Site icon Vistara News

Meg Lanning: ಟಿ20 ಕ್ರಿಕೆಟ್​ನಲ್ಲಿ ದಾಖಲೆ ಬರೆದ ಲ್ಯಾನಿಂಗ್; ಆರ್​ಸಿಬಿ ಆಟಗಾರ್ತಿಯ ದಾಖಲೆ ಪತನ​

Meg Lanning

ಬೆಂಗಳೂರು: ಆಸ್ಟ್ರೇಲಿಯಾದ ಮಾಜಿ ಆಟಗಾರ್ತಿ, ಪ್ರಸ್ತುತ ಡೆಲ್ಲಿ ತಂಡದ ನಾಯಕಿಯಾಗಿರುವ ಮೆಗ್ ಲ್ಯಾನಿಂಗ್ (Meg Lanning) ಅವರು ಟಿ20 ಕ್ರಿಕೆಟ್​ನಲ್ಲಿ ನೂತನ ದಾಖಲೆಯೊಂದನ್ನು ಬರೆದಿದ್ದಾರೆ. ಟಿ20 ಮಾದರಿಯಲ್ಲಿ ಅತ್ಯಂತ ವೇಗವಾಗಿ 9000 ರನ್ ಗಳಿಸಿದ ಮಹಿಳಾ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಭಾನುವಾರ ನಡೆದ ಮಹಿಳಾ ಪ್ರೀಮಿಯರ್ ಲೀಗ್​ನ(WPL 2024) ಗುಜರಾತ್ ಜೈಂಟ್ಸ್ ಅರ್ಧಶತಕ ಬಾರಿಸುವ ಮೂಲಕ ಈ ವಿಶೇಷ ಸಾಧನೆ ತಮ್ಮದಾಗಿಸಿಕೊಂಡರು.

ಗುಜರಾತ್​ ವಿರುದ್ಧ ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಡಬ್ಲ್ಯುಪಿಎಲ್​ ಪಂದ್ಯದಲ್ಲಿ ಬಿರುಸಿನ ಬ್ಯಾಟಿಂಗ್​ ನಡೆಸಿದ ಮೆಗ್​ ಲ್ಯಾನಿಂಗ್​ 41 ಎಸೆತ ಎದುರಿಸಿ 6 ಬೌಂಡರಿ ಮತ್ತು 1 ಸಿಕ್ಸರ್​ ನೆರವಿನಿಂದ 55 ರನ್​ ಬಾರಿಸಿದರು. ಇದೇ ವೇಳೆ ಅವರು ಟಿ20ಯಲ್ಲಿ ಅತಿ ಕಡಿಮೆ ಇನಿಂಗ್ಸ್​ ಆಡಿ 9 ಸಾವಿರ ರನ್​ಗಳಿಸಿದ ಆಟಗಾರ್ತಿಯಾಗಿ ಎನಿಸಿಕೊಳ್ಳುವ ಮೂಲಕ ಆರ್​ಸಿಬಿಯ ಆಟಗಾರ್ತಿ, ನ್ಯೂಜಿಲ್ಯಾಂಡ್​ನ ಸೋಫಿ ಡಿವೈನ್​ ದಾಖಲೆಯನ್ನು ಮುರಿದರು.

ಸೋಫಿ ಡಿವೈನ್ ಅವರು 297 ಇನಿಂಗ್ಸ್​ಗಳಿಂದ 9 ಸಾವಿರ ರನ್​ ಬಾರಿಸಿ ಇದುವರೆಗೆ ಅಗ್ರಸ್ಥಾನದಲ್ಲಿದ್ದರು. ಆದರೆ, ಈಗ ಅಗ್ರಸ್ಥಾನ ಮೆಗ್​ ಲ್ಯಾನಿಂಗ್ ಪಾಲಾಗಿದೆ. ಲ್ಯಾನಿಂಗ್​ 289 ಇನಿಂಗ್ಸ್​ನಲ್ಲಿ ಈ ಮೈಲಿಗಲ್ಲು ತಲುಪಿದ್ದಾರೆ. ಈ ಸಾಧಕಿಯರ ಪಟ್ಟಿಯಲ್ಲಿ ಆಸ್ಟ್ರೇಲಿಯಾದವರೇ ಆದ ಬೆತ್​ ಮೂನಿಗೆ ಮೂರನೇ ಸ್ಥಾನ. ಮೂನಿ 299 ಇನಿಂಗ್ಸ್​ನಲ್ಲಿ ಈ ದಾಖಲೆ ಬರೆದಿದ್ದರು.

ಇದನ್ನೂ ಓದಿ T20 World Cup : ಟಿ20 ವಿಶ್ವ ಕಪ್​ನಲ್ಲಿ ಭಾರತಕ್ಕೆ ಎಷ್ಟು ಪಂದ್ಯಗಳಿವೆ?

ಅತಿ ವೇಗವಾಗಿ 9 ಸಾವಿರ ಟಿ20 ರನ್​ ಗಳಿಸಿದ ಆಟಗಾರ್ತಿಯರು


1. ಮೆಗ್​ ಲ್ಯಾನಿಂಗ್​-289 ಇನಿಂಗ್ಸ್​.

2. ಸೋಫಿ ಡಿವೈನ್​-297 ಇನಿಂಗ್ಸ್​.

3. ಬೆತ್​ ಮೂನಿ-299 ಇನಿಂಗ್ಸ್​.

4. ಸುಜಿ ಬೇಟ್ಸ್-323 ಇನಿಂಗ್ಸ್​.

5 ವಿಶ್ವಕಪ್‌ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕಿ ಹಾಗೂ ಸ್ಟಾರ್‌ ಆಟಗಾರ್ತಿಯಾಗಿದ್ದ ಮೆಗ್‌ ಲ್ಯಾನಿಂಗ್‌ ಅವರು ಕಳೆದ ವರ್ಷ ನವೆಂಬರ್​ನಲ್ಲಿ ದಿಢೀರ್ ಆಗಿ ಎಲ್ಲ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಘೋಷಿಸಿದ್ದರು. ತಮ್ಮ 13 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್​ ವೃತ್ತಿ ಬದುಕಿಗೆ ತೆರೆ ಎಳೆದಿದ್ದರು. 31 ವರ್ಷದ ಮೆಗ್​ ಲ್ಯಾನಿಂಗ್​ ಅವರು ಬಿಡುವಿಲ್ಲದಷ್ಟು ಕ್ರಿಕೆಟ್‌ ಪಂದ್ಯಗಳನ್ನು ಆಡುತ್ತ ಬಂದಿರುವ ಕಾರಣ ಮಾನಸಿಕವಾಗಿ ಕುಸಿದಿದ್ದೇನೆ ಎಂದು ಹೇಳುವ ಮೂಲಕ ನಿವೃತ್ತಿ ಹೇಳಿಒದ್ದರು. ಸದ್ಯ ಲೀಗ್​ ಕ್ರಿಕೆಟ್​ನಲ್ಲಿ ಮಾತ್ರ ಅವರು ತಮ್ಮ ಆಡ ಮುಂದುವರಿಸಿದ್ದಾರೆ. ಲ್ಯಾನಿಂಗ್​ ಆರು ಟೆಸ್ಟ್​ ಪಂದ್ಯಗಳು, 103 ಏಕದಿನ ಪಂದ್ಯಗಳು ಹಾಗೂ 132 ಟಿ20 ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ. 17 ಶತಕಗಳು ಸೇರಿದಂತೆ ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 8000 ರನ್​ ಬಾರಿಸಿದ್ದಾರೆ.

Exit mobile version