Site icon Vistara News

Aaron Finch: ಕ್ರಿಕೆಟ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ ಹಾರ್ಡ್​ ಹಿಟ್ಟರ್​ ಆರೋನ್ ಫಿಂಚ್

Aaron Finch

ಸಿಡ್ನಿ: ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿರುವ ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಆರೋನ್ ಫಿಂಚ್(Aaron Finch) ಪ್ರಸಕ್ತ ನಡೆಯುತ್ತಿರುವ ಬಿಗ್​ ಬ್ಯಾಷ್ ಲೀಗ್‌(Big Bash League) ಬಳಿಕ ಎಲ್ಲ ಮಾದರಿಯ ಕ್ರಿಕೆಟ್​ನಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಅವರು ತಮ್ಮ ಕ್ರಿಕೆಟ್​ ವೃತ್ತಿ ಬದುಕಿಗ ಸಂಪೂರ್ಣವಾಗಿ ತೆರೆ ಎಳೆಯಲು ನಿರ್ಧರಿಸಿದ್ದಾರೆ.

ಆರೋನ್ ಫಿಂಚ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತಿಯಾದ ಬಳಿಕ ಕ್ರಿಕೆಟ್​ ಕಾಮೆಂಟರಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಜತೆಗೆ ಲೀಗ್​ ಕ್ರಿಕೆಟ್​ನಲ್ಲಿ ಆಡುತ್ತಿದ್ದರು. ಇದೀಗ ಎಲ್ಲ ಮಾದರಿಯ ಕ್ರಿಕೆಟ್​ಗೂ ಗುಡ್​ಬೈ ಹೇಳುವುದಾಗಿ ಗುರುವಾರ ಘೋಷಿಸಿದ್ದಾರೆ. ಬಿಗ್​ ಬ್ಯಾಷ್​ ಲೀಗ್​ ಅವರಿಗೆ ಕೊನೆಯ ಕ್ರಿಕೆಟ್​ ಟೂರ್ನಿಯಾಗಿದೆ.

ಫಿಂಚ್ ಫೆಬ್ರವರಿ 2023ರಲ್ಲಿ 12 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ನಿವೃತ್ತಿ ಘೋಷಿಸಿದ್ದರು. ಫಿಂಚ್ ತಮ್ಮ ವೃತ್ತಿಜೀವನದಲ್ಲಿ 146 ಏಕದಿನ, 103 ಟಿ20, 5 ಟೆಸ್ಟ್​ ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. 76 ಪಂದ್ಯಗಳಲ್ಲಿ ಆಸ್ಟ್ರೇಲಿಯಾ ತಂಡವನ್ನು ಮುನ್ನಡೆಸಿದ್ದಾರೆ.

“ರೆನೆಗೇಡ್ಸ್ ಜತೆಗಿನ ಪ್ರಯಾಣದ ಪ್ರತಿಯೊಂದು ಕ್ಷಣವನ್ನು ಆನಂದಿಸುತ್ತೇನೆ. ಬಿಬಿಎಲ್​ ಆರಂಭಗೊಂಡ ದಿನದಿಂದಲೂ ರೆನೆಗೇಡ್ಸ್ ತಂಡದ ಜತೆಗೆ ಇದದ್ದು ಸಂತೋಷವಾಗಿದೆ” ಈ ಆವೃತ್ತಿಯಲ್ಲಿ ತಂಡದ ಪರ ಕೊನೆಯದಾಗಿ ಆಡಲಿದ್ದೇನೆ. ಬಳಿಕ ಎಲ್ಲ ಮಾದರಿಯ ಕ್ರಿಕೆಟ್​ನಿಂದ ದೂರ ಉಳಿಯಲಿದ್ದೇನೆ” ಎಂದು ಹೇಳುವ ಮೂಲಕ ಫಿಂಚ್​ ತಮ್ಮ ವಿದಾಯ ಘೋಷಿಸಿದ್ದಾರೆ.

ಇದನ್ನೂ ಓದಿ Hardik Pandya: ಫಿಟ್​ನೆಸ್​​​ ವಿಡಿಯೊ ಹಂಚಿಕೊಂಡು ಎಚ್ಚರಿಕೆ ನೀಡಿದ​ ಹಾರ್ದಿಕ್​ ಪಾಂಡ್ಯ

ಬಿಗ್​ ಬ್ಯಾಷ್​ನಲ್ಲಿ ಫಿಂಚ್​ ಸಾಧನೆ

ಫಿಂಚ್​ ಅವರು ರೆನೆಗೇಡ್ಸ್ ಪರ ಒಟ್ಟು 106 ಪಂದ್ಯಗಳನ್ನಾಡಿದ್ದಾರೆ. 2 ಶತಕ ಹಾಗೂ 26 ಅರ್ಧಶತಕಗಳೊಂದಿಗೆ ಒಟ್ಟು 3,311 ರನ್ ಕಲೆಹಾಕಿದ್ದಾರೆ. ಇದಲ್ಲದೆ ಮೆಲ್ಬರ್ನ್​ ರೆನೆಗೇಡ್ಸ್ ತಂಡದ ಪರ ಅತ್ಯಧಿಕ ರನ್ ಕಲೆಹಾಕಿದ ದಾಖಲೆಯನ್ನು ಹೊಂದಿದ್ದಾರೆ. ಜತೆಗೆ ಬಿಗ್ ಬ್ಯಾಷ್ ಲೀಗ್ ಇತಿಹಾಸದಲ್ಲೇ ಅತ್ಯಧಿಕ ರನ್ ಕಲೆಹಾಕಿದ 2ನೇ ಬ್ಯಾಟರ್ ಎಂಬ ದಾಖಲೆ ಕೂಡ ಫಿಂಚ್ ಹೆಸರಿನಲ್ಲಿದೆ. 2018-19 ರ ಸಾಲಿನಲ್ಲಿ ಫಿಂಚ್ ನಾಯಕತ್ವದಲ್ಲಿ ರೆನೆಗೇಡ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತ್ತು.

Exit mobile version