Site icon Vistara News

Mitchell Marsh: ಆಸ್ಟ್ರೇಲಿಯಾ ಟಿ20 ತಂಡಕ್ಕೆ ಮಿಚೆಲ್​ ಮಾರ್ಷ್ ನೂತನ ನಾಯಕ

Mitchell Marsh

ಸಿಡ್ನಿ: ಮುಂಬರುವ ಟಿ20 ವಿಶ್ವಕಪ್​ಗೆ(T20 World Cup 2024) ಮುನ್ನ ಆಸ್ಟ್ರೇಲಿಯಾ, ಟಿ20 ತಂಡಕ್ಕೆ ನೂತನ ನಾಯಕನನ್ನು ಆಯ್ಕೆ ಮಾಡಿದೆ. ಆ್ಯರನ್​ ಪಿಂಚ್​ ಅವರಿಂದ ತೆರವಾದ ಈ ಸ್ಥಾನಕ್ಕೆ ಇದುವರೆಗೆ ಖಾಯಂ ನಾಯಕನ ನೇಮಕಗೊಂಡಿರಲಿಲ್ಲ. ಇದೀಗ ಈ ಸ್ಥಾನಕ್ಕೆ ಆಲ್​ ರೌಂಡರ್​ ಮಿಚೆಲ್​ ಮಾರ್ಷ್​ ಆಯ್ಕೆಯಾಗಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಮೂಲಕ ಅವರ ಕಾರ್ಯಾವಧಿ ಆರಂಭಗೊಳ್ಳಲಿದೆ.

ದಕ್ಷಿಣ ಆಫ್ರಿಕಾ ಸರಣಿಗೆ ಪ್ರಕಟಗೊಂಡ ತಂಡದಲ್ಲಿ ಎಡಗೈ ವೇಗಿ ಸ್ಪೆನ್ಸರ್ ಜಾನ್ಸನ್ ಅವರು ಮೊದಲ ರಾಷ್ಟ್ರೀಯ ತಂಡದ ಕರೆ ಪಡೆದಿದ್ದಾರೆ. ಇವರ ಜತೆಗೆ ಆ್ಯರೋನ್ ಹಾರ್ಡಿ ಮತ್ತು ಮ್ಯಾಟ್ ಶಾರ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉಭಯ ತಂಡಗಳ ಮೂರು ಪಂದ್ಯದ ಈ ಸರಣಿ ಆಗಸ್ಟ್​ 30ರಿಂದ ಆರಂಭಗೊಳ್ಳಲಿದೆ. ಈ ಸರಣಿಯ ಮೂಲಕವೇ ಮುಂದಿನ ವರ್ಷ ಅಮೆರಿಕ ಮತ್ತು ವಿಂಡೀಸ್​ ಜಂಟಿ ಆತಿಥ್ಯದಲ್ಲಿ ನಡೆಯುವ ಟಿ20ಗೆ ಬಲಿಷ್ಠ ತಂಡವನ್ನು ರಚಿಸುವುದು ಕ್ರಿಕೆಟ್​ ಆಸ್ಟ್ರೇಲಿಯಾದ ಯೋಜನೆಯಾಗಿದೆ. ಟಿ20 ಸರಣಿ ಮುಕ್ತಾಯದ ಬಳಿಕ 5 ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

“ಮಿಚೆಲ್​ ಮಾರ್ಷ್​ ಅವರು ಬಹಳ ವರ್ಷಗಳಿಂದ ವೈಟ್-ಬಾಲ್ ಕ್ರಿಕೆಟ್​ ಆಡುತ್ತಿದ್ದಾರೆ. ಅಪಾರ ಅನುಭವವನ್ನು ಹೊಂದಿದ್ದಾರೆ. ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ನಾಯಕತ್ವದ ಕೌಶಲ್ಯಗಳನ್ನು ತೋರ್ಪಡಿಸಲು ಅವರಿಗೆ ಸಿಕ್ಕ ಉತ್ತಮ ಅವಕಾಶವಾಗಿದೆ. ದಕ್ಷಿಣ ಆಫ್ರಿಕಾ ಸರಣಿ ಮೂಲಕ ಅವರ ಯಶಸ್ಸಿನ ಹೆಜ್ಜೆ ಇಡುವುದನ್ನು ನಾವು ಎದುರು ನೋಡುತ್ತಿದ್ದೇವೆ” ಎಂದು ರಾಷ್ಟ್ರೀಯ ಆಯ್ಕೆಗಾರ ಜಾರ್ಜ್ ಬೈಲಿ ಹೇಳಿದ್ದಾರೆ.

ಇದನ್ನೂ ಓದಿ ICC World Cup: ಏಕದಿನ ವಿಶ್ವಕಪ್​ಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಆಸ್ಟ್ರೇಲಿಯಾ ಟಿ20 ತಂಡ

ಮಿಚೆಲ್ ಮಾರ್ಷ್ (ನಾಯಕ), ಸೀನ್ ಅಬಾಟ್, ಜೇಸನ್ ಬೆಹ್ರೆನ್‌ಡಾರ್ಫ್, ಟಿಮ್ ಡೇವಿಡ್, ನಾಥನ್ ಎಲ್ಲಿಸ್, ಆ್ಯರನ್ ಹಾರ್ಡಿ, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಸ್, ಸ್ಪೆನ್ಸರ್ ಜಾನ್ಸನ್, ಗ್ಲೆನ್ ಮ್ಯಾಕ್ಸ್‌ವೆಲ್, ಮ್ಯಾಟ್ ಶಾರ್ಟ್, ಸ್ಟೀವನ್ ಸ್ಮಿತ್, ಮಾರ್ಕಸ್ ಸ್ಟೊಯಿನಿಸ್, ಆ್ಯಡಂ ಜಂಪಾ.

Exit mobile version