ಮುಂಬಯಿ: ಕ್ರಿಕೆಟ್ ಅಭಿಮಾನಿಗಳು ಕಾದು ಕುಳಿತಿರುವ ಬಹುನಿರೀಕ್ಷಿತ 17ನೇ ಆವೃತ್ತಿಯ ಐಪಿಎಲ್(IPL 2025) ಟೂರ್ನಿ ಆರಂಭಕ್ಕೆ ಇನ್ನು ಕೇವಲ 11 ದಿನಗಳು ಮಾತ್ರ ಬಾಕಿ ಉಳಿದಿದೆ. ಮಾರ್ಚ್ 22ರಿಂದ ಟೂರ್ನಿ ಆರಂಭಗೊಳ್ಳಲಿದೆ. ಕೂಟ ಆರಂಭಕ್ಕೂ ಮುನ್ನವೇ ಟೂರ್ನಿಯ ಆಡಳಿತ ಮಂಡಳಿಯ ಮುಖ್ಯಸ್ಥ ಅರುಣ್ ಧುಮಾಲ್(Arun Dhumal) ಮಹತ್ವದ ನಿರ್ಧಾರವೊಂದನ್ನು ಪ್ರಕಟಿಸಿದ್ದಾರೆ.
ಮುಂದಿನ ವರ್ಷದ ಐಪಿಎಲ್ 18ನೇ ಆವೃತ್ತಿಗೆ ಮುನ್ನ ಆಟಗಾರರ ಮೆಗಾ ಹರಾಜು(Mega auction) ಪ್ರಕ್ರಿಯೆ ನಡೆಯಲಿದೆ ಎಂದು ಅರುಣ್ ಧುಮಾಲ್ ಖಚಿತಪಡಿಸಿದ್ದಾರೆ. 2022ರಲ್ಲಿ ಆಟಗಾರರ ಮೆಗಾ ಹಲರಾಜು ನಡೆದಿತ್ತು. ಇದೀಗ ಮೂರು ನಂತರದಲ್ಲಿ ಮತ್ತೆ ಮೆಗಾ ಹರಾಜು ನಿಗದಿಯಾಗಿದೆ. ಪ್ರತಿ ತಂಡ ಮುಂಬರುವ 17ನೇ ಆವೃತ್ತಿಯ ನಂತರದಲ್ಲಿ 3-4 ಆಟಗಾರರನ್ನು ಮಾತ್ರ ರಿಟೇನ್ ಮಾಡಿಕೊಳ್ಳಲು ಅವಕಾಶ ಲಭಿಸುವ ನಿರೀಕ್ಷೆ ಇದೆ. ಹೀಗಾಗಿ ಮುಂದಿನ ಆವೃತ್ತಿಗೆ ಹಲವು ಆಟಗಾರರ ತಂಡಗಳು ಮತ್ತೆ ಬದಲಾಗುವ ಸಾಧ್ಯತೆ ಇದೆ.
IPL Chairman Arun Dhumal has confirmed that a mega auction will take place after the 2024 season. pic.twitter.com/t6N57vY8RZ
— CricTracker (@Cricketracker) March 9, 2024
ಡಬಲ್-ಹೆಡರ್ ಪಂದ್ಯಗಳ ಸಂಖ್ಯೆ ಹೆಚ್ಚಳ!
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ತೀಯ ಹಂತದ ವೇಳಾಪಟ್ಟಿ ಬಗ್ಗೆ ಮಹತ್ವ ಮಾಹಿತಿ ನೀಡಿರುವ ಧುಮಾಲ್, ಮೊದಲ ಹಂತದ ಪಂದ್ಯಾವಳಿಗಳು ನಡೆದ ಬಳಿಕ ಚುನಾವಣೆಗಾಗಿ ಪಂದ್ಯಗಳನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ. ಇಲ್ಲಿ ನಷ್ಟವಾದ ದಿನಗಳನ್ನು ಸರಿದೂಗಿಸಲು ನಾವು ಡಬಲ್-ಹೆಡರ್ ಪಂದ್ಯಗಳನ್ನು ಹೆಚ್ಚಿಸಬೇಕಾಗಬಹುದು ಎಂದು ಹೇಳಿದ್ದಾರೆ. ಹೀಗಾಗಿ ದ್ವಿತೀಯ ಹಂತದಲ್ಲಿ ಹೆಚ್ಚಿನ ಡಬಲ್-ಹೆಡರ್ ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಐಪಿಎಲ್ ಮುಕ್ತಾಯದ ಒಂದು ವಾರದ ಅಂತರದಲ್ಲಿ ಅಮೆರಿಕ ಮತ್ತು ವೆಸ್ಟ್ ಇಂಡೀಸ್ ಜಂಟಿ ಆತಿಥ್ಯದಲ್ಲಿ ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಗೊಳ್ಳಲಿದೆ.
ಇದನ್ನೂ ಓದಿ IPL 2024 : ಐಪಿಎಲ್ ಆಡುವ ಕುರಿತು ಹೊಸ ಅಪ್ಡೇಟ್ ನೀಡಿದ ಸೂರ್ಯಕುಮಾರ್ ಯಾದವ್ , ಏನದು?
ಮೊದಲ ಹಂತದ ವೇಳಾಪಟ್ಟಿ
ಮಾ.22: ರಾತ್ರಿ 7:30: ಆರ್ಸಿಬಿ vsಚೆನ್ನೈ ಸೂಪರ್ ಕಿಂಗ್ಸ್ -ಚೆನ್ನೈ
ಮಾ.23: ಮಧ್ಯಾಹ್ನ 3:30: ಪಂಜಾಬ್ vsಡೆಲ್ಲಿ – ಮೊಹಾಲಿ
ಮಾ.23: ರಾತ್ರಿ 7:30 : ಕೆಕೆಆರ್ vs ಸನ್ರೈಸರ್ಸ್, – ಕೋಲ್ಕತ್ತಾ
ಮಾ. 24 ಮಧ್ಯಾಹ್ನ 3:30: ರಾಜಸ್ಥಾನ್ vs ಲಕ್ನೋ, ಜೈಪುರ್
ಮಾ. 24 ರಾತ್ರಿ 7:30: ಗುಜರಾತ್ vs ಮುಂಬೈ ಇಂಡಿಯನ್ಸ್, ಅಹಮದಾಬಾದ್
ಮಾ.25 ರಾತ್ರಿ 7:30:ಆರ್ಸಿಬಿ vs ಪಂಜಾಬ್, ಬೆಂಗಳೂರು
ಮಾ.26: ರಾತ್ರಿ 7:30: ಸಿಎಸ್ ಕೆ vs ಗುಜರಾತ್ ,ಚೆನ್ನೈ
ಮಾ.27: ರಾತ್ರಿ 7:30: ಸನ್ರೈಸರ್ಸ್vs ಮುಂಬೈ , ಹೈದರಾಬಾದ್
ಮಾ.28: ರಾತ್ರಿ 7:30: ರಾಜಸ್ಥಾನ್ vs ಡೆಲ್ಲಿ, ಜೈಪುರ್
ಮಾ.29: ರಾತ್ರಿ 7:30 ಆರ್ಸಿಬಿ vs ಕೆಕೆಆರ್ ,ಬೆಂಗಳೂರು
ಮಾ.30: ರಾತ್ರಿ 7:30 ಲಕ್ನೋ vs ಪಂಜಾಬ್ ,ಲಕ್ನೋ
ಮಾ.31 ಮಧ್ಯಾಹ್ನ 3:30: ಗುಜರಾತ್ vs ಸನ್ರೈಸರ್ಸ್ ,ಅಹಮದಬಾದ್
ಮಾ.31 ರಾತ್ರಿ: 7:30 : ಡೆಲ್ಲಿ vs ಚೆನ್ನೈ -ವಿಶಾಖಪಟ್ಟಣಂ
ಎಪ್ರಿಲ್ 1 ಮುಂಬೈ vs ರಾಜಸ್ಥಾನ್ ಸಂಜೆ 7:30 ಮುಂಬೈ
ಎಪ್ರಿಲ್ 2 ಆರ್ಸಿಬಿ vs ಲಕ್ನೋ ಸಂಜೆ 7:30 ಬೆಂಗಳೂರು
ಎಪ್ರಿಲ್ 3 ಡೆಲ್ಲಿ vs ಕೆಕೆಆರ್ ಸಂಜೆ 7:30 ವೈಜಾಗ್
ಎಪ್ರಿಲ್ 4 ಗುಜರಾತ್ vs ಪಂಜಾಬ್ ಸಂಜೆ 7:30 ಅಹಮದಾಬಾದ್
ಎಪ್ರಿಲ್ 5 ಹೈದರಾಬಾದ್ vs ಚೆನ್ನೈ ಸಂಜೆ 7:30 ಹೈದರಾಬಾದ್
ಎಪ್ರಿಲ್ 6 ರಾಜಸ್ಥಾನ್ vs ಆರ್ಸಿಬಿ ಸಂಜೆ 7:30 ಜೈಪುರ
ಎಪ್ರಿಲ್ 7 ಮುಂಬೈ vs ಡೆಲ್ಲಿ ಮಧ್ಯಾಹ್ನ 3:30 ಮುಂಬೈ
ಎಪ್ರಿಲ್ 7 ಲಕ್ನೋ vs ಗುಜರಾತ್ ಸಂಜೆ 7:30 ಲಕ್ನೋ