Site icon Vistara News

Mayank Agarwal: ಭಾರತ ತಂಡದಿಂದ ದೂರ ಉಳಿದಿದ್ದರೂ ಯೋ-ಯೋ ಟೆಸ್ಟ್​ನಲ್ಲಿ ದಾಖಲೆ ಬರೆದ ಅಗರ್ವಾಲ್​

mayank agarwal yo yo test

ಬೆಂಗಳೂರು: ಸದ್ಯ ಭಾರತ ತಂಡದ ಎಲ್ಲ ಸ್ವರೂಪದಲ್ಲಿಯೂ ಸ್ಥಾನ ಕಳೆದುಕೊಂಡು ಕೇವಲ ದೇಶಿಯ ಮತ್ತು ಐಪಿಎಲ್ ಟೂರ್ನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿರುವ ಮಾಯಾಂಕ್‌ ಅಗರ್ವಾಲ್‌(Mayank Agarwal),​ ಫಿಟ್​ನೆಸ್​ ಪರೀಕ್ಷೆಯಾದ ಯೋ-ಯೋ ಟೆಸ್ಟ್​ನಲ್ಲಿ(yo yo test) ಟೀಮ್​ ಇಂಡಿಯಾದ ಆಟಗಾರರಿಗೆ ಸಡ್ಡು ಹೊಡೆದಿದ್ದಾರೆ.

ಬೆಂಗಳೂರಿನ ನ್ಯಾಷನಲ್‌ ಕ್ರಿಕೆಟ್‌ ಅಕಾಡೆಮಿಯಲ್ಲಿ (ಎನ್‌ಸಿಎ) ಅಗರ್ವಾಲ್‌ ಯೋ-ಯೋ ಟೆಸ್ಟ್‌ಗೆ ಒಳಗಾಗಿದ್ದರು. ಇಲ್ಲಿ ಅತ್ಯುತ್ತ 21.1 ಅಂಕಗಳನ್ನು ಪಡೆದುಕೊಂಡು ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಿದ್ದಾರೆ. ಅವರು ತಮ್ಮ ಯೋ-ಯೋ ಟೆಸ್ಟ್‌ ಅಂಕವನ್ನು ಸಾಮಾಜಿ ಜಾಲತಾಣವಾದ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಬಹಿರಂಗಪಡಿಸಿದ್ದು ಮುಂದಿನ ಆವೃತ್ತಿಗೆ ಸಜ್ಜಾಗುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇತ್ತೀಗೆ ಭಾರತ ತಂಡದ ಆಟಗಾರರು ಏಷ್ಯಾ ಕಪ್​ ಟೂರ್ನಿಗೂ ಮುನ್ನ ಯೋ-ಯೋ ಟೆಸ್ಟ್​ಗೆ ಒಳಗಾಗಿದ್ದರು. ಈ ವೇಳೆ ವಿರಾಟ್​ ಕೊಹ್ಲಿ(17.2) ತಮ್ಮ ಅಂಕವನ್ನು ಟ್ವಿಟರ್​ನಲ್ಲಿ ಹಂಚಿಕೊಂಡಿದ್ದರು. ಇದು ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿತ್ತು. ತಂಡದ ಗೌಪ್ಯ ವಿಚಾರವನ್ನು ಎಲ್ಲಿಯೂ ಹಂಚಿಕೊಳ್ಳಬಾರದೆಂದೆ ಎಲ್ಲ ಆಟಗಾರರಿಗೆ ಎಚ್ಚರಿಕೆಯನ್ನು ನೀಡಿತ್ತು. ಸದ್ಯ ಅಗರ್ವಾಲ್​ ಭಾರತ ತಂಡದಲ್ಲಿ ಇಲ್ಲದ ಕಾರಣ ಶಿಕ್ಷೆಯೊಂದರಿಂದ ತಪ್ಪಿಸಿಕೊಂಡಿದ್ದಾರೆ. ಅಚ್ಚರಿ ಎಂದರೆ ಏಷ್ಯಾಕಪ್​ ತಂಡದಲ್ಲಿ ಸ್ಥಾನ ಪಡೆದ ಎಲ್ಲ ಆಟಗಾರರು ಪಡೆದ ಯೋ-ಯೋ ಅಂಕದಿಂದ ಅಗರ್ವಾಲ್ ಹೆಚ್ಚಿನ ಅಂಕ ಗಳಿಸಿದ್ದಾರೆ.

ಇದನ್ನೂ ಓದಿ Viral Video: ಜಡಿ ಮಳೆಯಲ್ಲೂ ಬ್ಯಾಟಿಂಗ್​ ಅಭ್ಯಾಸ ನಡೆಸಿದ ಮಯಾಂಕ್​ ಅಗರ್ವಾಲ್​; ವಿಡಿಯೊ ವೈರಲ್​

ಯೋ-ಯೋ ಟೆಸ್ಟ್​ ಎಂದರೆ…

ಯೋ-ಯೋ ಟೆಸ್ಟ್‌ ಎಂದರೆ ಇದು 23 ಹಂತಗಳ ಪರೀಕ್ಷೆ, ಕ್ರಿಕೆಟಿಗರಿಗೆ 5ನೇ ಹಂತದಿಂದ ಆರಂಭ, ಕ್ರಿಕೆಟಿಗ 20 ಪ್ಲಸ್‌ 20 ಮೀ. ದೂರವನ್ನು ನಿಗದಿತ ಅವಧಿಯಲ್ಲಿ ಪೂರೈಸುವುದು. ಹಂತಗಳ ಸಂಖ್ಯೆ ಹೆಚ್ಚಿದಂತೆ ದೂರವನ್ನು ಕ್ರಮಿಸುವ ಸಮಯ ಕಡಿಮೆಯಾಗುತ್ತದೆ. ಇಲ್ಲಿ ತೇರ್ಗಡೆಯಾಗಲು ಕನಿಷ್ಠ 16.1 ಅಂಕ ಅಗತ್ಯ. ಇದು ಯೋ-ಯೋ ಟೆಸ್ಟ್​ ಆಗಿದೆ.

ಡೆಕ್ಸಾ ಟೆಸ್ಟ್

ಡೆಕ್ಸಾ(dexa test) ಅಂದರೆ ಮೂಳೆಗಳ ಸಾಂದ್ರತೆ ಯನ್ನು ಪತ್ತೆಹಚ್ಚುವ ವಿಧಾನ. ಆಟಗಾರರ ದೈಹಿಕ ಕ್ಷಮತೆಯನ್ನು ವೈಜ್ಞಾನಿಕವಾಗಿ, ಹೆಚ್ಚು ನಿಖರವಾಗಿ ಗುರುತಿಸಲು ಇದರಿಂದ ಸಾಧ್ಯ. ಇಲ್ಲಿ ನಡೆಸಲಾಗುವ ಎಕ್ಸ್‌-ರೇ ಪರೀಕ್ಷೆ ವೇಳೆ ಆಟಗಾರರ ಮೂಳೆಯ ಸಾಮರ್ಥ್ಯದ ಸ್ಪಷ್ಟ ಚಿತ್ರಣ ಲಭಿಸುತ್ತದೆ. ಮೂಳೆಯ ಸಾಮರ್ಥ್ಯ ಎಷ್ಟಿದೆ, ಗಟ್ಟಿಯಾಗಿದೆಯೇ ಅಥವಾ ಬಹಳ ಬೇಗ ಮುರಿಯಬಹುದೇ ಎಂಬುದರ ಜತೆಗೆ ದೇಹದಲ್ಲಿನ ಕೊಬ್ಬಿನ ಅಂಶವನ್ನೂ ಪತ್ತೆಹಚ್ಚಬಹುದು. ಇದು ಕೇವಲ 10 ನಿಮಿಷಗಳ ಪರೀಕ್ಷೆಯಾಗಿದೆ. ಒಂದೊಮ್ಮೆ ಆಟಗಾರರ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿದ್ದರೆ ಆಗ ಅವರಿಗೆ ಆಹಾರ ಸೇವನೆಯಲ್ಲಿ ಕೆಲ ನಿಯಮವನ್ನು ಪಾಲಿಸುವಂತೆ ಬಿಸಿಸಿಐ ವೈದ್ಯರು ಸೂಚನೆ ನೀಡುತ್ತಾರೆ. ಇದನ್ನು ಆಟಗಾರರು ಪಾಲಿಸಬೇಕಿದೆ.

ಅಗರ್ವಾಲ್ ದೇಶಿಯ ಕ್ರಿಕೆಟ್​ನಲ್ಲಿ ಉತ್ತಮ ಸಾಧನೆ ತೋರಿದರೂ ಅವರಿಗೆ ಭಾರತ ತಂಡದಲ್ಲಿ ಸರಿಯಾದ ಅವಕಾಶ ಸಿಗಲೇ ಇಲ್ಲ. ಈಗಾಗಲೇ ಹಲವು ಬಾರಿ ಭಾರತ ಟೆಸ್ಟ್​ ತಂಡದ ಪರ ಮಯಾಂಕ್​ ಆಡಿದ್ದರೂ ಅವರ ಸ್ಥಾನ ಮಾತ್ರ ಗಟ್ಟಿಯಾಗಿರಲಿಲ್ಲ. ಆರಂಭಿಕ ಆಟಗಾರರು ಗಾಯಗೊಂಡರೆ ಮಾತ್ರ ಅವರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಅವರು ಸಿಕ್ಕ ಅನೇಕ ಅವಕಾಶದಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ತಂಡಕ್ಕೆ ಕೊಡುಗೆ ನೀಡಿದ್ದಾರೆ. ಅವರು ಇದುವರೆಗೆ 21 ಟೆಸ್ಟ್​ ಪಂದ್ಯಗಳನ್ನು ಆಡಿದ್ದು 4 ಶತಕ, 2 ದ್ವಿಶತಕ ಮತ್ತು 6 ಅರ್ಧಶತಕ ಬಾರಿಸಿದ್ದಾರೆ. 243 ರನ್​ ಅವರ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

Exit mobile version