ವಾಷಿಂಗ್ಟನ್: ಅಮೆರಿಕ ಮೂಲದ ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ(MLC 2023) ಆರ್ಸಿಬಿ ತಂಡದ ನಾಯಕ ಫಾಫ್ ಡು ಪ್ಲೆಸಿಸ್(faf du plessis) ಅವರು ತಮ್ಮ ಹಳೆಯ ಚೆನ್ನೈ ಫ್ರಾಂಚೈಸಿ ಮಾಲೀಕತ್ವದ ಟೆಕ್ಸಸ್ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸಲಿದ್ದಾರೆ. ತಂಡದ ಕೋಚ್ ಆಗಿ ಸ್ಟೀಫೆನ್ ಫ್ಲೆಮಿಂಗ್ ಅವರೇ ಆಯ್ಕೆಯಾಗಿದ್ದಾರೆ. ಐಪಿಎಲ್ನಲ್ಲಿ ಕೂಡ ಅವರು ಚೆನ್ನೈ ತಂಡ ಕೋಚ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಡು ಪ್ಲೆಸಿಸ್ ಅವರು ಮೇಜರ್ ಕ್ರಿಕೆಟ್ ಲೀಗ್‌ನಲ್ಲಿ ಟೆಕ್ಸಸ್ ಸೂಪರ್ ಕಿಂಗ್ಸ್ ನಾಯಕರಾಗಿ ಆಯ್ಕೆಯಾದ ವಿಚಾರವನ್ನು ಸಿಎಸ್‌ಕೆ ಫ್ರಾಂಚೈಸಿ ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ತಿಳಿಸಿದೆ. ಟೆಕ್ಸಸ್ ಸೂಪರ್ ಕಿಂಗ್ಸ್ ಪರ ಆಡುವ ವಿಚಾರವನ್ನು ವಿಡಿಯೊ ಮೂಲಕ ತಿಳಿಸಿರುವ ಡು ಪ್ಲೆಸಿಸ್, “ಮತ್ತೆ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಪರ ಆಡಲು ಎದುರುನೋಡುತ್ತಿದ್ದೇನೆ. ಈ ಫ್ರಾಂಚೈಸಿಗೆ ನನ್ನ ಬೆಂಬಲ ಸದಾ ಇರಲಿದೆ. ಟೆಕ್ಸಸ್ ತಂಡವನ್ನು ಶಿಳ್ಳೆ ಹೊಡೆದು ಹುರಿದುಂಬಿಸಿ” ಎಂದು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ.
ಮೇಜರ್ ಲೀಗ್ ಕ್ರಿಕೆಟ್ ಟೂರ್ನಿ ಜುಲೈ 13 ರಿಂದ ಆರಂಭಗೊಳ್ಳಿದೆ. ಉದ್ಘಾಟನ ಪಂದ್ಯದಲ್ಲಿ ಟೆಕ್ಸಸ್ ಸೂಪರ್ ಕಿಂಗ್ಸ್ ಹಾಗೂ ಲಾಸ್ ಏಂಜಲೀಸ್ ನೈಟ್ ರೈಡರ್ಸ್ ವಿರುದ್ಧ ಪಂದ್ಯ ನಡೆಯಲಿದೆ. ಜುಲೈ 30 ರಂದು ಫೈನಲ್ ಪಂದ್ಯ ಆಯೋಜಿಸಲಾಗಿದೆ. ಎಂಐ ನ್ಯೂಯಾರ್ಕ್, ವಾಷಿಂಗ್ಟನ್ ಫ್ರೀಡಂ ಸೇರಿದಂತೆ ಒಟ್ಟು 6 ತಂಡಗಳು ಇಲ್ಲಿ ಕಾದಾಟ ನಡೆಸಲಿವೆ.
ಇದನ್ನೂ ಓದಿ IPL 2023: ಚೆನ್ನೈ ತಂಡಕ್ಕೆ ಶುಭಕೋರುವ ಮೂಲಕ ಆರ್ಸಿಬಿ, ವಿರಾಟ್ ಟ್ರೋಲ್ ಮಾಡಿದ ಗಂಭೀರ್
ಈ ಆವೃತ್ತಿಯ ಐಪಿಎಲ್ನಲ್ಲಿ ಆರ್ಸಿಬಿ ಪರ ಉತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ್ದ ಡು ಪ್ಲೆಸಿಸ್ ಇದೀಗ ಈ ಟೂರ್ನಿಯಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರತಾಪವನ್ನು ತೋರಿಸುವ ವಿಶ್ವಾಸದಲ್ಲಿದ್ದಾರೆ. ಈ ಬಾರಿ 14 ಪಂದ್ಯಗಳಿಂದ 8 ಅರ್ಧಶತಕ ಸಿಡಿಸಿ 730 ರನ್ ಬಾರಿಸಿದ್ದರು. ಈ ಮೂಲಕ ಕೂಟದಲ್ಲಿ ಅತಿ ಹೆಚ್ಚು ರನ್‌ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದರು. ಗಿಲ್ ಮೊದಲಿಗ.