ಮುಂಬಯಿ : ಭಾರತ ತಂಡದ ಯುವ ಮಹಿಳಾ ಬ್ಯಾಟರ್ ಜೆಮಿಮಾ ರೋಡ್ರಿಗಸ್ ಮಹಿಳೆಯರ ಬಿಗ್ ಬ್ಯಾಶ್ ಲೀಗ್ (BIG BASH LEAGUE) ಎಂಟನೇ ಆವೃತ್ತಿಯಲ್ಲಿ ಆಡಲಿದ್ದು, ಮೆಲ್ಬೋರ್ನ್ ಸ್ಟಾರ್ಸ್ ಫ್ರಾಂಚೈಸಿ ಜತೆ ಒಪ್ಪಂದ ಮಾಡಿಕೊಂಡಿದ್ದಾರೆ. ಅಕ್ಟೋಬರ್ ೧ರಿಂದ ೧೬ರವರೆಗೆ ನಡೆಯಲಿರುವ ಮಹಿಳೆಯರ ಏಷ್ಯಾ ಕಪ್ ಬಳಿಕ ಅವರು ಆಸ್ಟ್ರೇಲಿಯಾಗೆ ತೆರಳಲಿದ್ದಾರೆ.
ಮಂಗಳವಾರ ಮಹಿಳೆಯರ ಬಿಗ್‌ಬ್ಯಾಶ್ ಲೀಗ್‌ನ ಮೆಲ್ಬೋರ್ನ್ ಸ್ಟಾರ್ಸ್ ಫ್ರಾಂಚೈಸಿ ಈ ಬಗ್ಗೆ ಪ್ರಕಟಣೆ ಹೊರಡಿಸಿದೆ. ಈ ಮೂಲಕ ತಂಡ ಸೇರಿದ ಭಾರತದ ಮೊದಲ ಮಹಿಳಾ ಕ್ರಿಕೆಟರ್ ಎನಿಸಿಕೊಂಡಿದ್ದಾರೆ. ಅವರು ಅಕ್ಟೋಬರ್ ೧೩ರಂದು ತಂಡವನ್ನು ಸೇರಿಕೊಳ್ಳಲಿದ್ದಾರೆ.
ಕಳೆದ ವರ್ಷದ ಮಹಿಳೆಯರ ಬಿಗ್‌ಬ್ಯಾಷ್ ಲೀಗ್‌ನಲ್ಲಿ ಅವರು ಮೆಲ್ಬೋರ್ನ್ ರೆನೆಗೇಡ್ ತಂಡದ ಪರವಾಗಿ ಅಡಿದ್ದರು. ೧೩ ಪಂದ್ಯಗಳಲ್ಲಿ ೧೧೬ ಸ್ಟ್ರೈಕ್‌ರೇಟ್‌ನಲ್ಲಿ ೩೩೩ ರನ್ ಬಾರಿಸಿದ್ದರು.
ಮೆಲ್ಬೋರ್ನ್ ಸ್ಟಾರ್ಸ್ ತಂಡ
ಮೆಗ್ ಲ್ಯಾನಿಂಗ್, ಲೂಸಿ ಕ್ರಿಪ್ಸ್, ಸೋಫಿ ಡೆ, ನಿಕೋಲೆ ಫಾಲ್ಟಮ್, ಟೆಸ್ ಫ್ಲಿಂಟಾಫ್, ಕಿಮ್ ಗಾರ್ತ್, ರೈಸ್ ಮೆಕ್‌ಕೆನ್ನಾ, ಶಾಶ್ ಮೊಲೊನಿ, ಸೋಫಿ ರೀಡ್, ಜೆಮಿಮಾ ರೋಡ್ರಿಗಸ್, ಅನ್ನಾಬೆಲ್ ಸದರ್ಲೆಂಡ್.
ಇದನ್ನೂ ಓದಿ | Suresh Raina | ಐಪಿಎಲ್‌ಗೂ ಗುಡ್ ಬೈ ಹೇಳಿದ ‘ಒಡಿಐ ಸ್ಪೆಷಲಿಸ್ಟ್’ ಸುರೇಶ್ ರೈನಾ