Site icon Vistara News

Asia Cup 2023 : ಏಷ್ಯಾ ಕಪ್​ ದಿನಾಂಕ ಪ್ರಕಟ; ಪಂದ್ಯಗಳ ಪೂರ್ಣ ವಿವರ ಇಲ್ಲಿದೆ

Team India

#image_title

ದುಬೈ: ಆಗಸ್ಟ್ 31ರಿಂದ ಸೆಪ್ಟೆಂಬರ್ 17ರವರೆಗೆ ಏಷ್ಯಾ ಕಪ್ 2023 (Asia Cup 2023) ಪಂದ್ಯಾವಳಿ ನಡೆಯಲಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಸೋಮವಾರ ದೃಢಪಡಿಸಿದೆ. ಪಾಕಿಸ್ತಾನದಲ್ಲಿ ನಾಲ್ಕು ಪಂದ್ಯಗಳೊಂದಿಗೆ ಪಂದ್ಯಾವಳಿ ಪ್ರಾರಂಭವಾಗಲಿದ್ದು, ಹೈಬ್ರಿಡ್ ಮಾದರಿಯನ್ನು ಒಪ್ಪಿಕೊಂಡಿರುವುದಾಗಿ ಎಸಿಸಿ ದೃಢಪಡಿಸಿದೆ. ಈ ವರ್ಷ ಏಕದಿನ ಮಾದರಿಯಲ್ಲಿ ನಡೆಯಲಿರುವ ಪಂದ್ಯಾವಳಿಯ ನಂತರ ಕೊನೆಯ ಒಂಬತ್ತು ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಲಿದೆ.

ಏಷ್ಯಾಕಪ್ 2023ರಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ನೇಪಾಳ ತಂಡಗಳು ಭಾಗವಹಿಸಲಿವೆ. 2022ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್​ನಲ್ಲಿ ನಡೆದ ಫೈನಲ್​ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸಿದ ಶ್ರೀಲಂಕಾ ತಂಡ ಚಾಂಪಿಯನ್ ಆಗಿತ್ತು. ತನ್ನದೇ ನೆಲದಲ್ಲಿ ಪಂದ್ಯ ನಡೆಯುತ್ತಿರುವ ಕಾರಣ ಆ ತಂಡಕ್ಕೆ ಹೆಚ್ಚಿನ ಲಾಭವಾಗಲಿದೆ.

ಲೀಗ್ ಹಂತದಲ್ಲಿ ಭಾರತ ಪಾಕಿಸ್ತಾನ ಮತ್ತು ನೇಪಾಳ ಒಂದೇ ಗುಂಪಿನಲ್ಲಿದೆ. ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ಎರಡನೇ ಗುಂಪಿನಲ್ಲಿವೆ. ಲೀಗ್ ಹಂತದ ಬಳಿ ಎರಡೂ ಗುಂಪುಗಳ ಎರಡು ತಂಡಗಳು ಸೂಪರ್ ಫೋರ್ ರೌಂಡ್ ರಾಬಿನ್ ಹಂತಕ್ಕೆ ಪ್ರವೇಶಿಸಲಿವೆ. ಅಲ್ಲಿ ಎರಡು ತಂಡಗಳು ನಂತರ ಫೈನಲ್​​ಗೆ ಹೋಗಲಿವೆ.

ಬಿಸಿಸಿಐ ಪ್ರಾಯೋಜಕತ್ವಕ್ಕೆ ಕೆಲವು ಕಂಪನಿಗಳಿಗೆ ನಿಷೇಧ

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಭಾರತ ಕ್ರಿಕೆಟ್ ತಂಡದ (Team India) ಪ್ರಮುಖ ಪ್ರಾಯೋಜಕತ್ವ ಹಕ್ಕುಗಳಿಗಾಗಿ ಆಸಕ್ತ ಉದ್ಯಮಗಳಿಂದ ಟೆಂಡರ್ ಆಹ್ವಾನಿಸಿದೆ. ಬ್ರಾಂಡಿಂಗ್ ವೆಚ್ಚದ ಕಡಿತವನ್ನು ಉಲ್ಲೇಖಿಸಿ ಎಜು-ಟೆಕ್ ಕಂಪನಿ ಬೈಜುಸ್ ಮಂಡಳಿಯೊಂದಿಗಿನ ತಮ್ಮ 35 ಮಿಲಿಯನ್ ಡಾಲರ್ ಒಪ್ಪಂದವನ್ನು ಕೊನೆಗೊಳಿಸಲು ನಿರ್ಧರಿಸಿದ ನಂತರ ಹೊಸ ಟೆಂಡರ್​ಗಳನ್ನು ಆಯ್ಕೆ ಮಾಡಿಕೊಳ್ಳಲು ಹೇಳಿದೆ. ಇದೇ ವೇಳೆ ಕೆಲವೊಂದು ಬ್ರಾಂಡ್​ಗಳಿಗೆ ನಿಷೇಧ ಹೇರಿದೆ. ಅವರಿಗೆ ಟೆಂಡರ್ ಹಾಕಲು ಅವಕಾಶ ಇಲ್ಲ.

ಇದನ್ನೂ ಓದಿ : Asia Cup 2023: ಪಾಕ್​ನಲ್ಲೇ ನಡೆಯಲಿದೆ ಏಷ್ಯಾ ಕಪ್​; ಭಾರತದ ಪಂದ್ಯ ಎಲ್ಲಿ?

ಪ್ರಾಯೋಜಕತ್ವದ ಹಕ್ಕುಗಳಿಗಾಗಿ ಕೆಲವೊಂದು ಬ್ರಾಂಡ್​​ಗಳನ್ನು ಬಿಸಿಸಿಐ ನಿಷೇಧಿಸಿದೆ. ಈ ಬ್ರಾಂಡ್​​ಗಳ ಟೀಮ್ ಇಂಡಿಯಾದ ಶೀರ್ಷಿಕೆ ಪ್ರಾಯೋಜಕರಾಗಲು ಬಿಡ್ ಮಾಡಲು ಸಾಧ್ಯವಿಲ್ಲ. ಕ್ರೀಡಾ ಉಡುಪು ತಯಾರಕರು, ಆಲ್ಕೋಹಾಲ್ ಉತ್ಪನ್ನಗಳು, ಬೆಟ್ಟಿಂಗ್ ಕಂಪನಿಗಳು, ಕ್ರಿಪ್ಟೋಕರೆನ್ಸಿ ಘಟಕಗಳು, ರಿಯಲ್ ಮನಿ ಗೇಮಿಂಗ್ ಪ್ಲಾಟ್​ಫಾರ್ಮ್​ಗಳು (ಫ್ಯಾಂಟಸಿ ಸ್ಪೋರ್ಟ್ಸ್ ಗೇಮಿಂಗ್ ಹೊರತುಪಡಿಸಿ), ತಂಬಾಕು ಬ್ರಾಂಡ್​​ಗಳು, ಅಶ್ಲೀಲತೆ ಅಥವಾ ಸಾರ್ವಜನಿಕ ನೈತಿಕ ಅಪರಾಧದಂತಹ ಆಕ್ರಮಣಕಾರಿ ವಿಷಯಗಳಿಗೆ ಸಂಬಂಧಿಸಿದ ಉತ್ಪನ್ನಗಳಿಗೆ ಅವಕಾಶ ಇಲ್ಲ.

Exit mobile version