ಬೆಂಗಳೂರು : ಐಪಿಎಲ್ ೧೬ನೇ ಆವೃತ್ತಿಗಾಗಿ ಬಿಸಿಸಿಗೆ ನಿಧಾನವಾಗಿ ಕೆಲಸಗಳನ್ನು ಆರಂಭಿಸಿದೆ. ಪ್ರಮುಖವಾಗಿ ಮಿನಿ ಹರಾಜು ಪ್ರಕ್ರಿಯೆ ನಡೆಸಲು ಸಿದ್ಧತೆಗಳನ್ನು ನಡೆಸಿಕೊಳ್ಳುತ್ತಿದೆ. ಡಿಸೆಂಬರ್‌ನಲ್ಲಿ ಆಟಗಾರರ ಆಯ್ಕೆ ಪ್ರಕ್ರಿಯೆ(IPL Auction) ನಡೆಯಲಿದ್ದು, ಈ ಕಾರ್ಯಕ್ರಮವನ್ನು ಎಲ್ಲಿ ನಡೆಸುವುದು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿದೆ. ಏತನ್ಮಧ್ಯೆ, ಈ ಬಾರಿಯ ಹರಾಜು ಪ್ರಕ್ರಿಯೆಯನ್ನು ಟರ್ಕಿಯ ರಾಜಧಾನಿ ಟರ್ಕಿಯಲ್ಲಿ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಬಿಸಿಸಿಐ ಸದ್ಯ ಐದು ನಗರಗಳ ಹೆಸರನ್ನು ಪಟ್ಟಿ ಮಾಡಿದ್ದು, ಅದರಲ್ಲಿ ಒಂದು ನಗರದಲ್ಲಿ ಮಿನಿ ಹರಾಜು ನಡೆಯಲಿದೆ. ಇದುವರೆಗೆ ಮಿನಿ ಹರಾಜು ಪ್ರಕ್ರಿಯೆಗಳು ಬೆಂಗಳೂರಿನಲ್ಲಿಯೇ ನಡೆದಿದ್ದವು. ಅದರಂತೆ ಈ ಬಾರಿಯೂ ಬೆಂಗಳೂರು ಮೊದಲ ಆಯ್ಕೆಯಾಗಿದೆ. ಆದರೆ, ವಿದೇಶದಲ್ಲಿ ಹರಾಜು ಪ್ರಕ್ರಿಯೆ ನಡೆಸಲು ಉದ್ದೇಶಿಸಿರುವ ಬಿಸಿಸಿಐ ಟರ್ಕಿಯ ರಾಜಧಾನಿ ಇಸ್ತಾಂಬುಲ್‌ನಲ್ಲೂ ನಡೆಸಲು ಯೋಜನೆ ರೂಪಿಸಿದೆ ಎನ್ನಲಾಗಿದೆ. ನವ ದೆಹಲಿ, ಮುಂಬಯಿ ಹಾಗೂ ಹೈದರಾಬಾದ್ ಹರಾಜು ನಡೆಯಲಿರುವ ಇತರ ನಗರಗಳು.
ಐಪಿಎಲ್ ಅಧ್ಯಕ್ಷ ಅರುಣ್ ಸಿಂಗ್ ಧುಮಾಲ್ ನೇತೃತ್ವದ ಕಾರ್ಯಕಾರಿ ಸಮಿತಿ ಹರಾಜು ಸೇರಿದಂತೆ ಇತರ ಎಲ್ಲ ಪ್ರಕ್ರಿಯೆಗಳನ್ನು ನಿರ್ಧರಿಸಲಿದೆ. ಅದಕ್ಕೂ ಮೊದಲು ಹಲವಾರು ಪ್ರಸ್ತಾಪಗಳನ್ನು ಪಡೆದುಕೊಳ್ಳಲಿದೆ.
“ಮಿನಿ ಹರಾಜು ಪ್ರಕ್ರಿಯೆ ಎಲ್ಲಿ ನಡೆಯುತ್ತದೆ ಎಂಬುದರ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಇಸ್ತಾಂಬುಲ್ ನಗರವನ್ನೂ ಪರಿಗಣಿಸಲಾಗುತ್ತಿದೆ. ಕೋವಿಡ್-೧೯ ನಿಯಮಗಳಲ್ಲಿ ಸಡಿಲಗೊಂಡಿರುವ ಕಾರಣ ಆ ಬಗ್ಗೆ ಚಿಂತನೆ ನಡೆಸಲಾಗಿದೆ. ಹಂತಿಮ ನಿರ್ಧಾರವನ್ನು ನಮ್ಮ ತಂಡದೊಂದಿಗೆ ಸಮಾಲೋಚನೆ ನಡೆಸಿ ತೆಗೆದುಕೊಳ್ಳಲಾಗುವುದು,” ಎಂಬುದಾಗಿ ಬಿಸಿಸಿಐ ಮೂಲಗಳು ತಿಳಿಸಿವೆ.
ಇದನ್ನೂ ಓದಿ | IPL 2023 | ಐಪಿಎಲ್ ಆಟಗಾರರ ಭವಿಷ್ಯ ನವೆಂಬರ್ 15ಕ್ಕೆ ನಿರ್ಧಾರ, ಅಂತಿಮ ಪಟ್ಟಿ ನೀಡಲು ಬಿಸಿಸಿಐ ಸೂಚನೆ