ಮತ್ತು ನ್ಯೂಜಿಲ್ಯಾಂಡ್(IND VS NZ) ವಿರುದ್ಧದ ಮೊದಲ ಟಿ20 ಪಂದ್ಯ ಮಳೆಯಿಂದಾಗಿ ಒಂದೂ ಎಸೆತ ಕಾಣದೆ ರದ್ದುಗೊಂಡಿದೆ. ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯ ಶುಕ್ರವಾರ ವೆಲ್ಲಿಂಗ್ಟನ್ ಕ್ರಿಕೆಟ್ ಮೈದಾನದಲ್ಲಿ ನಡೆಯಬೇಕಿತ್ತು. ಆದರೆ ಇದಕ್ಕೆ ಮಳೆರಾಯ ಅನುವು ನೀಡದ ಕಾರಣ ಅಂತಿಮವಾಗಿ ಪಂದ್ಯ ರದ್ದುಗೊಳಿಸಲಾಯಿತು.
2024ರ ವಿಶ್ವ ಕಪ್ ಸಿದ್ಧತೆಗೆ ಹಿರಿಯ ಆಟಗಾರರನ್ನು ಹೊರತುಪಡಿಸಿ ಯುವ ಆಟಗಾರರ ಸಾಮರ್ಥ್ಯವನ್ನು ಪರೀಕ್ಷಿಸಲು ಮುಂದಾಗಿದ್ದ ಟೀಮ್ ಇಂಡಿಯಾಗೆ ಮೊದಲ ಪಂದ್ಯದಲ್ಲೇ ಮಳೆಯಿಂದ ವಿಘ್ನ ಎದುರಾಗಿದೆ. ಸರಣಿಯ ದ್ವಿತೀಯ ಪಂದ್ಯ ನವೆಂಬರ್ 20ರಂದು ಭಾನುವಾರ ಮೌಂಟ್ ಮೌಂಗನಿಯ ಬೇ ಓವಲ್ ಮೈದಾನದಲ್ಲಿ ನಡೆಯಲಿದೆ.
ಉಭಯ ತಂಡಕ್ಕೂ ನಿರಾಸೆ
ಟಿ20 ವಿಶ್ವ ಕಪ್ ಸೆಮಿಫೈನಲ್ ಸೋಲಿನ ಬಳಿಕ ಹೊಸ ಹುರುಪಿನೊಂದಿಗೆ ಟಿ20 ಸರಣಿ ಆಡಲು ಎದುರು ನೋಡುತ್ತಿದ್ದ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಣ ಆಟಗಾರರಿಗೆ ಭಾರಿ ನಿರಾಸೆಯಾಯಿತು. ಅದರಲ್ಲೂ ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ಸಿಕ್ಕ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಎದುರು ನೋಡುತ್ತಿದ್ದ ಟೀಮ್ ಇಂಡಿಯಾದ ಯುವ ಆಟಗಾರರ ಕನಸಿಗೆ ಮಳೆರಾಯ ತಣ್ಣೀರೆರಚಿದ್ದಾನೆ.
ಇದನ್ನೂ ಓದಿ | IND VS NZ | ವೆಲ್ಲಿಂಗ್ಟನ್ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳ ಟಿ20 ಸಾಧನೆ ಹೇಗಿದೆ?