Site icon Vistara News

ಬಹಿರಂಗವಾಗಿಯೇ ಶಕೀಬ್​, ಬಾಂಗ್ಲಾ ತಂಡಕ್ಕೆ ಜಾಡಿಸಿದ ಏಂಜೆಲೊ ಮ್ಯಾಥ್ಯೂಸ್‌

angelo mathews

ನವದೆಹಲಿ: ಶ್ರೀಲಂಕಾ ತಂಡದ ಹಿರಿಯ ಆಟಗಾರ ಏಂಜೆಲೊ ಮ್ಯಾಥ್ಯೂಸ್‌(angelo mathews) ಅವರು ಬಾಂಗ್ಲಾದೇಶ ಮತ್ತು ತಂಡದ ನಾಯಕ ಶಕೀಬ್​ ಅಲ್​ ಹಸನ್​ ವಿರುದ್ಧ ಬಹಿರಂಗವಾಗಿಯೇ ಹಿಗ್ಗಾಮುಗ್ಗ ಬೈದಿದ್ದಾರೆ. ಮ್ಯಾಥ್ಯೂಸ್‌ ಅವರ ಈ ಕೋಪಕ್ಕೆ ಕಾರಣ ಅವರನ್ನು ಟೌಮ್ಡ್​ ಔಟ್​ ಮಾಡಿದ್ದರು.

ಸೋಮವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಲಂಕಾ ತಂಡದ ಆಟಗಾರ ಮ್ಯಾಥ್ಯೂಸ್ ಬ್ಯಾಟಿಂಗ್​ ನಡೆಸಲು ಕ್ರೀಸ್​ಗೆ ಬಂದಾಗ ಹೆಲ್ಮೆಟ್​ ಸಮಸ್ಯೆ ಎದುರಾಗಿತ್ತು. ಕೂಡಲೇ ಅವರು ಸಹ ಆಟಗಾರನ ಬಳಿ ಬೇರೆ ಹೆಲ್ಮೆಟ್ ತರುವಂತೆ ಹೇಳಿದ್ದಾರೆ. ಹೊಸ ಹೆಲ್ಮೆಟ್ ತರುವಲ್ಲಿ ಕೊಂಚ ತಡವಾಗಿದೆ. ಇದೇ ವೇಳೆ ಬಾಂಗ್ಲಾದೇಶ ಆಟಗಾರರು ಅಂಪೈರ್​ ಬಳಿ ಐಸಿಸಿ ನಿಯಮದಂತೆ ಟೈಮ್ ಔಟ್ ಅಫೀಲ್​ ಮಾಡಿ ಮ್ಯಾಥ್ಯೂಸ್ ಅವರನ್ನು ಔಟ್​ ಮಾಡಿದ್ದರು. ಇದೇ ವಿಚಾರವಾಗಿ ಮ್ಯಾಥ್ಯೂಸ್‌ ಬಾಂಗ್ಲಾ ಮತ್ತು ಶಬೀಕ್​ ವಿರುದ್ಧ ಕಿಡಿ ಕಾರಿದ್ದಾರೆ.

ಪಂದ್ಯದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮ್ಯಾಥ್ಯೂಸ್, ”ನಾನು ತಪ್ಪು ಮಾಡದಿದ್ದರೂ ಬಾಂಗ್ಲಾ ಆಟಗಾರರು ತೋರಿದ ವರ್ತನೆ ಬಗ್ಗೆ ನನ್ನ ವಿರೋಧವಿದೆ. ನನ್ನ ಹೆಲ್ಮೆಟ್​ ತೊಂದರೆಯಿಂದಾಗಿ ಈ ತಪ್ಪು ಆಗಿದೆ. ಆದರೆ ಬಾಂಗ್ಲಾ ಆಟಗಾರಿಗೆ ಕಾಮನ್ಸೆನ್ಸ್ ಎಂಬುದೇ ಇಲ್ಲ. ಇದು ಶಕೀಬ್ ಮತ್ತು ಬಾಂಗ್ಲಾದೇಶದಿಂದ ಅತ್ಯಂತ ಕೀಳು ಮಟ್ಟದ ತೀರ್ಮಾನವಾಗಿದೆ” ಎಂದು ಹೇಳಿದರು.

”ಇಷ್ಟು ಕೀಳು ಮಟ್ಟಕ್ಕೆ ಇಳಿದು ಕ್ರಿಕೆಟ್ ಆಡುವುದು ನಿಜಕ್ಕೂ ಬೇಸರ ತಂದಿದೆ. ನಿಯಮಗಳ ಪ್ರಕಾರ, ನಾನು ಎರಡು ನಿಮಿಷಗಳಲ್ಲಿ ತಯಾರಾಗಬೇಕು, ನನಗೆ ಅಲ್ಲಿ ಇನ್ನೂ ಐದು ಸೆಕೆಂಡುಗಳು ಕಾಲಾವಕಾಶವಿತ್ತು. ಈ ರೀತಿಯ ಘಟನೆ ಅವಮಾನಕರವಾಗಿದೆ. ನಮ್ಮನ್ನು ಗೌರವಿಸುವ ಜನರನ್ನಷ್ಟೆ ನಾವೂ ಗೌರವಿಸುತ್ತೇವೆ. ನಾವೆಲ್ಲರೂ ಉತ್ತಮವಾಗಿ ಕ್ರಿಕೆಟ್ ಆಡಲು ಬಂದಿದ್ದೇವೆ. ನೀವು ಇದಕ್ಕೆ ಗೌರವ ಕೊಡದಿದ್ದರೆ ಇನ್ನೇನು ಹೇಳಲು ಸಾಧ್ಯ,” ಎಂದರು.

ಇನ್ನೂ ಗೌರವ ನೀಡಲ್ಲ

“ಶಕೀಬ್ ಮತ್ತು ಬಾಂಗ್ಲಾದೇಶ ತಂಡದ ಬಗ್ಗೆ ಅಪಾರ ಗೌರವವನ್ನು ಹೊಂದಿದ್ದೆ. ಆದರೆ ಈಗ ಈ ಗೌರವ ಹೋಗಿದೆ. ನಾವೆಲ್ಲರೂ ಗೆಲ್ಲಲು ಆಡುತ್ತೇವೆ, ಅದು ನಿಯಮದೊಳಗೆ ಇದ್ದರೆ ಉತ್ತಮ. ಆದರೆ ಎರಡು ನಿಮಿಷಗಳಲ್ಲಿ ನಾನು ಅಲ್ಲಿದ್ದೆ… ನಮ್ಮ ಬಳಿ ವಿಡಿಯೋ ಸಾಕ್ಷ್ಯವಿದೆ. ಇದನ್ನು ನಾವು ಹೊರಗಡೆ ತರುತ್ತೇವೆ. ನಾನು ಸಾಕ್ಷಿಯೊಂದಿಗೆ ಮಾತನಾಡುತ್ತಿದ್ದೇನೆ. ಇಂತಹ ಘಟನೆ ಇನ್ನು ಮುಂದೆ ನಡೆಯಬಾರದು” ಎಂದು ಹೇಳಿದರು.

“ಎಲ್ಲ ಕ್ರಿಕೆಟ್​ ಪಂಡಿತರು, ಐಸಿಸಿ ಕೂಡ ಆಟಗಾರರ ಸುರಕ್ಷತೆಯ ಬಗ್ಗೆ ಮಾತನಾಡುತ್ತೇವೆ. ಈ ನಿಯಮವನ್ನು ನೋಡುವಾಗ ಹೆಲ್ಮೆಟ್ ಇಲ್ಲದೆಯೇ ಆಡಬೇಕು ಎನಿಸುತ್ತದೆ. ನಾನು ಉದ್ದೇಶ ಪೂರ್ವಕವಾಗಿ ಸಮಯ ಕಳೆಯುತ್ತಿದ್ದರೆ ಈ ಔಟನ್ನು ನಾನು ಕೂಡ ಒಪ್ಪುತ್ತಿದ್ದೆ. ಆದರೆ ಹೆಲ್ಮೆಟ್​ ಕೆಟ್ಟುಹೋದ ಕಾರಣ ಹೀಗಾಗಿದೆ. ಅಲ್ಲದೆಎ ನಾನು ಪೀಲ್ಡ್​ ಅಂಪೈರ್​ ಬಳಿಯೂ ನನ್ನ ಹೆಲ್ಮೆಟ್​ ಪರೀಕ್ಷಿಸಲು ಸೂಚಿಸಿದ್ದೆ. ಆದರೆ ಇದಕ್ಕೆ ಬೆಲೆಯೇ ಇಲ್ಲದಂತಾಯಿತು. ನನ್ನ 15 ವರ್ಷಗಳ ಕ್ರಿಕೆಟ್ ಜೀವನದಲ್ಲಿ, ಈ ಮಟ್ಟಕ್ಕೆ ಇಳಿದ ತಂಡವನ್ನು ನಾನು ಎಂದೂ ನೋಡಿಲ್ಲ. ನಾನು ಬ್ಯಾಟಿಂಗ್ ಮಾಡಿದರೆ ಪಂದ್ಯ ಗೆಲ್ಲುತ್ತಿತ್ತು ಎಂದು ಹೇಳುತ್ತಿಲ್ಲ. ಆದರೆ, ನಾವು ಸ್ವಲ್ಪವಾದರೂ ಕ್ರೀಡಾಸ್ಪೂರ್ತಿ ಹೊಂದಿರಬೇಕು. ಬಾಂಗ್ಲಾದೇಶ ಬಿಟ್ಟು ಬೇರೆ ಯಾವುದೇ ತಂಡವಾಗಿದ್ದರೂ ಈ ರೀತಿ ಮಾಡುತ್ತಿರಲಿಲ್ಲ” ಎಂದು ಮ್ಯಾಥ್ಯೂಸ್​ ಗುಡುಗಿದರು.

“ನಾನು ಉದ್ದೇಶ ಪೂರ್ವಕವಾಗಿ ಸಮಯ ವ್ಯರ್ಥ ಮಾಡಲಿಲ್ಲ ಎಂಬುದು ಶಕೀಬ್‌ ಅವರಿಗೆ ಚೆನ್ನಾಗಿ ತಿಳಿದಿತ್ತು. ಇದು ಸಾಮಾನ್ಯ ವಿಷಯ ಆಗಿರುವುದರಿಂದ ಅಂಪೈರ್ ಬಳಿ ಹೋಗದೆ ಮಾನವೀಯತೆ ತೋರಬಹುದಿತ್ತು. ಆದರೆ ಅವರು ಕ್ರೀಡಾಸ್ಫೂರ್ತಿ ಮರೆತರು. ಜನರು ನನ್ನ ಔಟ್​ ಬಗ್ಗೆ ಮಾತನಾಡುದಕ್ಕಿಂತ ಶಕೀಬ್​ ಮತ್ತು ಬಾಂಗ್ಲಾ ತಂಡದ ಈ ಕುತಂತ್ರದ ಆಟದ ಬಗ್ಗೆ ಮಾತನಾಡುತ್ತಾರೆ ಇದು ನಿಜ” ಎಂದು ಮ್ಯಾಥ್ಯೂಸ್ ಹೇಳಿದರು.

Exit mobile version