ಬರ್ಮಿಂಗ್ಹಮ್: ಭಾರತ ಪುರುಷರ ಟೇಬಲ್ ಟೆನಿಸ್ ತಂಡ ಇಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ನ (CWG- 2022) ಸೆಮಿ ಫೈನಲ್ಸ್ ಹಂತಕ್ಕೇರಿದೆ. ಭಾನುವಾರ ನಡೆದ ಕ್ವಾರ್ಟರ್ ಫೈನಲ್ಸ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ೩-೦ ಅಂತರದ ಸುಲಭ ಜಯ ದಾಖಲಿಸಿದ ಭಾರತ ಉಪಾಂತ್ಯಕ್ಕೆ ಪ್ರವೇಶ ಪಡೆದುಕೊಂಡಿತು.
ಡಬಲ್ಸ್ನಲ್ಲಿ ಹರ್ಮೀತ್ ದೇಸಾಯಿ ಹಾಗೂ ಸತ್ಯನ್ ಗುಣಶೇಖರನ್ ೧೧-೮, ೧೧-೬, ೧೧-೨ ಸೆಟ್ಗಳಿಂದ ರಮ್ಹಿಮ್ಲಾನ್ ಹಾಗೂ ಮೊಹುತಸಿನ್ ವಿರುದ್ಧ ವಿರುದ್ಧ ಗೆಲವು ಸಾಧಿಸಿದರು. ಸಿಂಗಲ್ಸ್ನಲ್ಲಿ ಅಚಂತಾ ಶರತ್ ಕಮಾಲ್ ಅವರು ಎಂಡಿ ರಫಿಕ್ ಶಬ್ಬಿರ್ ವಿರುದ್ಧ ೧೧-೪, ೧೧-೭, ಹಾಗೂ ೧೧-೨ ಸೆಟ್ಗಳಿಂದ ಜಯ ಸಾಧಿಸಿದರು.
ಮೂರನೇ ಪಂದ್ಯದಲ್ಲಿ ರಿದೋಯ್ ವಿರುದ್ಧ ಸತಿಯನ್ ೧೧-೨, ೧೧-೩, ೧೧-೫ ಅಂಕಗಳಿಂದ ಜಯ ಸಾಧಿಸುವ ಮೂಲಕ ಭಾರತ ಬೆವರು ಹರಿಸದೇ ಗೆಲುವು ಸಾಧಿಸಿತು.