Site icon Vistara News

Mayank Yadav: ಗಾಯಾಳು ಮಾಯಾಂಕ್‌ ಯಾದವ್‌ ಐಪಿಎಲ್​ನಿಂದ ಔಟ್​?

Mayank Yadav

ಲಕ್ನೋ: ಈ ಐಪಿಎಲ್‌ನಲ್ಲಿ(IPL 2024) ಶರವೇಗದ, ಅಷ್ಟೇ ನಿಖರ ಎಸೆತಗಳಿಂದ ಎದುರಾಳಿಯ ದಿಕ್ಕು ತಪ್ಪಿಸಿ ಗಂಟೆಗೆ 150 ಕಿಮೀ ವೇಗದಲ್ಲಿ ಚೆಂಡೆಸೆದು ಭಾರೀ ಸಂಚಲನ ಮೂಡಿಸುತ್ತಿದ್ದ ಲಕ್ನೋ ಸೂಪರ್‌ ಜೈಂಟ್ಸ್‌(Lucknow Super Giants) ತಂಡದ ವೇಗಿ ಮಾಯಾಂಕ್‌ ಯಾದವ್‌(Mayank Yadav) ಮತ್ತೆ ಗಾಯಗೊಂಡಿದ್ದು ಟೂರ್ನಿಯಿಂದ ಹೊರಬೀಳಲಿದ್ದಾರೆ ಎಂದು ತಿಳಿದುಬಂದಿದೆ.

ಈ ಬಾರಿಯ ಐಪಿಎಲ್​ ಆವೃತ್ತಿಯಲ್ಲಿ ಆರಂಭಿಕ ಮೂರು ಪಂದ್ಯಗಳನ್ನಾಡಿದ್ದ ಮಯಾಂಕ್​ ಗಾಯದಿಂದ ಆ ಬಳಿಕದ ಕೆಲವು ಪಂದ್ಯಗಳನ್ನಾಡಿರಲಿಲ್ಲ. ನಿನ್ನೆ(ಮಂಗಳವಾರ) ನಡೆದ ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದ ಮೂಲಕ ಮತ್ತೆ ಮೈದಾನಕ್ಕಿಳಿದಿದ್ದರು. ಆದರೆ, ಪಂದ್ಯದ ವೇಳೆ ಮತ್ತೆ ಈ ಹಿಂದಿನ ಗಾಯಕ್ಕೆ ತುತ್ತಾಗಿ ಪಂದ್ಯದಿಂದ ಹೊರಗುಳಿದರು.

3.1 ಓವರ್‌ಗಳಲ್ಲಿ 31 ರನ್‌ಗಳಿಗೆ 1 ವಿಕೆಟ್‌ ಪಡೆದು ಗಾಯದಿಂದ ಪಂದ್ಯವನ್ನು ಅರ್ಧಕ್ಕೆ ಮೊಡಕುಗೊಳಿಸಿದ್ದರು. ಬಳಿಕ ಇವರ ಓವರನ್ನು ನವೀನ್​ ಉಲ್​ ಹಕ್​ ಪೂರ್ಣಗೊಳಿಸಿದ್ದರು. ಟೈಮ್ಸ್​ ಆಫ್​ ಇಂಡಿಯಾ ವರದಿಯ ಪ್ರಕಾರ ಮಯಾಂಕ್​ ಯಾದವ್​ ಇನ್ನುಳಿದ ಎಲ್ಲ ಪಂದ್ಯಗಳಿಗೂ ಅಲಭ್ಯರಾಗಲಿದ್ದು ಟೂರ್ನಿಯಿಂದ ಹೊರಗುಳಿಯಲಿದ್ದಾರೆ ಎಂದು ತಿಳಿಸಿದೆ.

ಮಯಾಂಕ್ ಗಾಯದ ಬಗ್ಗೆ ಮಾಹಿತಿ ನೀಡಿರುವ ತಂಡದ ಮುಖ್ಯ ಕೋಚ್​ ಜಸ್ಟೀನ್​ ಲ್ಯಾಂಗರ್​, ‘ಪರಿಪೂರ್ಣ ಪುನರ್ವಸತಿಗೆ ಒಳಗಾಗಿದ್ದರೂ, ಮಯಾಂಕ್​ಗೆ ಹೊಟ್ಟೆಯ ಕೆಳಭಾಗದಲ್ಲಿ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಸ್ಕ್ಯಾನಿಂಗ್​ಗೆ ಒಳಪಡಿಸಲಾಗಿದೆ. ಅವರಿಗೆ ಈ ನೋವಿನಿಂದ ಚೇತರಿಸಿಕೊಳ್ಳಲು ಕನಿಷ್ಠ ಮೂರು ವಾರಗಳ ವಿಶ್ರಾಂತಿ ಬೇಕಾಗಬಹುದು” ಎಂದು ಹೇಳಿದ್ದಾರೆ. ಇವರ ಈ ಹೇಳಿಕೆ ನೋವುವಾಗ ಮಯಾಂಕ್​ ಟೂರ್ನಿಯಿಂದ ಹೊರಗುಳಿಯುವುದು ಬಹುತೇಖ ಖಚಿತಗೊಂಡಂತಿದೆ.

ಇದನ್ನೂ ಓದಿ IPL 2024: ನಾಯಕ ಹಾರ್ದಿಕ್​ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ

ಮಯಾಂಕ್ ಲಿಸ್ಟ್​ ‘ಎ’ಯಲ್ಲಿ 17 ಪಂದ್ಯಗಳನ್ನಾಡಿ 34 ವಿಕೆಟ್​ ಪಡೆದಿದ್ದಾರೆ. ದೇಶೀಯ ಟಿ20 ಟೂರ್ನಿಯಲ್ಲಿ 12 ಪಂದ್ಯ ಆಡಿ 18 ವಿಕೆಟ್​ ಕೆಡೆವಿದ್ದಾರೆ. ಕಳೆದ ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 4 ಓವರ್​ ಎಸೆದು 14 ರನ್​ ನೀಡಿ 3 ವಿಕೆಟ್​ ವಿಕೆಟ್​ ಕಬಳಿಸಿದ್ದರು. ಮಯಾಂಕ್ ಪ್ರಸ್ತುತ ಐಪಿಎಲ್​ನಲ್ಲಿ ಅತ್ಯಂತ ವೇಗದ ಎಸೆತವನ್ನು ಎಸೆದು ಗಮನಸೆಳೆದಿದ್ದಾರೆ. ಆರ್​ಸಿಬಿ ವಿರುದ್ಧದ ಪಂದ್ಯದಲ್ಲಿ 156.7 kmph ವೇಗದಲ್ಲಿ ಚೆಂಡೆಸಿದಿದ್ದರು. ಇದಕ್ಕೂ ಮುನ್ನ ನಡೆದಿದ್ದ ಪಂಜಾಬ್​ ವಿರುದ್ಧದ ಪಂದ್ಯದಲ್ಲಿ ಗಂಟೆಗೆ 155.8 kmph ವೇಗದಲ್ಲಿ ಬೌಲಿಂಗ್​ ನಡೆಸಿದ್ದರು. ದೇಶೀಯ ಕ್ರಿಕೆಟ್‌ನಲ್ಲಿ ದಿಲ್ಲಿ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಇವರ ಬೌಲಿಂಗ್​ ಶ್ರೇಯಸ್ಸಿಗೆ ಇಶಾಂತ್‌ ಶರ್ಮ, ನವದೀಪ್‌ ಸೈನಿ ನೀಡಿದ ಸಲಹೆಯೂ ಕೂಡ ಕಾರಣ. ಈ ವಿಚಾರವನ್ನು ಸ್ವತಃ ಯಾದವ್ ಅವರೇ ಹೇಳಿಕೊಂಡಿದ್ದರು. 

Exit mobile version