Site icon Vistara News

ಟೀಮ್​ ಇಂಡಿಯಾದ ಮೂವರು ಯುವ ಆಟಗಾರರನ್ನು ಭೇಟಿಯಾದ ವಿಶ್ವ ಸುಂದರಿ

ache abrahams with team india player

ಪೋರ್ಟ್‌ ಆಫ್‌ ಸ್ಪೇನ್‌: ವೆಸ್ಟ್ ಇಂಡೀಸ್(IND vs WI)​ ವಿರುದ್ಧ ಟೆಸ್ಟ್​ ಪಂದ್ಯ ಆಡುತ್ತಿರುವ ಟೀಮ್​ ಇಂಡಿಯಾದ ಮೂವರು ಆಟಗಾರರನ್ನು ಟ್ರಿನಿಡಾಡ್ & ಟೊಬಾಗೊ ವಿಶ್ವ ಸುಂದರಿ ಆಚೆ ಅಬ್ರಹಾಮ್ಸ್(Miss World T&T Ache Abrahams) ಭೇಟಿಯಾಗಿದ್ದಾರೆ. ಇವರ ಭೇಟಿಯ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದು ಮಾಡುತ್ತಿದೆ. ಯುವ ಆಟಗಾರರಾದ ಶುಭಮನ್​ ಗಿಲ್(Shubman Gill) ,ಯಶಸ್ವಿ ಜೈಸ್ವಾಲ್(Yashasvi Jaiswal)​ ಮತ್ತು ಇಶಾನ್​ ಕಿಶನ್(Ishan Kishan)​ ಅವರನ್ನು ಭೇಟಿ ಮಾಡಿ ಸಂತಸಗೊಂಡಿದ್ದೇನೆ ಎಂದಿದ್ದಾರೆ.

ಟೀಮ್​ ಇಂಡಿಯಾದ ಈ ಮೂವರು ಆಟಗಾರರನ್ನು ಭೇಟಿಯಾದ ಫೋಟೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಆಚೆ ಅಬ್ರಹಾಮ್ಸ್ “ಟೀಮ್ ಇಂಡಿಯಾದ ಶ್ರೇಷ್ಠ ಆಟಗಾರರನ್ನು ಸುಂದರ ಟ್ರಿನಿಡಾಡ್ & ಟೊಬಾಗೊದಲ್ಲಿ ಭೇಟಿಯಾಗಿದ್ದು ನನಗೆ ತುಂಬಾ ಸಂತೋಷವಾಯಿತು! ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್ ಮತ್ತು ಶುಭಮನ್​ ಗಿಲ್ ಅವರ ಉತ್ಸಾಹವನ್ನು ನೋಡುವುದು ನಿಜಕ್ಕೂ ನನಗೆ ಸ್ಫೂರ್ತಿ ನೀಡುತ್ತದೆ. ನಾನು ಈ ವರ್ಷದ ನಂತರ ಭಾರತಕ್ಕೆ ಹೋಗುತ್ತಿರುವ ಬಗ್ಗೆ ನನ್ನ ಆಸೆಯನ್ನು ಅವರೊಂದಿಗೆ ಹಂಚಿಕೊಂಡಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

ಹಿಡಿತ ಸಾಧಿಸಿದ ವಿಂಡೀಸ್​

ಮೊದಲ ಟೆಸ್ಟ್‌ನ ಎರಡೂ ಇನ್ನಿಂಗ್ಸ್‌ನಲ್ಲಿ ಪೆವಿಲಿಯನ್‌ ಪರೇಡ್‌ ನಡೆಸಿ 150ರ ಗಡಿ ದಾಟಲು ವಿಫಲವಾಗಿದ್ದ ವಿಂಡೀಸ್‌ ಬ್ಯಾಟರ್‌ಗಳು 2ನೇ ಟೆಸ್ಟ್‌ನಲ್ಲಿ(IND vs WI) ತಿರುಗಿ ಬಿದ್ದಿದ್ದಾರೆ. ಭಾರತದ 438 ರನ್‌ಗೆ ಉತ್ತರವಾಗಿ ಮೂರನೇ ದಿನದಾಟದಂತ್ಯದ ಅಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 229 ರನ್ ಬಾರಿಸಿ ಪ್ರತಿ ಹೋರಾಟ ನಡೆಸುತ್ತಿದೆ. ಸದ್ಯ ಭಾರತದ ಮೊತ್ತವನ್ನು ಮೀರಿಸಲು ವಿಂಡೀಸ್​ಗೆ ಇನ್ನು 209 ರನ್‌ಗಳ ಅಗತ್ಯವಿದೆ.

ವಿಂಡೀಸ್‌ ಒಂದು ವಿಕೆಟಿಗೆ 86 ರನ್‌ ಮಾಡಿದಲ್ಲಿಂದ ಶನಿವಾರದ ಆಟ ಮುಂದುವರಿಸಿತ್ತು. ನಾಯಕ ಕ್ರೆಗ್‌ ಬ್ರಾತ್‌ವೇಟ್‌ (73) ಮತ್ತು ಕರ್ಕ್‌ ಮೆಕೆಂಝಿ(35) ಉತ್ತಮ ಆಟಗಾಡುವ ಮೂಲಕ ತಂಡಕ್ಕೆ ಆಸರೆಯಾದರು. 10.4 ಓವರ್‌ ಆಟ ಮುಗಿದ ಕೂಡಲೇ ಮಳೆ ಸುರಿದ ಕಾರಣ 1 ಗಂಟೆಗೂ ಹೆಚ್ಚು ಕಾಲ ಆಟ ಸ್ಥಗಿತಗೊಂಡಿತು. ಹೀಗಾಗಿ ನಿಗದಿತ ಸಮಯಕ್ಕೂ ಮೊದಲೇ ಅಂಪೈರ್‌ಗಳು ಭೋಜನ ವಿರಾಮ ಘೋಷಿಸಿದರು. ಕರ್ಕ್‌ ಮೆಕೆಂಝಿ ವಿಕೆಟ್​ ಕಿತ್ತ ಮುಕೇಶ್‌ ಕುಮಾರ್‌ ಚೊಚ್ಚಲ ಪಂದ್ಯದಲ್ಲಿ ವಿಕೆಟ್​ ಖಾತೆ ತೆರೆದರು. ಕ್ರೇಗ್ ಬ್ರಾಥ್‌ವೇಟ್ ವಿಕೆಟ್​ ಅಶ್ವಿನ್​ ಪಲಾಯಿತು.

Exit mobile version