Site icon Vistara News

Mirabai Chanu: ವಿಶ್ವ ಚಾಂಪಿಯನ್​ಶಿಫ್​ನಲ್ಲಿ​ ಭಾರ ಎತ್ತಲ್ಲ ಮೀರಾಬಾಯಿ ಚಾನು; ಕಾರಣ ಏನು?

Mirabai Chanu wins India’s first gold medal at CWG 2022 in Birmigham

ನವದೆಹಲಿ: ಭಾರತದ ಭರವಸೆಯ ಲಿಫ್ಟರ್‌ ಮೀರಾಬಾಯಿ ಚಾನು(Mirabai Chanu) ಅವರು ಏಷ್ಯನ್ ಗೇಮ್ಸ್​(Asian Games) ಕ್ರೀಡಾಕೂಟದಲ್ಲಿ ಪದಕ ಗೆಲ್ಲುವ ನಿರೀಕ್ಷೆ ಇದ್ದರೂ ಅವರು ಕೇವಲ ಹಾಜಾರಾತಿಗೆ ಟೂರ್ನಿಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಲ್ಲದೆ ವಿಶ್ವ ಚಾಂಪಿಯನ್​ಶಿಪ್​ನಲ್ಲಿ(World Championships) ಭಾರ ಎತ್ತದಿರಲು ನಿರ್ಧರಿಸಿದ್ದಾರೆ. ಪ್ಯಾರಿಸ್​ ಒಲಿಂಪಿಕ್ಸ್(Paris Olympics)​ ದೃಷ್ಟಿಯಲ್ಲಿ ಗಾಯವನ್ನು ತಪ್ಪಿಸುವ ಸಲುವಾಗಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಒಲಿಂಪಿಕ್ಸ್ ಟೂರ್ನಿಯಲ್ಲಿ ಭಾಗವಹಿಸಲು ಏಷ್ಯನ್​ ಗೇಮ್ಸ್​ ಮತ್ತು ವಿಶ್ವ ಚಾಂಪಿಯನ್​ಶಿಪ್ ಟೂರ್ನಿಯಲ್ಲಿ ಪಾಲ್ಗೊಳ್ಳುವ ಕಡ್ಡಾಯ ಮಾನದಂಡದ ಕಾರಣ ಅವರು ಈ ಎರಡು ಮಹತ್ವದ ಟೂರ್ನಿಗೆ ಹೆಸರು ನೊಂದಾಯಿಸಿದ್ದಾರೆ. ಆದರೆ ವೇಟ್​ಲಿಫ್ಟಿಂಗ್​ ಮಾಡುವುದಿಲ್ಲ ಎಂದು ಅವರ ಕೋಚ್​ ವಿಜಯ್ ಶರ್ಮಾ(Vijay Sharma) ಪಿಟಿಐಗೆ ತಿಳಿಸಿದ್ದಾರೆ. ಏಷ್ಯನ್ ಗೇಮ್ಸ್ ಕೂಟ ಚೀನಾದ ಹ್ಯಾಂಗ್ಚೂ ನಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 8ರವರೆಗೆ ನಡೆಯಲಿದೆ.

ಕೇವಲ ಪಾಲ್ಗೊಳ್ಳುವಿಕೆ

“ಏಷ್ಯನ್ ಗೇಮ್ಸ್ ಮತ್ತು ವಿಶ್ವ ಚಾಂಪಿಯನ್‌ಶಿಪ್‌ಗಳ ನಡುವೆ ಬಹಳ ಕಡಿಮೆ ಸಮಯವಿದೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಡ್ಡಾಯ ಭಾಗವಹಿಸುವಿಕೆ ಇರುವುದರಿಂದ, ಮೀರಾಬಾಯಿ ಈ ಟೂರ್ನಿಗೆ ಪ್ರಯಾಣಿಸಿ ದೇಹದ ತೂಕವನ್ನು ಮಾತ್ರ ನೀಡಲು ನಿರ್ಧರಿಸಿದ್ದೇವೆ” ಎಂದು ಕೋಚ್ ಶರ್ಮಾ ತಿಳಿಸಿದ್ದಾರೆ.

ಇದನ್ನೂ ಓದಿ Mirabai Chanu | ವೇಟ್​ ಲಿಫ್ಟಿಂಗ್ ವಿಶ್ವ ಚಾಂಪಿಯನ್​ಶಿಪ್​; ಬೆಳ್ಳಿ ಗೆದ್ದ ಮೀರಾಬಾಯಿ ಚಾನು

Indian weightlifter Chanu Saikhom Mirabai


ಡೋಪ್ ಪರೀಕ್ಷೆಗೂ ಸಿದ್ಧ

ಅಗತ್ಯವಿದ್ದರೆ ಡೋಪ್ ಪರೀಕ್ಷೆಯನ್ನು ನೀಡುವಂತಹ ಎಲ್ಲ ಕಡ್ಡಾಯ ಪ್ರೋಟೋಕಾಲ್‌ಗಳನ್ನು ಮೀರಾಬಾಯಿ ಪೂರ್ಣಗೊಳಿಸಲು ಸಿದ್ಧರಿದ್ದಾರೆ. ಆದರೆ ಅವರು ಯಾವುದೇ ಕಾರಣಕ್ಕೂ ತೂಕವನ್ನು ಎತ್ತುವುದಿಲ್ಲ. ಅವರು ಭಾಗವಹಿಸಲು ಮಾತ್ರ ಅಲ್ಲಿಗೆ ಹೋಗುತ್ತಿದ್ದಾರೆ. ಅವರು 60 ಕೆಜಿಯ ಪ್ರವೇಶ ತೂಕವನ್ನು ನೋಂದಾಯಿಸಿದ್ದಾರೆ . ಅದರ ಆಧಾರದ ಮೇಲೆ ಅವರು ಸ್ಪರ್ಧೆಯ ಡಿ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ ಎಂದು ಕೋಚ್​ ವಿಜಯ್ ಶರ್ಮಾ ತಿಳಿಸಿದ್ದಾರೆ. ಅತಿ ಹೆಚ್ಚು ಪ್ರವೇಶ ತೂಕವನ್ನು ನೋಂದಾಯಿಸುವ ಲಿಫ್ಟರ್‌ಗಳನ್ನು ಗುಂಪು A ಮತ್ತು ಆನಂತರದ ತೂಕವನ್ನು B ಗುಂಪಿನಲ್ಲಿ ಇರಿಸಲಾಗಿದೆ.

Indian weightlifter Chanu Saikhom Mirabai


ಗಾಯದ ನಡುವೆಯೂ ಬೆಳ್ಳಿ ಗೆದ್ದಿದ್ದ ಚಾನು

2017 ರಲ್ಲಿ ವಿಶ್ವ ಚಾಂಪಿಯನ್‌ಶಿಪ್‌ ಗೆದ್ದ ಬಳಿಕ, ಚಾನು ಈ ಟೂರ್ನಿಯಿಂದ ಹೊರಗುಳಿಯುತ್ತಿದ್ದರು. ಆದರೆ 2024ರ ಒಲಿಂಪಿಕ್ ಅರ್ಹತಾ ನಿಯಮದ ಅಡಿಯಲ್ಲಿ, 2023ರ ವಿಶ್ವ ಚಾಂಪಿಯನ್‌ಶಿಪ್ ಮತ್ತು 2024ರ ವಿಶ್ವಕಪ್‌ನಲ್ಲಿ ಕಡ್ಡಾಯವಾಗಿ ಸ್ಪರ್ಧಿಸಬೇಕಾಗುತ್ತದೆ ಹೀಗಾಗಿ ಅವರು ಈ ಟೂರ್ನಿಯಲ್ಲಿ ಪಾಲ್ಗೊಂಡರೂ ಭಾರ ಎತ್ತಲು ಹಿಂದೇಟು ಹಾಕಿದ್ದಾರೆ. ಕಳೆದ ವರ್ಷ ಅವರು ಮಣಿಕಟ್ಟಿನ ಗಾಯದ ನಡುವೆಯೂ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದು ಮಿನುಗಿದ್ದರು. ಟೋಕಿಯೊ ಒಲಿಂಪಿಕ್ಸ್‌ನಲ್ಲಿ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಜಯಿಸಿದ್ದ ಮೀರಾಬಾಯಿ ಚಾನು ಮೇಲೆ ಮುಂದಿನ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ ಪದಕ ಭರವಸೆ ಇರಿಸಲಾಗಿದೆ.

Exit mobile version