ಫುಕೆಟ್(ಥಾಯ್ಲೆಂಡ್): ಟೋಕಿಯೋ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತ ವೇಟ್ ಲಿಫ್ಟರ್ ಮೀರಾಬಾಯಿ ಚಾನು ಅವರು ಆಗಸ್ಟ್ 28ರಿಂದ ಆರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್‌ಗೆ(Paris Olympics 2024) ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸೋಮವಾರ ನಡೆದ ಐಡಬ್ಲ್ಯುಎಫ್ ವಿಶ್ವಕಪ್‌ನ ಮಹಿಳೆಯರ 49 ಕೆಜಿ ಗ್ರೂಪ್ ‘ಬಿ’ ವಿಭಾಗದಲ್ಲಿ ಮೂರನೇ ಸ್ಥಾನ ಪಡೆಯುವ ಮೂಲಕ ಅವರು ಈ ಸಾಧನೆ ಮಾಡಿದರು.
ಗಾಯದಿಂದಾಗಿ 6 ತಿಂಗಳ ಕಾಲ ಸ್ಪರ್ಧೆಯಿಂದ ದೂರ ಉಳಿದಿದ್ದ ಮೀರಾಬಾಯಿಗೆ ಪ್ಯಾರಿಸ್ ಒಲಿಂಪಿಕ್ಸ್ ಟಿಕೆಟ್ ಧೃಡಪಡಿಸಿಕೊಳ್ಳಲು ಐಡಬ್ಲ್ಯುಎಫ್ ವಿಶ್ವಕಪ್‌ನಲ್ಲಿ ಕಡ್ಡಾಯವಾಗಿ ಸ್ಪರ್ಧಿಸಬೇಕಾಗಿತ್ತು. ಹೀಗಾಗಿ ಅವರು ಈ ಕೂಟದಲ್ಲಿ ಕಣಕ್ಕಿಳಿದರು. ಒಟ್ಟು 184 ಕೆಜಿ (81ಕೆಜಿ+103ಕೆಜಿ)ತೂಕ ಎತ್ತಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟರು. ಕಳೆದ ವರ್ಷ ಸಪ್ಟೆಂಬರ್‌ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ವೇಳೆ ತೊಡೆಯ ಸ್ನಾಯುಬೇನೆಗೆ ತುತ್ತಾಗಿದ್ದ ಚಾನು ಆ ಬಳಿಕ ಯಾವುದೇ ಪ್ರಮುಖ ಕೂಟದಲ್ಲಿ ಪಾಲ್ಗೊಂಡಿರಲಿಲ್ಲ.
Mirabai Chanu Becomes The Only Indian Weightlifter To Qualify For Paris Olympics 2024 pic.twitter.com/3MhgOXUWkS
— Upsc Civil Services Exam (@UpscforAll) April 2, 2024
ಚಾನು ಪ್ಯಾರಿಸ್ ಒಲಿಂಪಿಕ್ಸ್ ನಲ್ಲಿ ಭಾಗವಹಿಸಲಿರುವ ಭಾರತದ ಏಕೈಕ ವೇಟ್ಲಿಫ್ಟರ್ ಆಗಿದ್ದಾರೆ. ಒಟ್ಟಾರೆಯಾಗಿ ಇದು ಅವರಿಗೆ ಮೂರನೇ ಒಲಿಂಪಿಕ್ಸ್ ಟೂರ್ನಿಯಾಗಿದೆ. ಕಳೆದ ಬಾರಿ ಟೋಕಿಯೊದಲ್ಲಿ ಭಾರತದ ಪದಕ ಖಾತೆಯನ್ನು ತೆರೆದದ್ದು ಚಾನು. ಈ ಬಾರಿ ಚಿನ್ನದ ಪದಕದೊಂದಿಗೆ ಮಿನುಗಲಿ ಎನ್ನುವುದು ಎಲ್ಲ ಭಾರತೀಯರ ಹಾರೈಕೆಯಾಗಿದೆ.
#Throwback to the day when Mirabai Chanu's grit won India a 🥈 medal at the Tokyo Olympics🗼
— The Bridge (@the_bridge_in) March 30, 2024
Can she do one better at #Paris2024 ❓pic.twitter.com/LQBBvSfhS1
ಜುಲೈ 26ಕ್ಕೆ ಒಲಿಂಪಿಕ್ಸ್ ಆರಂಭ
ಮಹತ್ವದ ಕ್ರೀಡಾಕೂಡವಾದ ಪ್ಯಾರಿಸ್ ಒಲಿಂಪಿಕ್ಸ್‌ನ(Paris Olympics 2024) ಉದ್ಘಾಟನಾ ಸಮಾರಂಭಕ್ಕೆ(paris olympics 2024 opening ceremony) ದಿನಾಂಕ ನಿಗದಿಯಾಗಿದೆ. ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮ ನೆರವೇರಲಿದೆ.
ಒಲಿಂಪಿಕ್ಸ್ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್ ವರೆಗೆ ಬೋಟ್‌ಗಳಲ್ಲೇ ಪರೇಡ್ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.
ಇದನ್ನೂ ಓದಿ Mirabai Chanu: ವಿಶ್ವ ಚಾಂಪಿಯನ್ಶಿಫ್ನಲ್ಲಿ ಭಾರ ಎತ್ತಲ್ಲ ಮೀರಾಬಾಯಿ ಚಾನು; ಕಾರಣ ಏನು?
ಒಲಿಂಪಿಕ್ಸ್ ಟೂರ್ನಿಯ(Paris Olympics 2024) ಹಾಕಿ ಪಂದ್ಯಾವಳಿಯ ವೇಳಾಪಟ್ಟಿ(Paris 2024 Olympics Hockey schedule) ಕಳೆದ ವಾರ ಪ್ರಕಟಗೊಂಡಿತ್ತು. ಭಾರತೀಯ ಪುರುಷರ ತಂಡ(Indian Men’s Hockey Team) ತನ್ನ ಮೊದಲ ಪಂದ್ಯವನ್ನು ಜುಲೈ 27ರಂದು ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಭಾರತ ಈ ಸಲ ‘ಬಿ’ ಗುಂಪಿನಲ್ಲಿದೆ ಕಾಣಿಸಿಕೊಂಡಿದೆ. ಒಲಿಂಪಿಕ್ಸ್ ಇತಿಹಾಸವನ್ನೊಮ್ಮೆ ಕೆದಕಿದರೆ ಪುರುಷರ ಹಾಕಿಯಲ್ಲಿ 8 ಬಾರಿ ಸ್ವರ್ಣ ಗೆದ್ದ ಏಕೈಕ ತಂಡವೆಂಬ ಹೆಗ್ಗಳಿಕೆ ಭಾರತ ಉಳಿಸಿಕೊಂಡಿದೆ. ಭಾರತ ತಂಡ ಜುಲೈ 29ರಂದು ಅರ್ಜೆಂಟೀನಾ, 30ರಂದು ಐರ್ಲೆಂಡ್, ಆಗಸ್ಟ್ 1ರಂದು ಬೆಲ್ಜಿಯಂ, ಆಗಸ್ಟ್ 2ರಂದು ಆಸ್ಟ್ರೇಲಿಯಾ ವಿರುದ್ಧ ಆಡಲಿದೆ.