ಬೆಂಗಳೂರು: ಟೀಮ್ ಇಂಡಿಯಾ ಕ್ರಿಕೆಟಿಗ ಮಯಾಂಕ್ ಅಗರ್ವಾಲ್(Mayank Agarwal) ಜೀವನದಲ್ಲಿ ಹೊಸ ಇನಿಂಗ್ಸ್ ಆರಂಭವಾಗಿದ್ದು, ಅವರ ಪತ್ನಿ ಆಶಿತಾ ಸೂದ್ ಡಿಸೆಂಬರ್ 8 ರಂದು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ಅಗರ್ವಾಲ್ ಭಾನುವಾರ ತಮ್ಮ ಪತ್ನಿ ಮತ್ತು ಮಗನೊಂದಿಗಿನ ಪೋಟೊವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಳ್ಳುವ ಮೂಲಕ ಮಾಹಿತಿ ನೀಡಿದ್ದಾರೆ.
2018ರಲ್ಲಿ ವಿವಾಹವಾಗಿದ್ದ ಮಯಾಂಕ್ ಅಗರ್ವಾಲ್ ಹಾಗೂ ಆಶಿತಾ ಸೂದ್ ಇದೀಗ ಪೋಷಕರಾಗಿದ್ದಾರೆ. ಅದರಂತೆ ಅಗರ್ವಾಲ್ ತಮ್ಮ ಮುದ್ದಿನ ಮಗುವಿನ ಹೆಸರನ್ನು ಬಹಿರಂಗ ಪಡಿಸಿದ್ದಾರೆ. ಮಗುವಿಗೆ ಆಯಾಂಶ್ ಎಂದು ಹೆಸರಿಟ್ಟಿದ್ದಾರೆ.
ಗಂಡು ಮಗುವಿಗೆ ತಂದೆಯಾದ ಅಗರ್ವಾಲ್ಗೆ ವಿರಾಟ್ ಕೊಹ್ಲಿ ‘ನಿಮ್ಮಿಬ್ಬರಿಗೂ ಅಭಿನಂದನೆಗಳು’ ಎಂದು ಶುಭಕೋರಿದ್ದಾರೆ. ಜತೆಗೆ ಅಜಿಂಕ್ಯಾ ರಹಾನೆ ಸೇರಿದಂತೆ ಟೀಮ್ ಇಂಡಿಯಾದ ಹಲವು ಆಟಗಾರರು ಶುಭ ಕೋರಿದ್ದಾರೆ.
ಸದ್ಯ ಕರ್ನಾಟಕ ರಣಜಿ ತಂಡವನ್ನು ಮುನ್ನಡೆಸಲಿರುವ ಅವರು ಡಿಸೆಂಬರ್ 23ರಂದು ನಡೆಯಲಿರುವ ಐಪಿಎಲ್ ಮಿನಿ ಹರಾಜಿನಲ್ಲಿ ಉತ್ತಮ ಮೊತ್ತಕ್ಕೆ ಬಿಡ್ ಆಗು ನಿರೀಕ್ಷೆ ಇದೆ. ಮಯಾಂಕ್ ಒಂದು ಕೋ. ರೂ. ಮೂಲ ಬೆಲೆಯ ಆಟಗಾರ ಪಟ್ಟಿಯಲ್ಲಿ ತಮ್ಮ ಹೆಸರು ನೋಂದಾಯಿಸಿದ್ದಾರೆ. ಕಳೆದ ಬಾರಿ ಪಂಜಾಬ್ ಕಿಂಗ್ಸ್ ತಂಡವನ್ನು ಮುನ್ನಡೆಸಿದರೂ ಯಶಸ್ಸು ಸಾಧಿಸಿರಲಿಲ್ಲ. ಈ ಕಾರಣದಿಂದ ಅವರನ್ನು ತಂಡ ಕೈಬಿಟ್ಟಿತ್ತು.
ಇದನ್ನೂ ಓದಿ | IND VS BAN | ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರವೇಶಿಸಲು ಇನ್ನೂ 6 ಪಂದ್ಯ ಗೆಲ್ಲಬೇಕಿದೆ ಟೀಮ್ ಇಂಡಿಯಾ!