ಮಂಗಳೂರು: ಟೀಮ್ ಇಂಡಿಯಾ ಕ್ರಿಕೆಟಿಗ, ಕನ್ನಡಿಗ ಮಯಾಂಕ್ ಅಗರ್ವಾಲ್(Mayank Agarwal) ಅವರು ಕುಕ್ಕೆ ಶ್ರೀ ಸುಬ್ರಹ್ಮಣ್ಯ(Kukke Shri Subrahmanya) ದೇವಸ್ಥಾನದಲ್ಲಿ ಇಂದು(ಬುಧವಾರ) ಸರ್ಪಸಂಸ್ಕಾರ ಸೇವೆಯನ್ನು ನೆರವೇರಿಸಿದ್ದಾರೆ. ಸೋಮವಾರದಂದು ಅಗರ್ವಾಲ್ ಅವರು ಪತ್ನಿ ಆಶಿತಾ ಸೂದ್(Aashita Sood) ಮತ್ತು ಕುಟುಂಬದೊಂದಿಗೆ ಇಲ್ಲಿಗೆ ಆಗಮಿಸಿ ಖಾಸಗಿ ಹೊಟೇಲ್‌ನಲ್ಲಿ ತಂಗಿದ್ದರು. ಈ ವೇಳೆ ಅವರನ್ನು ಹೊಟೇಲ್‌ನಲ್ಲಿ ಆರತಿ ಬೆಳಗಿ ತಿಲಕವಿಟ್ಟು ಸ್ವಾಗತಿಸಲಾಗಿತ್ತು.
ಮಂಗಳವಾರ ಬೆಳಗ್ಗೆ ಕುಟುಂಬ ಸಮೇತರಾಗಿ ದೇವಳದಲ್ಲಿ ಸರ್ಪಸಂಸ್ಕಾರ ಸೇವೆ ಆರಂಭಿಸಿದ್ದರು. ಅಲ್ಲದೇ, ಸೇವೆಯ ವೈದಿಕ ವಿಧಿ-ವಿಧಾನಗಳನ್ನು ನೆರವೇರಿಸಿದ್ದರು. ಬುಧವಾರ ಗೋಪೂಜೆ, ಬ್ರಹ್ಮಚಾರಿ ಆರಾಧನೆ ಮತ್ತು ನಾಗಪ್ರತಿಷ್ಠೆ ನೆರವೇರಿಸಿ ಸರ್ಪಸಂಸ್ಕಾರ ಸೇವೆಯನ್ನು ಸಮಾಪ್ತಿಗೊಳಿಸಲಿ ದೇವರ ದರ್ಶನ ಪಡೆದು ದೇವಾಲಯದಲ್ಲಿ ಭೋಜನ ಸ್ವೀಕರಿಸಿದ್ದಾರೆ.
ಇದಕ್ಕೂ ಮುನ್ನ ಅಗರ್ವಾಲ್ ಅವರು ಕುಟುಂಬ ಸಮೇತರಾಗಿ ಮಂಗಳವಾರ ರಾತ್ರಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಮತ್ತು ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ್ದರು. ಜೂನ್ 9 ರಂದು ಅಗರ್ವಾಲ್ ಕುಟುಂಬ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿತ್ತು.
ಅಗರ್ವಾಲ್ ದೇಶಿಯ ಕ್ರಿಕೆಟ್ನಲ್ಲಿ ಉತ್ತಮ ಸಾಧನೆ ತೋರಿದರೂ ಅವರಿಗೆ ಭಾರತ ತಂಡದಲ್ಲಿ ಸರಿಯಾದ ಅವಕಾಶ ಸಿಗಲೇ ಇಲ್ಲ. ಈಗಾಗಲೇ ಹಲವು ಬಾರಿ ಭಾರತ ಟೆಸ್ಟ್ ತಂಡದ ಪರ ಮಯಾಂಕ್ ಆಡಿದ್ದರೂ ಅವರ ಸ್ಥಾನ ಮಾತ್ರ ಗಟ್ಟಿಯಾಗಿರಲಿಲ್ಲ. ಆರಂಭಿಕ ಆಟಗಾರರು ಗಾಯಗೊಂಡರೆ ಮಾತ್ರ ಅವರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಅವರು ಸಿಕ್ಕ ಅನೇಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಅವರು ಇದುವರೆಗೆ 21 ಟೆಸ್ಟ್ ಪಂದ್ಯಗಳನ್ನು ಆಡಿದ್ದು 4 ಶತಕ, 2 ದ್ವಿಶತಕ ಮತ್ತು 6 ಅರ್ಧಶತಕ ಬಾರಿಸಿದ್ದಾರೆ. 243 ರನ್ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.
ಇದನ್ನೂ ಓದಿ Mayank Agarwal: ನೀರಿನ ಬಾಟಲ್ ಫೋಟೊ ಹಂಚಿಕೊಂಡು ರಿಸ್ಕ್ ತೆಗೆದುಕೊಳ್ಳಲಾರೆ ಎಂದ ಅಗರ್ವಾಲ್
ಇತ್ತೀಗೆಚೆ ಅಗರ್ವಾಲ್ ಅವರು ರಣಜಿ ಕ್ರಿಕೆಟ್ ಪಂದ್ಯವನ್ನಾಡಲು ಅಗರ್ತಲಾದಿಂದ ಸೂರತ್‌ಗೆ ವಿಮಾನದಲ್ಲಿ ತೆರಳುವಾಗ ನೀರು ಎಂದು ಭಾವಿಸಿ ರಾಸಾಯನಿಕ ದ್ರಾವಣವೊಂದನ್ನು ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಸೀಟಿನ ಮುಂಭಾಗದಲ್ಲಿದ್ದ ಬಾಟಲಿಯೊಂದನ್ನು ತೆಗೆದು, ಅದರಲ್ಲಿದ್ದ ಪಾನೀಯವನ್ನು ನೀರು ಎಂದು ಭಾವಿಸಿ ಕುಡಿದಿದ್ದರು. ಅದು ಶೌಚಾಲಯವನ್ನು ಸ್ವತ್ಛಗೊಳಿಸುವ ದ್ರಾವಣವಾಗಿತ್ತು. ವಿಮಾನ ಟೇಕ್ ಆಫ್ ಆಗದ ಕಾರಣ ಅಗರ್ವಾಲ್ ಅವರನ್ನು ತುರ್ತಾಗಿ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗಿತ್ತು. ಆರಂಭದಲ್ಲಿ ಅಗರ್ವಾಲ್ಗೆ ವಿಶಪ್ರಾಶನ ಮಾಡಲಾಗಿದೆ ಎಂದು ವರದಿಯಾಗಿತ್ತು. ಬಳಿಕ ಸತ್ಯಾಂಶ ಬೆಳಕಿಗೆ ಬಂದಿತ್ತು.