Site icon Vistara News

IRANI CUP : ಶೇಷ ಭಾರತ ತಂಡಕ್ಕೆ ಮಯಾಂಕ್​ ಅಗರ್ವಾಲ್​ ನಾಯಕ, ಸರ್ಫರಾಜ್​ ಖಾನ್ ಅಲಭ್ಯ

Mayank Agarwal is the captain for the rest of India, Sarfaraz Khan is unavailable

#image_title

ಮುಂಬಯಿ: ಇರಾನಿ ಕಪ್​ನ 2023ನೇ (IRANI CUP) ಆವೃತ್ತಿಯಲ್ಲಿ ಶೇಷ ಭಾರತ ತಂಡಕ್ಕೆ ಕನ್ನಡಿಗ ಮಯಾಂಕ್​ ಅಗರ್ವಾಲ್​ ನಾಯಕರಾಗಿದ್ದಾರೆ. ಇದೇ ವೇಳೆ ಇದೇ ತಂಡದ ಸದಸ್ಯರಾಗಿರುವ ಸರ್ಪರಾಜ್​ ಖಾನ್ ಅವರು ಕೈ ಬೆರಳಿನ ನೋವಿನಿಂದ ಅಲಭ್ಯರಾಗಿದ್ದಾರೆ. ಶೇಷ ಭಾರತ ಹಾಗೂ ಕಳೆದ ಬಾರಿಯ ರಣಜಿ ಟ್ರೋಫಿ ಚಾಂಪಿಯನ್​ ಮಧ್ಯಪ್ರದೇಶ ತಂಡಗಳ ನಡುವೆ ಪಂದ್ಯ ನಡೆಯಲಿದ್ದು, ಗ್ವಾಲಿಯರ್​ ಆತಿಥ್ಯ ವಹಿಸಲಿದೆ.

ಡಿವೈ ಪಾಟೀಲ್​ ಟಿ20 ಕ್ರಿಕೆಟ್​ ಟೂರ್ನಮೆಂಟ್​ನಲ್ಲಿ ಆಡುವ ವೇಳೆ ಸರ್ಪರಾಜ್​ ಖಾನ್​ ಅವರ ತೋರು ಬೆರಳಿಗೆ ಗಾಯವಾಗಿದೆ. ಅವರು ಬ್ಯಾಟಿಂಗ್ ಮತ್ತು ಫೀಲ್ಡಿಂಗ್​ ಮಾಡುವ ವೇಳೆ ಫೈಬರ್​ನ ರಕ್ಷಣಾ ಕವಚ ಹಾಕಿಕೊಂಡು ಆಡಿದ್ದರು. ಹೀಗಾಗಿ ಇರಾನಿ ಟ್ರೋಫಿಗೆ ಅಲಭ್ಯರಾಗಿದ್ದಾರೆ.

ಇದನ್ನೂ ಓದಿ : IPL 2023 | ಮುಂಬೈ ಇಂಡಿಯನ್ಸ್​ ತಂಡಕ್ಕೆ ಸಹಾಯಕ ಬ್ಯಾಟಿಂಗ್​ ಕೋಚ್​ ಆಗಿ ಕನ್ನಡಿಗ ​ ಜಗದೀಶ್ ನೇಮಕ!

ಮಯಾಂಕ್​ ಅಗರ್ವಾಲ್​ ರಣಜಿ ಟ್ರೋಫಿ 2023ರ ಗರಿಷ್ಠ ಸ್ಕೋರರ್​ ಎನಿಸಿಕೊಂಡಿದ್ದರು. ಅವರು 13 ಪಂದ್ಯಗಳಿಂದ 990 ರನ್​ ಬಾರಿಸಿದ್ದರು. ಅವರು ಸೆಮಿ ಫೈನಲ್​ ಪಂದ್ಯದಲ್ಲಿ ಸೌರಾಷ್ಟ್ರ ವಿರುದ್ಧ 249 ಹಾಗೂ 55 ರನ್ ಬಾರಿಸಿದ್ದರು. ಹೀಗಾಗಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ.

ಇರಾನಿ ಟ್ರೋಫಿ ತಂಡಗಳು

ಶೇಷ ಭಾರತ: ಮಯಾಂಕ್ ಅಗರ್ವಾಲ್, ಸುದೀಪ್ ಕುಮಾರ್ ಘರಾಮಿ, ಯಶಸ್ವಿ ಜೈಸ್ವಾಲ್, ಅಭಿಮನ್ಯು ಈಶ್ವರನ್, ಹಾರ್ವಿಕ್ ದೇಸಾಯಿ, ಮುಖೇಶ್ ಕುಮಾರ್, ಅತಿತ್ ಶೇಠ್, ಚೇತನ್ ಸಕಾರಿಯಾ, ನವದೀಪ್ ಸೈನಿ, ಉಪೇಂದ್ರ ಯಾದವ್ (WK), ಮಯಾಂಕ್ ಮಾರ್ಕಾಂಡೆ, ಸೌರಭ್ ಕುಮಾರ್, ಆಕಾಶ್ ದೀಪ್, ಬಾಬಾ ಇಂದ್ರಜಿತ್, ಪುಲ್ಕಿತ್, ಪುಲ್ಕಿತ್ ಧೂಳು.

ಮಧ್ಯ ಪ್ರದೇಶ:

ರಜತ್ ಪಾಟಿದಾರ್, ಯಶ್ ದುಬೆ, ಹಿಮಾಂಶು ಮಂತ್ರಿ (wk), ಹರ್ಷ್ ಗಾವ್ಲಿ, ಶುಭಂ ಶರ್ಮಾ, ವೆಂಕಟೇಶ್ ಅಯ್ಯರ್, ಅಕ್ಷತ್ ರಘುವಂಶಿ, ಅಮನ್ ಸೋಲಂಕಿ, ಕುಮಾರ್ ಕಾರ್ತಿಕೇಯ, ಸರನ್ಶ್ ಜೈನ್, ಅವೇಶ್ ಖಾನ್, ಅಂಕಿತ್ ಕುಶ್ವಾಹ್, ಗೌರವ್ ಯಾದವ್, ಅನುಭವ್ ಅಗರ್ವಾನಿ, ಮಿಹಿರ್ ಅಗರ್ವಾನಿ.

Exit mobile version