Site icon Vistara News

Ashes 2023 : ಟೆಸ್ಟ್​ ನಿವೃತ್ತಿ ವಾಪಸ್ ಪಡೆದ ಮೊದಲ ಪಂದ್ಯದಲ್ಲಿಯೇ ಮೊಯೀನ್ ಅಲಿಗೆ ಗಾಯ!

Moeen Ali

#image_title

ಬರ್ಮಿಂಗ್ಹಮ್​: ಎಜ್​​ಬಾಸ್ಟನ್​​ನಲ್ಲಿ ನಡೆಯುತ್ತಿರುವ ಆ್ಯಷಸ್ ಸರಣಿಯ ಐದನೇ ದಿನದಾಟದಲ್ಲಿ ಆಲ್ ರೌಂಡರ್ ಮೊಯೀನ್ ಅಲಿ ಗಾಯಗೊಂಡಿದ್ದಾರೆ. ಇಂಗ್ಲೆಂಡ್ ತಂಡಕ್ಕೆ ಭಾರಿ ಆಘಾತವಾಗಿದೆ. ನಾಲ್ಕನೇ ಇನ್ನಿಂಗ್ಸ್​​ನಲ್ಲಿ ನಿರ್ಣಾಯಕ ಪಾತ್ರ ವಹಿಸುವ ನಿರೀಕ್ಷೆ ಹೊಂದಿದ್ದ ಮೊಯಿನ್ ಅವರ ತೋರುಬೆರಳಿಗೆ ಗಾಯವಾಗಿದೆ. ಹೀಗಾಗಿ ಅವರು ಬೌಲಿಂಗ್ ಮಾಡುವುದಕ್ಕೆ ಹೆಣಗಾಡಿದರು.

ಐಪಿಎಲ್​ನ ಸಿಎಸ್​ಕೆ ಆಟಗಾರನನ್ನು ಹೊರತುಪಡಿಸಿ ಇಂಗ್ಲೆಂಡ್​ ತಂಡದಲ್ಲಿ ಉತ್ತಮ ಸ್ಪಿನ್ ಬೌಲಿಂಗ್ ಆಯ್ಕೆಗಳಿಲ್ಲ. ನಾಲ್ಕನೇ ಇನಿಂಗ್ಸ್​ನಲ್ಲಿ ಅವರು ಮೈದಾನದಿಂದ ಹೊರಕ್ಕೆ ಉಳಿದ ಕಾರಣ ಜೋ ರೂಟ್ ಅರೆಕಾಲಿಕ ಆಫ್-ಸ್ಪಿನ್ ಬೌಲಿಂಗ್ ಮಾಡುತ್ತಾರೆ. ಆದರೆ ಅವರಯ ಮೊಯಿನ್ ಅವರಂತೆ ಚೆಂಡನ್ನು ಹೆಚ್ಚು ಸ್ಪಿನ್ ಮಾಡುವುದಿಲ್ಲ. ಆ್ಯಶಸ್ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಗೆಲ್ಲಲು ಇಂಗ್ಲೆಂಡ್​ಗೆ ಇನ್ನೂ ಏಳು ವಿಕೆಟ್​ಗಳ ಅಗತ್ಯವಿದೆ. ಮೊಯೀನ್ ಬೌಲಿಂಗ್ ಮಾಡದಿರುವುದು ಆತಿಥೇಯರಿಗೆ ಹಿನ್ನಡೆ ಉಂಟಾಗಬಹುದು.

ಆಫ್-ಸ್ಪಿನ್ನರ್ ಮೊಯಿನ್ ಅಲಿ ಎರಡು ವರ್ಷಗಳಿಂದ ಟೆಸ್ಟ್​ ಪಂದ್ಯಗಳಲ್ಲಿ ಆಡುತ್ತಿಲ್ಲ. ಹೀಗಾಗಿ ಅವರಿಗೆ ಸತತವಾಗಿ ಬೌಲಿಂಗ್ ಮಾಡುವುದು ಕಷ್ಟ ಎನಿಸಿದೆ. ಅದೇ ರೀತಿ ಅವರು ಟೆಸ್ಟ್​ ಕ್ರಿಕೆಟ್​ನಿಂದ ನಿವೃತ್ತಿಯೂ ಹೇಳಿದ್ದರು. ಆದರೆ, ಐದು ಪಂದ್ಯಗಳ ಸರಣಿಗೆ ಆಲ್​ರೌಂಡರ್​ ಒಬ್ಬರ ಅಗತ್ಯ ಬಿದ್ದ ಕಾರಣ ನಾಯಕ ಬೆನ್ ಸ್ಟೋಕ್ಸ್ ಒತ್ತಾಸೆಯಂತೆ ಅವರು ನಿವೃತ್ತಿಯನ್ನು ವಾಪಸ್ ಪಡೆದಿದ್ದರು. ಅವರ ಬಗ್ಗೆ ಆಸ್ಟ್ರೇಲಿಯಾದ ಆಫ್​ ಸ್ಪಿನ್ನರ್ ನೇಥನ್​ ಲಯಾನ್​ ಅವರು ಕೂಡ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ.

ಇದು ಸಾಕಷ್ಟು ಕಷ್ಟದ ಕೆಲಸ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಮೊಯೀನ್ ಅಲಿ ಬಗ್ಗೆ ಸಾಕಷ್ಟು ಸಹಾನುಭೂತಿ ಹೊಂದಿದ್ದೇನೆ. ಎರಡು ವರ್ಷಗಳ ಕಾಲ ಯಾವುದೇ ರೆಡ್-ಬಾಲ್ ಕ್ರಿಕೆಟ್​ ಪಂದ್ಯಗಳನ್ನು ಆಡದ ಅವರು ಸಾಕಷ್ಟು ಹೊತ್ತು ಬೌಲಿಂಗ್ ಮಾಡಲು ಯತ್ನಿಸಿದ್ದಾರೆ. ಅದು ಸುಲಭ ಕೆಲಸವಲ್ಲ ಎಂದು ಹೇಳಿದ್ದರು.

ಸಂಕ್ಷಿಪ್ತವಾಗಿ ಹೇಳಬಹುದಾದರೆ ಒಬ್ಬ ಗಾಯಕನು ತಮ್ಮ ಗಾಯನವನ್ನು ನಿಲ್ಲಿಸಿದ ಬಳಿಕ ಏಕಾಏಕಿ ಸಂಗೀತ ಕಚೇರಿ ನಡೆಸಲು ಮುಂದಾದಾ ಹಾಗಾಗಿದೆ ಮೊಯೀನ್ ಪರಿಸ್ಥಿತಿ. ಚೆಂಡನ್ನು ಹಿಡಿಯುವುದು ತುಂಬಾ ಕಷ್ಟ. ವಿಶೇಷವಾಗಿ ಆಫ್ ಸ್ಪಿನ್ನರ್ ಗಳಾಗಿ, ನಾವು ನಮ್ಮ ಬೆರಳುಗಳ ಮೇಳೆ ಹೆಚ್ಚು ನಿಯಂತ್ರಣ ಪಡೆದುಕೊಳ್ಳಬೇಕಾಗುತ್ತದೆ ಎಂದು ಮೊಯೀನ್​ ಅಲಿ ಹೇಳಿದ್ದಾರೆ.

ಇದನ್ನೂ ಓದಿ : Ashes 2023: ಸಚಿನ್​,ಕೊಹ್ಲಿಯ ದಾಖಲೆ ಮುರಿದ ಜೋ ರೂಟ್​

ಎಜ್​ಬಾಸ್ಟನ್​ ಟೆಸ್ಟ್​​ನ ಐದನೇ ದಿನದಂದು ಫಲಿತಾಂಶ ಪ್ರಕವಾಗುವ ಸಾಧ್ಯತೆಗಳಿವೆ. ಟೆಸ್ಟ್ ಪಂದ್ಯವನ್ನು ಗೆಲ್ಲಲು ಆಸ್ಟ್ರೇಲಿಯಾಕ್ಕೆ 174 ರನ್ ಗಳ ಅಗತ್ಯವಿದ್ದರೆ, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಲು ಇಂಗ್ಲೆಂಡ್ ಗೆ ಏಳು ವಿಕೆಟ್ ಗಳ ಅಗತ್ಯವಿದೆ.

Exit mobile version