Site icon Vistara News

Antonio Carbajal: ಮೆಕ್ಸಿಕೋ ಫುಟ್ಬಾಲ್ ದಂತಕಥೆ ಆಂಟೋನಿಯೊ ಕಾರ್ಬಜಾಲ್ ನಿಧನ

Antonio Carbajal

ಟೊಲುಕಾ (ಮೆಕ್ಸಿಕೊ): ಮೆಕ್ಸಿಕೋದ ಫುಟ್ಬಾಲ್​ ದಂತಕಥೆ, ಐದು ಫಿಫಾ ವಿಶ್ವ ಕಪ್​ ಆಡಿದ ಆಂಟೋನಿಯೊ ಕಾರ್ಬಜಾಲ್ ಅವರು ಬುಧವಾರ ರಾತ್ರಿ ನಿಧನ ಹೊಂದಿದ್ದಾರೆ. ಅವರಿಗೆ 93 ವಯಸ್ಸಾಗಿತ್ತು. ಆಂಟೋನಿಯೊ ಅವರು ನಿಧನಹೊಂದಿದ ವಿಚಾರವನ್ನು ಮೆಕ್ಸಿಕನ್ ಫುಟ್‌ಬಾಲ್ ಫೆಡರೇಶನ್ ಖಚಿತಪಡಿಸಿದೆ.

ಆಂಟೋನಿಯೊ ಅವರ ನಿಧನಕ್ಕೆ ಫಿಫಾ ಮತ್ತು ಅನೇಕ ಫುಟ್ಬಾಲ್​ ಫೆಡರೇಶನ್ ಸೇರಿ ಮಾಜಿ, ಹಾಲಿ ಫುಟ್ಬಾಲ್​ ಆಟಗಾರರು ಕಂಬನಿ ಮಿಡಿದಿದ್ದಾರೆ. “ಐದು ಫಿಫಾ ವಿಶ್ವಕಪ್‌ಗಳಲ್ಲಿ ಆಡಿದ ಮೊದಲ ಆಟಗಾರ ಆಂಟೋನಿಯೊ ಕಾರ್ಬಜಾಲ್ ಅವರ ನಿಧನದ ಬಗ್ಗೆ ನಾವು ಬಹಳ ದುಃಖವಿದೆ” ಎಂದು ಫಿಫಾ ಅಧ್ಯಕ್ಷ ಜಿಯಾನಿ ಇನ್ಫಾಂಟಿನೊ ಅವರು ಸಂತಾಪ ಸಂದೇಶದಲ್ಲಿ ತಿಳಿಸಿದ್ದಾರೆ. 1950 ಮತ್ತು 1966ರ ಕಾಲಘಟ್ಟದಲ್ಲಿ ಫಿಫಾದ ವಿಶ್ವಕಪ್‌ನ ಐದು ಆವೃತ್ತಿಗಳಲ್ಲಿ ಮಾಜಿ ಮೆಕ್ಸಿಕನ್ ತಂಡದ ಗೋಲ್‌ಕೀಪರ್ ಆಗಿದ್ದರು.

1950ರ ಫಿಫಾ ವಿಶ್ವ ಕಪ್​ನ ಬ್ರೆಜಿಲ್‌ನ ಆರಂಭಿಕ ಪಂದ್ಯದಲ್ಲಿ ಆಡುವ ಮೂಲಕ ಆಂಟೋನಿಯೊ ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಪದಾರ್ಪಣೆ ಮಾಡಿದ್ದರು. ಅವರು 11 ಫಿಫಾ ವಿಶ್ವಕಪ್ ಪಂದ್ಯಗಳನ್ನು ಆಡಿದ ಹಿರಿಮೆಯೂ ಇವರದ್ದಾಗಿದೆ. 18 ವರ್ಷಗಳ ಫುಟ್ಬಾಲ್​ ವೃತ್ತಿ ಜೀವನದಲ್ಲಿ ಮೆಕ್ಸಿಕನ್ ತಂಡದ ಕ್ಲಬ್ ಲಿಯಾನ್‌ ಪರ ಹಲವು ಪಂದ್ಯಗಳನ್ನು ಆಡಿದ್ದರು.

ಇದನ್ನೂ ಓದಿ Football Viral Video| ಫುಟ್ಬಾಲ್​ ಮೈದಾನದಲ್ಲೇ ಆಟಗಾರರ ಫೈಟಿಂಗ್​; ವಿಡಿಯೊ ವೈರಲ್​

ಆಂಟೋನಿಯೊ ನಿಧನಕ್ಕೆ ಲಿಯಾನ್ ಕ್ಲಬ್ ಸಂತಾಪ ಸೂಚಿಸಿದ್ದು, “ದಂತಕಥೆ ಆಂಟೋನಿಯೊ ಅವರ ಆಟವನ್ನು ನಾವು ಮರೆಯಲು ಸಾಧ್ಯವಿಲ್ಲ. ಅವರು ಎಂದಿಗೂ ನಮ್ಮಿಂದ ದೂರ ಆಗುವುದಿಲ್ಲ. ಅವರು ಫುಟ್ಬಾಲ್​ಗೆ ನೀಡಿದ ಕೊಡುಗೆ ಅಪಾರ. ನಮ್ಮ ತಂಡದಲ್ಲಿ ಅವರು ಆಡಿರುವುದು ನಮಗೆ ಸಂದ ದೊಡ್ಡ ಗೌರವ” ಎಂದು ಲಿಯಾನ್ ಕ್ಲಬ್ ಹೇಳಿದೆ.

Exit mobile version