ಸಿಡ್ನಿ: ಆಸ್ಟ್ರೇಲಿಯಾದ ಸ್ಟಾರ್ ಆಲ್‌ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್(Maxwell ) ಕಾಲಿನ ಮೂಳೆ ಮುರಿತದಿಂದ ಸದ್ಯ ಚೇತರಿಕೆ ಕಾಣುತಿದ್ದಾರೆ. ಇದೀಗ ತಮ್ಮ ಗಾಯಕ್ಕೆ ಕಾರಣವಾದ ಘಟನೆಯನ್ನು ಮ್ಯಾಕ್ಸ್‌ವೆಲ್ ಬಹಿರಂಗ ಪಡಿಸಿದ್ದಾರೆ.
“ಹುಟ್ಟುಹಬ್ಬದ ಪಾರ್ಟಿಯಲ್ಲಿ ಸ್ನೇಹಿತನನ್ನು ಬೆನ್ನಟ್ಟುವ ಸಮಯದಲ್ಲಿ ಎಡಗಾಲು ಮುರಿತಕೊಳ್ಳಗಾಯಿತು. ಸ್ನೇಹಿತ ಆಕಸ್ಮಿಕವಾಗಿ ಜಾರಿ ಕಾಲಿನ ಮೇಲೆ ಬಿದ್ದಿದ್ದಾನೆ. ಅವರ ದೇಹದ ಸಂಪೂರ್ಣ ಭಾರ ಕಾಲಿನ ಮೇಲೆ ಬಿದ್ದ ಕಾರಣ ಈ ಗಾಯ ಸಂಭವಿಸಿತು. ಸ್ವಲ್ಪ ಅಂತರದಲ್ಲಿ ದೊಡ್ಡ ಅವಘಡವೊಂದು ತಪ್ಪಿಹೋಯಿತು. ಒಂದು ವೇಳೆ ಇದು ಸ್ವಲ್ಪ ತೀವ್ರವಾಗಿದ್ದರೂ ನನ್ನ ಕ್ರಿಕೆಟ್ ವೃತ್ತಿಜೀವನ ಕೊನೆಗೊಳ್ಳುತ್ತಿತ್ತು” ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
“ನಾನು ಬಹುಶಃ ನನ್ನ ಪಾದವನ್ನು ಕಳೆದುಕೊಳ್ಳುವ ಅವಕಾಶ ಇತ್ತು. ಆ ಘಟನೆ ತುಂಬಾ ಭಯಾನಕವಾಗಿತ್ತು. ಘಟನೆಯನ್ನು ಈಗ ನೆನಪಿಸಿಕೊಳ್ಳುವಾಗ ಭಯವಾಗುತ್ತದೆ. ಈಗ ನನಗೆ ನಡೆದಾಡಲು ಕೂಡ ಕಷ್ಟವಾಗುತ್ತಿದೆ. ನಡೆಯುವುದನ್ನು ಪ್ರಾರಂಭಿಸಬೇಕಿದೆ” ಎಂದು ಮ್ಯಾಕ್ಸ್‌ವೆಲ್ ತಿಳಿಸಿದ್ದಾರೆ.
ಪತ್ನಿಯ ಬೆಂಬಲಕ್ಕೆ ಧನ್ಯವಾದ ತಿಳಿಸಿದ ಮ್ಯಾಕ್ಸ್‌ವೆಲ್
“ನನ್ನ ಪತ್ನಿ ನನಗೆ ನಂಬಲಾಗದಷ್ಟು ಬೆಂಬಲ ನೀಡುತ್ತಿದ್ದಾಳೆ. ಒಂದೂವರೆ ತಿಂಗಳಿನಿಂದ ನನ್ನನ್ನು ನೋಡಿಕೊಳ್ಳುತ್ತಿದ್ದಾರೆ. ಈ ನೋವಿನಿಂದ ಬೇಗ ಹೊರಬರಲು ಅವಳು ಸಹಾಯ ಮಾಡಿದ್ದಾಳೆ. ಈಗ ಸ್ವಲ್ಪ ಆರಾಮದಾಯಕವಾಗಿ ನಡೆಯಲು ಆರಂಭಿಸುತ್ತಿದ್ದೇನೆ. ಇನ್ನೂ ಕೆಲವು ದಿನಗಳಲ್ಲಿ ಊರುಗೋಲಿನ ಅವಶ್ಯಕತೆ ಇಲ್ಲದೆ ಓಡಾಡುತ್ತೇನೆ. ಆದಷ್ಟು ಬೇಗನೆ ಚೇತರಿಸಿಕೊಳ್ಳುವ ವಿಶ್ವಾಸವಿದೆ” ಎಂದು ಮ್ಯಾಕ್ಸ್‌ವೆಲ್ ಹೇಳಿದ್ದಾರೆ.
ಇದೀಗ ಮ್ಯಾಕ್ಸ್‌ವೆಲ್ ಹೇಳಿಕೆ ಆರ್ಸಿಬಿಗೆ ಚಿಂತೆಗೀಡು ಮಾಡಿದೆ. ಕಾರಣ ಅವರು ಈ ಬಾರಿ ತಂಡಕ್ಕೆ ಲಭ್ಯರಿದ್ದಾರಾ ಎನ್ನುವುದು ಪ್ರಶ್ನಾತೀತವಾಗಿದೆ. ಒಂದೊಮ್ಮೆ ಅವರ ಅನುಪಸ್ಥಿತಿ ಕಾಡಿದರೆ ಆರ್ಸಿಬಿಗೆ ಹಿನ್ನಡೆಯಾಗುವುದು ಪಕ್ಕಾ ಎನ್ನಬಹುದು.
ಇದನ್ನೂ ಓದಿ | Glenn Maxwell | ಗೆಳೆಯನ ಬರ್ತ್‌ಡೇ ಪಾರ್ಟಿಯಲ್ಲಿ ಬಿದ್ದು ಕಾಲು ಮುರಿದುಕೊಂಡ ಮ್ಯಾಕ್ಸ್‌ವೆಲ್