ಬೊಗೊಟಾ: ಕೊಲಂಬಿಯಾದ ಬೊಗೊಟಾದಲ್ಲಿ ನಡೆದ 2022ರ ವಿಶ್ವ ವೇಟ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಟೋಕಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ, ಭಾರತದ ಮೀರಾಬಾಯಿ ಚಾನು(Mirabai Chanu) ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.
ಬುಧವಾರ ಇಲ್ಲಿ ನಡೆದ 49 ಕೆಜಿ. ವಿಭಾಗದಲ್ಲಿ ಒಟ್ಟು 200 ಕೆಜಿ ಭಾರ ಎತ್ತಿದ ಮೀರಾಬಾಯಿ ಚಾನು ಅವರು ಟೋಕಿಯೊ ಒಲಿಂಪಿಕ್ ಚಾಂಪಿಯನ್ ಚೀನಾದ ಹೋವ್ ಝಿಹು ಅವರನ್ನು ಮಣಿಸಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಮಣಿಕಟ್ಟಿನ ಗಾಯದ ಸಮಸ್ಯೆಯ ಹೊರತಾಗಿಯೂ ಪ್ರಭಾವಿ ಪ್ರದರ್ಶನ ನೀಡಿದ ಚಾನು, ಸ್ನ್ಯಾಚ್ ವಿಭಾಗದಲ್ಲಿ 87 ಕೆಜಿ ಮತ್ತು ಕ್ಲೀನ್ ಆ್ಯಂಡ್ ಜೆರ್ಕ್ ವಿಭಾಗದಲ್ಲಿ 113 ಕೆಜಿ ಭಾರ ಎತ್ತುವಲ್ಲಿ ಮೇಲುಗೈ ಸಾಧಿಸಿದರು.
ಈ ವಿಭಾಗದಲ್ಲಿ ಒಟ್ಟು 206 ಕೆಜಿ ಭಾರ ಎತ್ತಿದ (93 +113 ಕೆಜಿ) ಚೀನಾದ ಜಿಯಾಂಗ್ ಹುಯಿಹುವಾ, ಚಿನ್ನದ ಪದಕ ಜಯಿಸಿದರು. ಒಲಿಂಪಿಕ್ ಚಾಂಪಿಯನ್ ಚೀನಾದವರೇ ಆದ ಹೋವ್ ಝಿಹು ಕಂಚಿನ ಪದಕ ( ಒಟ್ಟು 198 ಕೆಜಿ) ಗೆದ್ದರು.
ಇದು ಮೀರಾಬಾಯಿ ಚಾನು ಅವರಿಗೆ ಎರಡನೇ ವಿಶ್ವ ಚಾಂಪಿಯನ್ ಪದಕವಾಗಿದೆ. ಈ ಹಿಂದೆ 2017ರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ 194 ಕೆಜಿ (85+109 keji) ಭಾರ ಎತ್ತಿ ಚಿನ್ನದ ಪದಕ ಜಿಯಿಸಿದ್ದರು.
ಇದನ್ನೂ ಓದಿ | CWG- 2022 | ಲವ್ಲಿನಾ ಬೊರ್ಗೊಹೈನ್ ಕ್ವಾರ್ಟರ್‌ಫೈನಲ್ಸ್‌ಗೆ