Site icon Vistara News

Hockey World Cup | ಗುಂಪು ಹಂತದಲ್ಲಿ ಭಾರತಕ್ಕೆ ಇಂಗ್ಲೆಂಡ್‌, ವೇಲ್ಸ್‌, ಸ್ಪೇನ್‌ ತಂಡಗಳು ಎದುರಾಳಿ

hockey world cup

ಭುವನೇಶ್ವರ್‌: ಮುಂಬರುವ ಎಫ್‌ಐಎಚ್‌ ಹಾಕಿ ವಿಶ್ವ ಕಪ್‌ (Hockey World Cup) ಟೂರ್ನಿಯ ತಂಡಗಳ ಡ್ರಾ ಗುರುವಾರ ಪ್ರಕಟಗೊಂಡಿದ್ದು, ಭಾರತ ತಂಡ ಡಿ ಗುಂಪಿನಲ್ಲಿದ್ದು, ಇಂಗ್ಲೆಂಡ್‌, ವೇಲ್ಸ್‌ ಹಾಗೂ ಸ್ಪೇನ್‌ ಜತೆ ಸೆಣಸಾಡಬೇಕಾಗಿದೆ. ವಿಶ್ವ Rank ಪಟ್ಟಿಯಲ್ಲಿ ಐದನೇ ಸ್ಥಾನ ಪಡೆದಿರುವ ಭಾರತ ತಂಡ ಡಿ ಗುಂಪಿನ ಬಲಿಷ್ಠ ತಂಡವಾಗಿದೆ. ಎಫ್‌ಐಎಚ್‌ ಹಾಕಿ ವಿಶ್ವ ಕಪ್‌ ೨೦೨೩ರ ಜನವರಿಯಲ್ಲಿ ಒಡಿಶಾದಲ್ಲಿ ಆಯೋಜನೆಗೊಂಡಿದೆ.

ಗುಂಪು ಹಂತದಲ್ಲಿ ಅಗ್ರ ಸ್ಥಾನ ಪಡೆದ ತಂಡಗಳು ನೇರವಾಗಿ ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶ ಪಡೆದರೆ, ಎರಡು ಹಾಗೂ ಮೂರನೇ ಸ್ಥಾನ ಪಡೆದ ತಂಡಗಳು ಕ್ರಾಸ್‌ ಓವರ್‌ ಪಂದ್ಯಗಳಲ್ಲಿ ಪಾಲ್ಗೊಂಡು ಎರಡನೇ ತಂಡವಾಗಿ ಕ್ವಾರ್ಟರ್‌ಫೈನಲ್ಸ್‌ಗೆ ಪ್ರವೇಶ ಪಡೆಯಬೇಕಾಗಿದೆ.

ಯಾವ್ಯಾವ ತಂಡಗಳಿವೆ?

ಕಾಮನ್ವೆಲ್ತ್‌ ಗೇಮ್ಸ್‌ ಚಾಂಪಿಯನ್‌ ಅಸ್ಟ್ರೇಲಿಯಾ, ಅರ್ಜೆಂಟಿನಾ, ಫ್ರಾನ್ಸ್‌, ಚಿಲಿ ತಂಡ ‘ಎ’ ಗುಂಪಿನಲ್ಲಿದ್ದರೆ, ಬಿ ಗುಂಪಿನಲ್ಲಿ ಹಾಲಿ ಚಾಂಪಿಯನ್‌ ಬೆಲ್ಜಿಯಮ್‌, ದಕ್ಷಿಣ ಕೊರಿಯಾ, ಜರ್ಮನಿ ಮತ್ತು ಜಪಾನ್‌ ತಂಡಗಳಿವೆ. ಸಿ ಗುಂಪಿನಲ್ಲಿ ನ್ಯೂಜಿಲೆಂಡ್‌, ಮಲೇಷ್ಯಾ, ಚಿಲಿ ಹಾಗೂ ನೆದರ್ಲೆಂಡ್ಸ್‌ ತಂಡಗಳಿವೆ.

ಹಿಂದಿನ ಆವೃತ್ತಿಯ ವಿಶ್ವ ಕಪ್‌ಗೆ ಭುವನೇಶ್ವರದ ಕಳಿಂಗ ಸ್ಟೇಡಿಯಮ್‌ ಅತಿಥ್ಯ ವಹಿಸಿತ್ತು. ಅಂತೆಯೇ ಅಲ್ಲಿನ ಸೌಲಭ್ಯಗಳಿಗಾಗಿ ಮೆಚ್ಚುಗೆ ಪಡೆದುಕೊಂಡಿತ್ತು. ಈ ಬಾರಿ ರೂರ್‌ಕೆಲಾದಲ್ಲಿರುವ ಬಿರ್ಸಾ ಮುಂಡಾ ಸ್ಟೇಡಿಯಮ್‌ನಲ್ಲೂ ಪಂದ್ಯಗಳು ನಡೆಯಲಿವೆ.

ಯಾವಾಗ ವಿಶ್ವ ಕಪ್?

೨೦೨೩ರ ಜನವರಿ ೧೩ರಿಂದ ೨೯ರವರೆಗೆ ವಿಶ್ವ ಕಪ್‌ ನಡೆಯಲಿದೆ. ಭಾರತಕ್ಕೆ ಎಫ್‌ಐಎಚ್‌ ಹಾಕಿ ವಿಶ್ವ ಕಪ್‌ ಆಯೋಜನೆಗೆ ಸತತ ಎರಡನೇ ಬಾರಿ ಅವಕಾಶ ಲಭಿಸಿದ್ದು, ಕಳೆದ ಬಾರಿಯೂ ಒಡಿಶಾದಲ್ಲಿಯೇ ನಡೆದಿತ್ತು.

Exit mobile version