ಅಹಮದಾಬಾದ್ : ಭಾರತ ತಂಡದ ಮಾಜಿ ನಾಯಕಿ ಹಾಗೂ ಹಿರಿಯ ಆಟಗಾರ್ತಿ ಮಿಥಾಲಿ ರಾಜ್ ಉದ್ಘಾಟನಾ ಆವೃತ್ತಿಯ ಮಹಿಳೆಯರ ಪ್ರೀಮಿಯರ್ ಲೀಗ್ನಲ್ಲಿ (WPL 2023) ಗೌತಮ್ ಅದಾನಿ ಮಾಲೀಕತ್ವದ ಗುಜರಾತ್ ಜಯಂಟ್ಸ್ ತಂಡದ ಮಾರ್ಗದರ್ಶಕರಾಗಿದ್ದಾರೆ. ಮಾರ್ಚ್ 4ರಂದು ಟೂರ್ನಿಯ ಮೊದಲ ಪಂದ್ಯ ನಡೆಯಲಿದ್ದು ಆರು ಫ್ರಾಂಚೈಸಿಗಳ ಕ್ಯಾಂಪ್ನಲ್ಲಿ ಚಟುವಟಿಕೆಗಳು ಚುರುಕುಗೊಂಡಿವೆ. ಅಂತೆಯ ಗುಜರಾತ್ ಜಯಂಟ್ಸ್ ತಂಡವೂ ಅಭ್ಯಾಸ ಆರಂಭಿಸಿದೆ. ಏತನ್ಮಧ್ಯೆ ಆ ತಂಡ ಮೆಂಟರ್ ಮಿಥಾಲಿ ರಾಜ್, ಶ್ರೀಲಂಕಾದ ಹಾಡುಗಾರ್ತಿ ಹಾಡಿದ್ದ ಮಣಿಕೆ ಮಗೆ ಹಿತೆ ಹಾಡಿಗೆ ಡಾನ್ ಮಾಡಿದ್ದಾರೆ. ಈ ವಿಡಿಯೊವನ್ನು ಗುಜರಾತ್ ಜಯಂಟ್ಸ್ ತಂಡ ಟ್ವಿಟರ್ನಲ್ಲಿ ರಿಲೀಸ್ ಮಾಡಿದೆ.
ಮಿಥಾಲಿ ಜತೆ ವೇಗದ ಬೌಲರ್ ಹರ್ಲೆ ಗಾಲಾ ಹಾಗೂ ಶಬ್ನಂ ಶಕೀಲ್ ಕೂಡ ಹೆಜ್ಜೆ ಹಾಕಿದ್ದಾರೆ. ಇದೀಗ ಮಹಿಳೆಯರ ಪ್ರೀಮಿಯರ್ ಲೀಗ್ ಆರಂಭಗೊಂಡಿದೆ ಎಂಬುದಾಗಿ ಗುಜರಾತ್ ಜಯಂಟ್ಸ್ ತಂಡ ಟ್ವೀಟ್ನಲ್ಲ ಬರೆದುಕೊಂಡಿದೆ.
ಮಿಥಾಲಿ ಡಾನ್ಸ್ ಮಾಡಿದ ವಿಡಿಯೊ ಇಲ್ಲಿದೆ
ಈ ವಿಡಿಯೊಗೆ ಸಾಕಷ್ಟು ಅಭಿಮಾನಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಇನ್ನೂ ಕೆಲವರು ಮಿಥಾಲಿ ಉದ್ಘಾಟನಾ ಆವೃತ್ತಿಯ ಡಬ್ಲ್ಯುಪಿಎಲ್ನಲ್ಲಿ ಆಡದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : WPL 2023 : ವಿಶ್ವ ವಿಜೇತ ಆಸ್ಟ್ರೇಲಿಯಾ ತಂಡದ ನಾಯಕಿ ಡೆಲ್ಲಿ ಕ್ಯಾಪಿಟಲ್ಸ್ನ ಕ್ಯಾಪ್ಟನ್
ಬೆತ್ಮೂನಿ ನೇತೃತ್ವದ ಗುಜರಾತ್ ಜಯಂಟ್ಸ್ ಹಾಗೂ ಹರ್ಮನ್ಪ್ರೀತ್ ಕೌರ್ ಮುಂದಾಳತ್ವದ ಮುಂಬಯಿ ಇಂಡಿಯನ್ಸ್ ನಡುವೆ ಶನಿವಾರ ಡಿವೈ ಪಾಟೀಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಪಂದ್ಯ ನಡೆಯಿದೆ.
ಗುಜರಾತ್ ಜಯಂಟ್ಸ್ ತಂಡ ಇಲ್ಲಿದೆ
ಬೆತ್ ಮೂನಿ (ನಾಯಕ), ಸ್ನೇಹ ರಾಣಾ (ಉಪನಾಯಕ), ಆಶ್ಲೇ ಗಾರ್ಡ್ನರ್, ಸೋಫಿಯಾ ಡಂಕ್ಲಿ, ಅನ್ನಾಬೆಲ್ ಸದರ್ಲ್ಯಾಂಡ್, ಹರ್ಲೀನ್ ಡಿಯೋಲ್, ಡಿಯಾಂಡ್ರಾ ಡಾಟಿನ್, ಎಸ್ ಮೇಘನಾ, ಜಾರ್ಜಿಯಾ ವೇರ್ಹ್ಯಾಮ್, ಮಾನ್ಸಿ ಜೋಶಿ, ದಯಾಲನ್ ಹೇಮಲತಾ, ಮೋನಿಕಾ ಪಟೇಲ್, ತನುಜಾ ಕನ್ವರ್, ಸುಷ್ಮಾ ವರ್ಮಾ ಹರ್ಲಿ ಗಾಲಾ, ಅಶ್ವನಿ ಕುಮಾರಿ, ಪರುಣಿಕಾ ಸಿಸೋಡಿಯಾ, ಶಬ್ಮಾನ್ ಶಕಿಲ್.