Site icon Vistara News

Ranji Trophy Semifinal: ಸೌರಾಷ್ಟ್ರ ವಿರುದ್ಧ ಅಜೇಯ ಶತಕ ಬಾರಿಸಿ ಮಿಂಚಿದ ಮಯಾಂಕ್​ ಅಗರ್ವಾಲ್​

Ranji Trophy Semifinal

#image_title

ಬೆಂಗಳೂರು: ಸೌರಾಷ್ಟ್ರ ವಿರುದ್ಧದ ರಣಜಿ ಟ್ರೋಫಿಯ ಸೆಮಿಫೈನಲ್(Ranji Trophy Semifinal)​ ಪಂದ್ಯದಲ್ಲಿ ಕರ್ನಾಟಕ ತಂಡದ ನಾಯಕ ಮಯಾಂಕ್​ ಅಗರ್ವಾಲ್(mayank agarwal)​ ಅಜೇಯ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದಾರೆ.

ಬುಧವಾರ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರಂಭಗೊಂಡ ಈ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ ನಡೆಸಿದ ಕರ್ನಾಟಕ ತಂಡ ಮೊದಲ ದಿನದಾಟದ ಅಂತ್ಯಕ್ಕೆ 5 ವಿಕೆಟ್​ ಕಳೆದುಕೊಂಡು 229 ರನ್​ ಗಳಿಸಿದೆ. ಸದ್ಯ ಅಗರ್ವಾಲ್​ ಮತ್ತು ಶ್ರೀನಿವಾಸ್​ ಶರತ್​ ಬ್ಯಾಟಿಂಗ್​ ಕಾಯ್ದುಕೊಂಡಿದ್ದಾರೆ.

ಇನಿಂಗ್ಸ್ ಆರಂಭಿಸಿದ ಕರ್ನಾಟಕ ತಂಡ ಉತ್ತಮ ಆರಂಭ ಪಡೆಯಲಿಲ್ಲ. ಆರಂಭಿಕ ಆಟಗಾರ ರವಿಕುಮಾರ್ ಸಮರ್ಥ್ ಕೇವಲ 3 ರನ್​ಗಳಿಸಿ​ ನಿರ್ಗಮಿಸಿದರು. ಆ ಬಳಿಕ ಬಂದ ದೇವದತ್ ಪಡಿಕ್ಕಲ್ ಕೂಡ 9 ರನ್​ಗಳಿಸಿ ನಿರಾಸೆ ಮೂಡಿಸಿದರು. ಆದರೆ ಮತ್ತೊಂದು ತುದಿಯಲ್ಲಿ ಕ್ರೀಸ್​ ಕಚ್ಚಿನಿಂತ ನಾಯಕ ಮಯಾಂಕ್​ ಅಗರ್ವಾಲ್ ಎದುರಾಳಿ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು. ಜತೆಗೆ ಶತಕ ಬಾರಿಸಿ ಮಿಂಚಿದರು. ಅಗರ್ವಾಲ್​ 246 ಎಸೆತ ಎದುರಿಸಿ ಅಜೇಯ 110 ರನ್​ಗಳಿಸಿದ್ದಾರೆ. ಈ ಇನಿಂಗ್ಸ್​ ವೇಳೆ 11 ಬೌಂಡರಿ ಮತ್ತು ಒಂದು ಸಿಕ್ಸರ್​ ದಾಖಲಾಗಿದೆ. ಉಳಿದಂತೆ ಶ್ರೀನಿವಾಸ್​ ಶರತ್ (ಅಜೇಯ 58) ಅರ್ಥಶಕತ ಬಾರಿಸಿ ಕ್ರೀಸ್​ನಲ್ಲಿದ್ದಾರೆ.

ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಅಜೇಯ ಶತಕ ಬಾರಿಸಿ ಮಿಂಚಿದ್ದ ಶ್ರೇಯಸ್ ಗೋಪಾಲ್ ಈ ಪಂದ್ಯದಲ್ಲಿ ಒಂದು ಜೀವದಾನ ಪಡೆದರೂ ಇದನ್ನು ಸಮರ್ಥವಾಗಿ ಬಳಿಸಿಕೊಳ್ಳುವಲ್ಲಿ ವಿಫಲವಾದರು. 41ನೇ ಓವರ್​ನಲ್ಲಿ ಇಲ್ಲದ ರನ್ ಕದಿಯಲು ಯತ್ನಿಸಿ ರನ್ ಔಟಾದರು. ಅವರ ಗಳಿಕೆ 15 ರನ್​.

ಇದನ್ನೂ ಓದಿ Ranji Trophy: ರಣಜಿ; ಸೆಮಿಫೈನಲ್​ನಲ್ಲಿ ಕರ್ನಾಟಕ ತಂಡಕ್ಕೆ ಸೌರಾಷ್ಟ್ರ ಸವಾಲು

ಸಂಕ್ಷಿಪ್ತ ಸ್ಕೋರ್​

ಕರ್ನಾಟಕ ಮೊದಲ ಇನಿಂಗ್ಸ್: 87 ಓವರ್ ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 229 ರನ್‌ (ಮಯಾಂಕ್ ಅಗರ್ವಾಲ್ ಅಜೇಯ 110, ಶ್ರೀನಿವಾಸ್​ ಶರತ್​ ಅಜೇಯ 58, ನಿಕಿನ್ ಜೋಸ್ 18, ಶ್ರೇಯಸ್ ಗೋಪಾಲ್ 15; ಕುಶಾಂಗ್ ಪಟೇಲ್ 64ಕ್ಕೆ 2).

Exit mobile version