Site icon Vistara News

Women’s Indian Premier League : ಗುಜರಾತ್ ತಂಡಕ್ಕೆ ಮೆಂಟರ್ ಆಗಿ ನೇಮಕಗೊಂಡ ಮಿಥಾಲಿ ರಾಜ್​

ಮುಂಬಯಿ : ಭಾರತ ಮಹಿಳೆಯರ ಕ್ರಿಕೆಟ್​ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್​ ಅವರಿಗೆ ಹೊಸ ಹುದ್ದೆಯನ್ನು ಕಲ್ಪಿಸಿಕೊಟ್ಟಿದೆ ಉದ್ಘಾಟನಾ ಆವೃತ್ತಿಯ ಮಹಿಳೆಯ ಐಪಿಎಲ್​ (Women’s Indian Premier League). ಹಿರಿಯ ಆಟಗಾರ್ತಿ ಹಾಗೂ ಹಲವು ದಾಖಲೆಗಳ ಒಡತಿಯಾಗಿರುವ ಅವರು ಮಹಿಳೆಯರ ಐಪಿಎಲ್​ನಲ್ಲಿ ಗುಜರಾತ್​ ಜಯಂಟ್ಸ್​ ತಂಡದ ಮಾರ್ಗದರ್ಶಕರಾಗಿ (ಮೆಂಟರ್​) ಆಗಿ ನೇಮಕಗೊಂಡಿದ್ದಾರೆ. ಈ ಮೂಲಕ ಅನುಭವಿ ಕ್ರಿಕೆಟ್ ಆಟಗಾರ್ತಿಗೆ ಗೌರವ ಲಭಿಸಿದೆ ಹಾಗೂ ಯುವ ಆಟಗಾರ್ತಿಯರಿಗೆ ಅವರಿಂದ ಕಲಿಯುವ ಅವಕಾಶ ದೊರಕಿದೆ.

ಮಿಥಾಲಿ ರಾಜ್ ಭಾರತ ತಂಡದ ಪರ 23 ವರ್ಷಕ್ಕೂ ಅಧಿಕ ಕಾಲ ಆಡಿದ್ದರು. ಅಲ್ಲದೆ ಮಹಿಳಾ ಕ್ರಿಕೆಟ್​ನಲ್ಲಿ ಅತ್ಯಧಿಕ ರನ್ ಗಳಿಸಿದ ದಾಖಲೆ ಅವರ ಹೆಸರಿಲ್ಲಿನಲ್ಲಿದೆ. 40 ವರ್ಷದ ಅವರು ಇತ್ತೀಚೆಗೆ ಕ್ರಿಕೆಟ್​ನಿಂದ ನಿವೃತ್ತಿ ಪಡೆದುಕೊಂಡಿದ್ದರು. ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದ ಗುಜರಾತ್​ ತಂಡದ ಫ್ರಾಂಚೈಸಿ.

ಇದನ್ನೂ ಓದಿ : Women’s IPL | ಚೊಚ್ಚಲ ಆವೃತ್ತಿಯ ಮಹಿಳೆಯರ ಐಪಿಎಲ್​ ಆಡುವ ನಿರೀಕ್ಷೆಯಲ್ಲಿ ಮಿಥಾಲಿ ರಾಜ್​, ಜೂಲನ್ ಗೋಸ್ವಾಮಿ!

ಇದೇ ಮೊದಲ ಬಾರಿಗೆ ಮಹಿಳೆಯರ ಐಪಿಎಲ್ ನಡೆಯುತ್ತಿದೆ. ಇದು ಮಹಿಳೆಯರ ಕ್ರಿಕೆಟ್​ ಬೆಳವಣಿಗೆಗೆ ಪೂರಕ. ಅದಾನಿ ಸಮೂಹದ ಜತೆ ಪಾಲುದಾರಿಕೆಯನ್ನು ಪಡೆಯಲು ನಾನು ಉತ್ಸುಕನಾಗಿದ್ದೇನೆ ಎಂಬುದಾಗಿದ ಮಿಥಾಲಿ ರಾಜ್ ಅವರು ತಮ್ಮ ಆಯ್ಕೆ ಕುರಿತು ಮಾತನಾಡಿದ್ದಾರೆ.

Exit mobile version