Site icon Vistara News

ICC World Cup 2023 : ಇಂಗ್ಲೆಂಡ್ ವಿರುದ್ಧದ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದು

india england warm up match

ಗುವಾಹಟಿ: ಏಕ ದಿನ ವಿಶ್ವ ಕಪ್​ಗೆ (ICC World Cup 2023) ಪೂರ್ವಭಾವಿಯಾಗಿ ಆಯೋಜನೆಗೊಂಡಿದ್ದ ಭಾರತ ಹಾಗೂ ಇಂಗ್ಲೆಂಡ್​ ತಂಡಗಳ ನಡುವಿನ ಅಭ್ಯಾಸ ಪಂದ್ಯ ಮಳೆಯಿಂದಾಗಿ ರದ್ದಗೊಂಡಿದೆ. ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಬೇಕಿದ್ದ ಈ ಪಂದ್ಯದಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅಲ್ಲಿಂದಲೇ ಸತತವಾಗಿ ಮಳೆ ಸುರಿಯಿತು. ಇದರಿಂದಾಗಿ ಪಂದ್ಯ ಆರಂಭವಾಗಲಿಲ್ಲ. ಮಳೆ ಹೋದ ಬಳಿಕ ಮೈದಾನವನ್ನು ಪರಿಶೀಲಿಸಿದ ಅಂಪೈರ್​ಗಳು ಪಂದ್ಯ ಆರಂಭಸಲು ಮೈದಾನ ಪೂರಕವಾಗಿಲ್ಲ. ಗ್ರೌಂಡ್​ನಲ್ಲಿ ನೀರು ನಿಂತಿದೆ ಎಂದು ಘೋಷಿಸಿದರು. ಹೀಗಾಗ ಅಭ್ಯಾಸ ಪಂದ್ಯ ರದ್ದಾಯಿತು. ಆಸ್ಟ್ರೇಲಿಯಾ ತಂಡದ ವಿರುದ್ಧ ಸರಣಿ ಗೆದ್ದು ವಿಶ್ವಾಸದಲ್ಲಿದ್ದ ಭಾರತ ತಂಡದ ಮುಂದಿನ ಅಭ್ಯಾಸಕ್ಕೆ ಇದು ಅಡಚಣೆ ಮಾಡಿತು.

ಎರಡು ಬಾರಿಯ ಚಾಂಪಿಯನ್ ಭಾರತತಂಡ ಮಾಜಿ ಚಾಂಪಿಯನ್ಸ್ ಆಸ್ಟ್ರೇಲಿಯಾ ವಿರುದ್ಧ ತಮ್ಮ ಮೊದಲ ವಿಶ್ವ ಕಪ್​ ಪಂದ್ಯವನ್ನು ಆಡುವ ಮೊದಲು ಅಕ್ಟೋಬರ್ 3 ರಂದು ತಿರುವನಂತಪುರಂನ ಗ್ರೀನ್​ಫೀಲ್ಡ್​ ಇಂಟರ್​ನ್ಯಾಷನಲ್ ಕ್ರೀಡಾಂಗಣದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ ತಮ್ಮ ಎರಡನೇ ಅಭ್ಯಾಸ ಪಂದ್ಯವನ್ನು ಆಡಲಿದೆ

ನಾವು ಮೊದಲು ಬ್ಯಾಟಿಂಗ್ ಮಾಡಲಿದ್ದೇವೆ. ಅದಕ್ಕೆ ಯಾವುದೇ ನಿರ್ದಿಷ್ಟ ಕಾರಣವಿಲ್ಲ. ಕೇರಳ ತುಂಬಾ ಬಿಸಿಯಾಗಿದೆ. ನಮ್ಮ ಬೌಲರ್​ಗಳು ಫ್ರೆಶ್​ ಆಗಿ ಉಳಿಯುತ್ತಾರೆ. ಫ್ಲಡ್​ ಲೈಟ್​ ಅಡಿಯಲ್ಲಿ ಬೌಲಿಂಗ್ ಮಾಡುತ್ತಾರೆ ಎಂದು ಖಚಿತಪಡಿಸಿಕೊಳ್ಳಲು ಬಯಸುತ್ತೇವೆ ಎಂದು ರೋಹಿತ್ ಶರ್ಮಾ ಮುಂದಿನ ಅಭ್ಯಾಸ ಪಂದ್ಯದ ಕುರಿತು ಮಾತನಾಡಿದ್ದಾರೆ.

ನಾವು ಸಾಕಷ್ಟು ಕ್ರಿಕೆಟ್ ಪಂದ್ಯಗಳನ್ನು ಆಡುತ್ತಿದ್ದೇವೆ. ಆದ್ದರಿಂದ ನಾವು ಉತ್ತಮ ಕ್ರಿಕೆಟ್ ಆಡಬೇಕಾಗಿದೆ. ನಾವು ಇತ್ತೀಚೆಗೆ 7 ಅಥವಾ 8 ಪಂದ್ಯಗಳನ್ನು ಆಡಿದ್ದೇವೆ, ಅಕ್ಟೋಬರ್ 8 ರವರೆಗೆ ಆಟಗಾರರು ತಾಜಾವಾಗಿರುವುದನ್ನು ಖಚಿತಪಡಿಸಿಕೊಳ್ಳಲು ನಾವು ಬಯಸುತ್ತೇವೆ. ನಾವು ಅಗ್ರ ತಂಡಗಳಲ್ಲಿ ಒಂದರ ವಿರುದ್ಧ ಆಡುತ್ತಿದ್ದೇವೆ. ಪ್ರತಿಯೊಬ್ಬರೂ (ತಂಡದಲ್ಲಿ) ಫಿಟ್ ಆಗಿದ್ದಾರೆ ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಹೇಳಿದರು.

ಇದನ್ನೂ ಓದಿ : World Cup History: ಲಾರ್ಡ್ಸ್​ ಅಂಗಳದಲ್ಲಿ ಚೊಚ್ಚಲ ವಿಶ್ವಕಪ್​ ಎತ್ತಿದ ‘ಕಪಿಲ್ ಡೆವಿಲ್ಸ್’

ಅಕ್ಟೋಬರ್ 2 ರಂದು ನಡೆಯಲಿರುವ ಎರಡನೇ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್​ ತಂಡ ಬಾಂಗ್ಲಾದೇಶವನ್ನು ಎದುರಿಸಲಿದೆ. “ನಿಜವಾಗಿಯೂ ರೋಮಾಂಚನಕಾರಿ, ವಿಶ್ವ ಕಪ್​ಗೆ ಮುಂಚಿತವಾಗಿ ಭಾರತದಲ್ಲಿರುವುದ ತುಂಬಾ ಮುಖ್ಯವಾಗಿದೆ. ನಮಗೆ ಆಟದಲ್ಲಿ ಸಾಕಷ್ಟು ಅನುಭವವಿದೆ. ಭಾರತದಲ್ಲಿ ಸಾಕಷ್ಟು ಐಪಿಎಲ್ ಕ್ರಿಕೆಟ್ ಆಡಿದ ಮತ್ತು ಇಂದಿನ ಬಗ್ಗೆ ನಿಜವಾಗಿಯೂ ಉತ್ಸುಕರಾಗಿರುವ ಸಾಕಷ್ಟು ಆಟಗಾರರು ನಮ್ಮಲ್ಲಿದ್ದಾರೆ. ಎಲ್ಲಾ ಆಟಗಾರರು ಫಿಟ್ ಆಗಿದ್ದಾರೆ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್ ಹೇಳಿದ್ದಾರೆ.

ಭಾರತ ತಂಡ

ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಇಶಾನ್ ಕಿಶನ್ , ಸೂರ್ಯಕುಮಾರ್ ಯಾದವ್.


Exit mobile version