Site icon Vistara News

MS Dhoni: ಧೋನಿಯ ಸಿಕ್ಸರ್‌ ಬಡಿದ 2 ಸೀಟ್‌ನ ನೂತನ ಫೋಟೊ ವೈರಲ್‌

MS Dhoni's 2011 World Cup-winning six

ಮುಂಬಯಿ: 2011ರ ಏಕದಿನ ವಿಶ್ವಕಪ್‌ ಫೈನಲ್‌ ಪಂದ್ಯದಲ್ಲಿ ಮಹೇಂದ್ರ ಸಿಂಗ್​ ಧೋನಿ(MS Dhoni) ಅವರು ವಾಂಖೆಡೆ ಸ್ಟೇಡಿಯಂನಲ್ಲಿ ಬಾರಿಸಿದ ಗೆಲುವಿನ ಸಿಕ್ಸರ್​ನ​ ಸವಿ ನೆನಪಿಗಾಗಿ ಮುಂಬೈ ಕ್ರಿಕೆಟ್​ ಅಸೋಸಿಯೇಶನ್​ ಇದೇ ಎಪ್ರೀಲ್​ನಲ್ಲಿ ಈ ಸಿಕ್ಸರ್​ ಬಡಿದ ಸೀಟ್​ಗೆ ಧೋನಿ ಅವರ ಹೆಸರನ್ನು ಇಟ್ಟಿತ್ತು. ಇದೀಗ ಈ ಎರಡು ಸೀಟ್​ಗಳನ್ನು ನವೀಕೃತಗೊಳಿಸಿ ಹೊಸ ಲುಕ್​ ನೀಡಲಾಗಿದೆ.

2023ರ ವಿಶ್ವಕಪ್‌(icc world cup 2023)ನ ಮುಂಬೈ ಚರಣದ ಮೊದಲ ಪಂದ್ಯ ಇಂದು ವಾಂಖೆಡೆಯಲ್ಲಿ ನಡೆಯಲಿದೆ. ಇದೇ ಈ ವೇಳೆ 2 ಆಸನಗಳ ಟಿಕೆಟ್‌ಗಳನ್ನು ಹರಾಜು ಹಾಕಲಾಗುತ್ತದೆ. ಹರಾಜಿನಿಂದ ಬರುವ ಹಣವನ್ನು ಪ್ರತಿಭಾನ್ವಿತ ಕ್ರಿಕೆಟಿಗರ ತರಬೇತಿಗೆ ಬಳಸಲಾಗುತ್ತದೆ. ಈ ಸಲಹೆಯನ್ನು ಸ್ವತಃ ಧೋನಿಯೇ ನೀಡಿದ್ದಾರೆ ಎಂದು ಎಂಸಿಎ ತಿಳಿಸಿದೆ.

ವಿಶ್ವ ಕಪ್​ ವಿಜಯದ 12ನೇ ವಾರ್ಷಿಕೋತ್ಸವವನ್ನು ಏಪ್ರಿಲ್​ 2ರಂದು ಮುಂಬಯಿಯ ವಾಂಖೆಡೆ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿತ್ತು. ಇದೇ ವೇಳೆ ಮಹೇಂದ್ರ ಸಿಂಗ್​ ಧೋನಿಗೆ ಸನ್ಮಾನ ಮಾಡಿ ಬಳಿಕ ಚೆಂಡು ಬಿದ್ದ ಜಾಗದಲ್ಲಿನ ನಾಲ್ಕು ಆಸನಗಳಿಗೆ ಧೋನಿ ಅವರ ಹೆಸರನ್ನು ಇಡಲಾಗಿತ್ತು. ಇದೀಗ ಎಂಸಿಎ ಕ್ರಿಕೆಟ್ ವೆಬ್‌ಸೈಟ್‌ನಲ್ಲಿ, ‘2011 ವರ್ಲ್ಡ್‌ ಕಪ್ ಮೆಮೋರಿಯಲ್ ಸೀಟ್’ ಎನ್ನುವ ಸೆಕ್ಷನ್ ಅಡಿ ಇಲ್ಲಿನ ಎರಡು ಸೀಟ್ ಖರೀದಿಸಲು ಆಯ್ಕೆಯೊಂದನ್ನು ನೀಡಲಾಗಿದೆ.

ಹಾಸ್ಪಿಟಾಲಿಟಿ ವ್ಯವಸ್ಥೆ

ಈ ಕುರಿತಂತೆ ಮಾತನಾಡಿರುವ ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ “ಎರಡು ಸೀಟುಗಳಗೆ ಶಾಶ್ವತವಾಗಿ ಎಂ ಎಸ್ ಧೋನಿ ಹೆಸರಿಡಲಾಗಿದೆ. ವಿಶ್ವಕಪ್ ವೇಳೆ ಈ ಸೀಟ್‌ಗಳನ್ನು ಸುಂದರವಾಗಿ ಡಿಸೈನ್ ಮಾಡಲಿದ್ದೇವೆ. ಈ ಸೀಟ್‌ಗಳು ಒಂದು ರೀತಿ ಸೋಪಾ ರೀತಿಯಲ್ಲಿ ಇರಲಿದ್ದು, ಹಾಸ್ಪಿಟಾಲಿಟಿ ವ್ಯವಸ್ಥೆಯನ್ನು ಹೊಂದಿರಲಿದೆ” ಎಂದು ತಿಳಿಸಿದ್ದಾರೆ.

ಇದನ್ನೂ ಓದಿ MS Dhoni : ಭಾರತ- ಆಸ್ಟ್ರೇಲಿಯಾ ಪಂದ್ಯ ವೇಳೆ ಮಾಜಿ ನಾಯಕ ಧೋನಿಗೆ ಗೌರವ

ವಿಶ್ವಕಪ್​ ಟ್ರೋಫಿಯನ್ನು ಆಟಗಾರರು ಎತ್ತಿ ಹಿಡಿದಿರುವ ಫೋಟೊ ಈ ಸೀಟ್‌ನ ಹಿಂಬಾಗದಲ್ಲಿ ದೊಡ್ಡ ಗಾತ್ರದಲ್ಲಿ ಹಾಕಲಾಗಿದೆ. ಮುಂಬಾಗದಲ್ಲಿ 2 ವಿಶ್ವಕಪ್‌ ಟ್ರೋಫಿಗಳನ್ನು ಇರಿಸಲಾಗಿದೆ. ಈ ಸೀಟ್‌ನಲ್ಲಿ ಮೊದಲ ಬಾರಿ ಕುಳಿತು ಯಾರು ಪಂದ್ಯ ವೀಕ್ಷಿಸಲಿದ್ದಾರೆ ಎನ್ನುವುದು ಕುತೂಹಲವಾಗಿದೆ.

ಫೈನಲ್ ಪಂದ್ಯದಲ್ಲಿ ಭಾರತ ತಂಡದ ಗೆಲುವಿಗೆ 275 ರನ್​ಗಳು ಬೇಕಾಗಿದ್ದವು. ಅಂತೆಯೇ ಆರಂಭಿಕ ಬ್ಯಾಟರ್​ ಗೌತಮ್​ ಗಂಭೀರ್​ 97 ರನ್​ ಬಾರಿಸಿ ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಸೆಹ್ವಾಗ್​ ಸೊನ್ನೆಗೆ ಔಟಾಗಿದ್ದರೆ ಸಚಿನ್​​ ಕೊಡಗೆ 18 ರನ್​. ಆದರೆ, ಕೊನೇ ಹಂತದಲ್ಲಿ ಕ್ರೀಸ್​ಗೆ ತಳವೂರಿ ಆಡಿದ್ದ ನಾಯಕ ಧೋನಿ ಅಜೇಯ 91 ರನ್​ ಬಾರಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಅಂತೆಯೇ ಇನಿಂಗ್ಸ್​ನ ಕೊನೇ ಓವರ್​ನಲ್ಲಿ ಲಂಕಾ ಬೌಲರ್​ ನುವಾನ್​ ಕುಲಶೇಖರ ಅವರ ಎಸೆತಕ್ಕೆ ಸಿಕ್ಸರ್​ ಬಾರಿಸಿದ್ದರು. ಅದು ಭಾರತದ ವಿಜಯ ರನ್​ ಆಗಿತ್ತು. 

Exit mobile version